For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯಾ ರೈ ಜೊತೆ ನಟನೆಗೆ ಅಭಿಷೇಕ್ ಒಲವು

  |

  ನಟ ಅಭಿಷೇಕ್ ಬಚ್ಚನ್ ಅಪ್ಪನಾದ ಮೇಲೆ ಮೊದಲ ಬಾರಿಗೆ ಐಶ್ವರ್ಯಾ ರೈ ನಟನೆ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ತಮ್ಮ ಪತ್ನಿ ಐಶ್ವರ್ಯಾ ರೈ ಜೊತೆ ಮತ್ತೆ ಚಿತ್ರದಲ್ಲಿ ಕೆಲಸ ಮಾಡುವ ಇಚ್ಛೆಯಾಗಿದೆಯಂತೆ. ಈ ಮೊದಲು ಕೆಲವು ಚಿತ್ರಗಳಲ್ಲಿ ಐಶೂ ಹಾಗೂ ಅಭಿ ಒಟ್ಟಾಗಿ ಕೆಲಸ ಮಾಡಿದ್ದಾರೆ.

  ಸದ್ಯದಲ್ಲೇ ಅಭಿಷೇಕ್ ಬಚ್ಚನ್ ನಟನೆಯ 'ಬೋಲ್ ಬಚ್ಚನ್' ಚಿತ್ರ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಅಭಿ ಜೊತೆ ಅಜಯ್ ದೇವಗನ್ ಕೂಡ ಇದ್ದಾರೆ. ಈ ಚಿತ್ರದ ಕುರಿತು ಮಾತನಾಡುತ್ತಾ ಸಂದರ್ಶನವೊಂದರಲ್ಲಿ ಅಭಿಷೇಕ್ ತಮ್ಮ ಪತ್ನಿ ಐಶೂ ಜೊತೆ ಕೆಲಸ ಮಾಡುವುದು ತಮಗೆ ಖುಷಿಯ ಕ್ಷಣಗಳು ಎಂದಿದ್ದಾರೆ.

  ಅಭಿಷೇಕ್ ಹಾಗೂ ಐಶ್ವರ್ಯಾ ರೈ, ಈ ಮೊದಲು ಗುರು, ರಾವಣ್ ಹಾಗೂ ಸರ್ಕಾರ್ ರಾಜ್ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಗುರು ಚಿತ್ರೀಕರಣದ ವೇಳೆಯಲ್ಲೇ ಇವರಿಬ್ಬರ ಮಧ್ಯೆ ಪ್ರೀತಿ ಪ್ರಾತಂಭವಾಗಿದ್ದು ಎನ್ನಲಾಗಿದೆ. ಒಟ್ಟಿನಲ್ಲಿ ಈಗ ಮಗುವಿನ ತಂದೆಯಾಗಿರುವ ಅಭಿಷೇಕ್ ತಮಗೆ ಪತ್ನಿಯ ಜೊತೆ ಚಿತ್ರ ಮಾಡುವ ಇಚ್ಛೆಯಿದೆ ಎಂದು ಹೇಳಿರುವುದು ಐಶೂ ಈ ಮೊದಲಿನಂತೆ ನಟಿಸಲಿದ್ದಾರೆ ಎಂಬುದಕ್ಕೆ ಸೂಚನೆ ಎನ್ನಬಹುದು.

  ಅಷ್ಟೇ ಅಲ್ಲ, ಅಭಿ "ತಮ್ಮ ಅಪ್ಪ ಅಮಿತಾಬ್, ಅಮ್ಮ ಜಯಾ ಬಚ್ಚನ್ ಹಾಗೂ ಪತ್ನಿ ಐಶ್ವರ್ಯಾ ರೈ ಹೀಗೆ ತಮ್ಮ ಸಮಸ್ತ ಕುಟುಂಬದ ಜೊತೆ ನಟಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ತಾವೇನೂ ಫ್ಯಾಮಿಲಿ ಪ್ಯಾಕೇಜ್ ಡೀಲ್ ಮಾಡುತ್ತಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಸಂಪೂರ್ಣ ಕುಟುಂಬದ ಜೊತೆ ನಟಿಸುವ ಆಸೆ ಅಭಿಗಿದೆ ಎನ್ನಬಹುದು.

  ಬರಲಿರುವ ಬೋಲ್ ಬಚ್ಚನ್ ಚಿತ್ರ ಅಭಿಗೆ ಬಾಲಿವುಡ್ ನಲ್ಲಿ ನಿರೀಕ್ಷಿತ ಸ್ಥಾನ ನೀಡಲು ಶಕ್ತವಾಗಬಹುದು ಎನ್ನಲಾಗುತ್ತಿದೆ. ಅಪ್ಪ ಅಮಿತಾಬ್ ಕೃಪಾಕಟಾಕ್ಷವಿದ್ದರೂ ಅಭಿಗೆ ಯಾಕೋ ಹೇಳಿಕೊಳ್ಳುವಂತಹ ಯಶಸ್ಸು ಇನ್ನೂ ಸಿಕ್ಕಿಲ್ಲ ಎನ್ನಬಹುದು. ಅಭಿಷೇಕ್ ಒಬ್ಬರಿಂದಲೇ ಚಿತ್ರ ಗೆದ್ದ ಉದಾಹರಣೆ ಅತೀ ಕಡಿಮೆಯೇ. ಬರಲಿರುವ ಬೋಲ್ ಬಚ್ಚನ್ ಚಿತ್ರದಲ್ಲೂ ಕೂಡ ಅಭಿ ಜೊತೆ ಅಜಯ್ ದೇವಗನ್ ಇದ್ದಾರೆ. (ಏಜೆನ್ಸೀಸ್)

  English summary
  Abhishek Bachchan would love to work with wife Aishwarya Rai as he had done a few best films with her.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X