»   » ಆರಾಧ್ಯಾ ಪ್ರದರ್ಶನದ ವಸ್ತುವಲ್ಲ; ಅಭಿಷೇಕ್ ಬಚ್ಚನ್

ಆರಾಧ್ಯಾ ಪ್ರದರ್ಶನದ ವಸ್ತುವಲ್ಲ; ಅಭಿಷೇಕ್ ಬಚ್ಚನ್

Posted By:
Subscribe to Filmibeat Kannada

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮಗ ಅಭಿಷೇಕ್ ಬಚ್ಚನ್, ಇದೀಗ ಬಹಳಷ್ಟು ಬಿಜಿ. ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿರುವ ಅವರೀಗ, ಆರಾಧ್ಯಾ ಎಂಬ ಪುಟ್ಟ ಹೆಣ್ಣುಮಗುವಿನ ತಂದೆಯಾಗಿಯೂ ಜಗತ್ತಿಗೆಲ್ಲಾ ಚಿರಪರಿಚಿತ. ಇದೀಗ, ಆರಾಧ್ಯಾ ಬಚ್ಚನ್ ನೋಡಲು ಜಗತ್ತೆಲ್ಲಾ ಕುತೂಹಲ ತಾಳಿರುವ ಸಮಯದಲ್ಲಿ ಅಭಿಷೇಕ್ ಈ ಕುರಿತು ಹೇಳಿಕೆಯೊಂದನ್ನು ನೀಡಿದ್ದಾರೆ.

ಬಚ್ಚನ್ ಕುಟುಂಬದ ಕುಡಿ ಆರಾಧ್ಯಾ ಬಚ್ಚನ್, 8 ತಿಂಗಳ ಮಗು. ಅವಳನ್ನು ನೋಡಲು ಎಲ್ಲರೂ ಕುತೂಹಲ ತಾಳಿದ್ದಾರೆ. ಅಭಿಷೇಕ್, ಐಶ್ವರ್ಯಾ ರೈ ಹಾಗೂ ಬಚ್ಚನ್ ಕುಟುಂಬದ ಯಾರೇ ಹೊರಗೆ ಸಿಕ್ಕರೂ ಜನರು ಮೊದಲು ಮಗುವನ್ನು ತಮಗೆ ತೋರಿಸಿಲ್ಲವೆಂದೇ ಆರೋಪ ಮಾಡುತ್ತಾರಂತೆ. ಮಗುವನ್ನು ತುಂಬಾ ರಹಸ್ಯವಾಗಿ ಬೆಳೆಸುತ್ತಿದ್ದೀರಿ ಎಂದು ವ್ಯಂಗ್ಯವಾಡುತ್ತಾರಂತೆ.

ಈ ಕುರಿತು ಅಭಿಷೇಕ್ "ನಮ್ಮ ಮಗು ಆರಾಧ್ಯಾಳನ್ನು ವಸ್ತುವಿನಂತೆ ನಾವು 'ಡಿಸ್ ಪ್ಲೇ' ಮಾಡಲು ಸಾಧ್ಯವಿಲ್ಲ. ಸಾಮಾನ್ಯ ಜನರು ಅವಳನ್ನು ನೋಡಲು ಮುಗಿಬೀಳುತ್ತಾರೆ. ಅದು ಸಹಜವೆಂದೂ ನಮಗೆ ತಿಳಿದಿದೆ. ಆದರೆ ಅಷ್ಟೊಂದು ಜನ ಏಕಕಾಲಕ್ಕೆ ಅವಳನ್ನು ಸುತ್ತುವರಿದರೆ ಚಿಕ್ಕ ಮಗುವಿಗೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲ, ಅವಳು ಸಾಮಾನ್ಯಳಂತೆ ಬೇಳೆಯಲಿ ಎಂಬುದು ನಮ್ಮಾಸೆ" ಎಂದಿದ್ದಾರೆ.

ಈ ಬಗ್ಗೆ ಸಾಕಷ್ಟು ಮಾತನಾಡಿರುವ ಅಭಿ, "ಅವಳು ಆತ್ಮವಿಶ್ವಾಸದಿಂದ ಬದುಕುವಂತಾಗಬೇಕು. ಹಾಗೆಂದು ಅವಳೇನೂ ಜಗತ್ತನ್ನು ಆಳಬೇಕಿಲ್ಲ. ಆದರೆ ಜಗತ್ತಿನ ಮಾತುಗಳಿಗೆ ಅವಳು ಕಿವಿಗೊಟ್ಟು ಆತಂಕಪಡುವಂತೆ ಆಗಬಾರದು. ಸ್ಟಾರ್ ಕುಟುಂಬದಲ್ಲಿ ಜನಿಸಿರುವ ಆರಾಧ್ಯಾ, ಜನಸಾಮಾನ್ಯರ ಕುತೂಹಲಕ್ಕೆ ಕಾರಣವಾಗುವುದು ಖಂಡಿತ ಎಂಬುದು ನಮಗೆ ಗೊತ್ತು.

ಆದರೆ ಅವಳು ಆ ನೆರಳಿನಿಂದ ಹೊರಬಂದು ಬದುಕು ರೂಪಿಸಿಕೊಳ್ಳುವುದು ಅತೀ ಅಗತ್ಯ ಎಂಬುದನ್ನು ಮರೆಯಬಾರದು. ಆಕೆ ಒಂದು ಪ್ರದರ್ಶನದ ವಸ್ತುವೆಂಬಂತೆ ಜನರು ನೋಡುವುದು ನನಗಿಷ್ಟವಿಲ್ಲ. ಸ್ಟಾರ್ ಫ್ಯಾಮಿಲಿಯಲ್ಲಿ ಹುಟ್ಟಿದ್ದರೂ ಅವಳು ಯಾರ ನೆರಳಲ್ಲಿ ಬದುಕದೇ ಆತ್ಮವಿಶ್ವಾಸಕ್ಕೆ ಇನ್ನೊಂದು ಹೆಸರು ಎಂಬಂತೆ ಇರಬೇಕೆಂಬುದು ನಮ್ಮೆಲ್ಲರ ಮಹದಾಸೆ" ಎಂದಿದ್ದಾರೆ.

ಒಟ್ಟಿನಲ್ಲಿ, ಆರಾಧ್ಯಾಳನ್ನು ನೋಡಲು ಜನರಿಗೆ ಭಾರೀ ಕುತೂಹಲವಿದೆ. ಆದರೆ ಬಚ್ಚನ್ ಕುಟುಂಬಕ್ಕೆ ಅವಳು ಪ್ರದರ್ಶನದ ವಸ್ತುವಾಗುವುದು ಇಷ್ಟವಿಲ್ಲ. ಹೀಗಾಗಿ ಅವಳನ್ನು ನೋಡುಬೇಕು ಎಂಬ ಜನರ ಆಸೆಗೆ ಬಚ್ಚನ್ ಕುಟುಂಬ ತಲೆಕೆಡಿಸಿಕೊಳ್ಳುತ್ತಿಲ್ಲ. ಐಶ್ವರ್ಯಾ ರೈ ಮಗು ಹೇಗಿದೆ ಎಂದು ನೋಡುವ ತವಕ ಸಾಮಾನ್ಯ ಜನರದು. ಆದರೆ ಅವಳು ಸಾಮಾನ್ಯಳಂತೆ ಬೆಳೆಯಲಿ ಎಂಬುದು ಬಚ್ಚನ್ ಕುಟುಂಬದ ಆಸೆ. ಮುಂದೇನಾಗಲಿದೆಯೋ...! (ಏಜೆನ್ಸೀಸ್)

English summary
Abhishek Bachchan told that he doesn't prefer to show off his baby Aradhya Bachchan to the world. "I am not comfortable with that, I don't need to show her off. She is not an item that she has to be put up to display. She is a child and Aishwarya and I would like her to grow up as normal as possible".
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada