For Quick Alerts
  ALLOW NOTIFICATIONS  
  For Daily Alerts

  ಅಭಿಷೇಕ್ ಬಚ್ಚನ್ ನೆಚ್ಚಿನ ಸಹ ನಟಿ ಯಾರು ಗೊತ್ತೆ?

  |

  ಬಾಲಿವುಡ್ ಇಂಡಸ್ಟ್ರಿಯ ಸುಂದರ ತಾರಾ ದಂಪತಿಯಲ್ಲಿ ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಜೋಡಿ ಒಂದು. ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತು ಮಾದರಿ ದಂಪತಿ ಎನಿಸಿಕೊಂಡಿದ್ದಾರೆ. ಆದರೆ, ತೆರೆಮೇಲೆ ಒಟ್ಟಿಗೆ ಈ ಜೋಡಿಯನ್ನು ನೋಡಲು ಕಾಯುತ್ತಿರುವ ಪ್ರೇಕ್ಷಕರಿಗೆ ಮಾತ್ರ ಒಳ್ಳೆಯ ಸುದ್ದಿ ಸಿಗುತ್ತಿಲ್ಲ.

  ಈ ಹಿಂದೆ ಅನುರಾಗ್ ಕಶ್ಯಪ್ ನಿರ್ದೇಶನದಲ್ಲಿ ತಯಾರಾಗಲಿರುವ 'ಗುಲಾಬ್ ಜಾಮೂನು' ಚಿತ್ರದಲ್ಲಿ ಅಭಿಷೇಕ್ ಮತ್ತು ಐಶ್ವರ್ಯ ನಟಿಸಲಿದ್ದಾರೆ ಎನ್ನಲಾಯ್ತು. ಇದುವರೆಗೂ ಈ ಪ್ರಾಜೆಕ್ಟ್ ಶುರುವಾಗಿಲ್ಲ. ಕಲಾವಿದರನ್ನು ಘೋಷಿಸಿಲ್ಲ.

  ಅಪ್ಪ ನನಗಾಗಿ ಒಂದು ಸಿನಿಮಾವನ್ನೂ ಮಾಡಿಲ್ಲ: ಅಭಿಷೇಕ್ ಬಚ್ಚನ್ಅಪ್ಪ ನನಗಾಗಿ ಒಂದು ಸಿನಿಮಾವನ್ನೂ ಮಾಡಿಲ್ಲ: ಅಭಿಷೇಕ್ ಬಚ್ಚನ್

  ಈ ಕುರಿತು ಬಾಲಿವುಡ್ ಹಂಗಾಮ ವೆಬ್‌ಸೈಟ್‌ ಜೊತೆ ಮಾತನಾಡಿರುವ ಅಭಿ‍ಷೇಕ್ ''ಈ ಪ್ರಾಜೆಕ್ಟ್ ಏನಾಗುತ್ತಿದೆ ಎಂದು ನನಗೆ ತಿಳಿದಿಲ್ಲ. ನಾನು ಮನ್ಮರ್ಜಿಯಾನ್ ಚಿತ್ರದಲ್ಲಿ ಅನುರಾಗ್ ಕಶ್ಯಪ್ ಜೊತೆ ಕೆಲಸ ಮಾಡಿದ್ದು ಅದ್ಭುತ ಸಮಯ. ಆ ಚಿತ್ರದ ಬಗ್ಗೆ ನಿಜಕ್ಕೂ ಹೆಮ್ಮೆ ಇದೆ. ಕಶ್ಯಪ್ ಜೊತೆ ಕೆಲಸ ಮಾಡಲು ಮತ್ತೆ ಕಾಯುತ್ತಿದ್ದೇನೆ'' ಎಂದು ಹೇಳಿಕೊಂಡಿದ್ದಾರೆ.

  ಐಶ್ವರ್ಯ ರೈ ಜೊತೆ ಕೆಲಸ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ ಅಭಿಷೇಕ್, "ಆಕೆಯೊಂದಿಗೆ ಕೆಲಸ ಮಾಡುವುದು ಸದಾ ಖುಷಿ ನೀಡುತ್ತದೆ. ಐಶ್ವರ್ಯ ನನ್ನ ನೆಚ್ಚಿನ ಸಹ ನಟಿ. ನಾವು ಒಟ್ಟಿಗೆ ಸಿನಿಮಾ ಮಾಡಿದಾಗಲೆಲ್ಲ ನನಗೆ ಸ್ಫೂರ್ತಿ ತುಂಬಿದ್ದಾಳೆ. ಶೀಘ್ರದಲ್ಲೇ ನಾವು ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದು ನಂಬಿಕೆ ಇದೆ'' ಎಂದು ತಿಳಿಸಿದ್ದಾರೆ.

  ಜೈಲು ಖೈದಿ ಉಡುಪಿನಲ್ಲಿ ಶಿವರಾಜ್ ಕುಮಾರ್: ಹೊಸ ಲುಕ್ ವೈರಲ್ಜೈಲು ಖೈದಿ ಉಡುಪಿನಲ್ಲಿ ಶಿವರಾಜ್ ಕುಮಾರ್: ಹೊಸ ಲುಕ್ ವೈರಲ್

  ಅಭಿಷೇಕ್ ಬಚ್ಚನ್ ಕೊನೆಯದಾಗಿ ಅನುರಾಗ್ ಬಸು ಅವರ 'ಲುಡೋ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಒಳ್ಳೆಯ ರೆಸ್‌ಪಾನ್ಸ್ ಪಡೆದುಕೊಂಡಿತ್ತು. ಪ್ರಸ್ತುತ ದಿಯಾ ಅನ್ನಪೂರ್ಣ ಅವರ ಘೋಷ್ ಬಾಬ್ ಬಿಸ್ವಾಸ್ ಮತ್ತು ದಿ ಬಿಗ್ ಬುಲ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  Recommended Video

  ಚಿರು ಅಣ್ಣ ಹೇಳಿದ್ದಕ್ಕೆ ನಾನು ಹಾಡು ಬರೆಯೋಕೆ ಸ್ಟಾರ್ಟ್ ಮಾಡಿದ್ದು | Chetan Kumar | Filmibeat Kannada

  ಮತ್ತೊಂದೆಡೆ ಐಶ್ವರ್ಯ ರೈ ಅವರು ಮಣಿರತ್ನ ನಿರ್ದೇಶನ ಪೊನ್ನಿಯನ್ ಸೆಲ್ವೆನ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

  English summary
  Bollywood actor Abhishek Bachchan says Aishwarya Rai Is his favourite Co-Star.
  Monday, December 14, 2020, 19:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X