For Quick Alerts
  ALLOW NOTIFICATIONS  
  For Daily Alerts

  ಟ್ರೋಲ್ ಮಾಡುವವರಿಗೆ ಮುಲಾಜಿಲ್ಲದೇ ತಿರುಗೇಟು ಕೊಟ್ಟ ಅಭಿಶೇಕ್ ಬಚ್ಚನ್.!

  By Harshitha
  |

  ಅದ್ಯಾಕೋ... ಏನೋ... ಅಭಿಶೇಕ್ ಬಚ್ಚನ್ ಅಂದ್ರೆ ಕೆಲವರಿಗೆ ಆಗಲ್ಲ. ತಂದೆ ಅಮಿತಾಬ್ ಬಚ್ಚನ್ ಗೆ ಈಗಲೂ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಆದ್ರೆ, ಅಭಿಶೇಕ್ ಗೆ ಫ್ಯಾನ್ಸ್ ಗಿಂತ ಟ್ರೋಲ್ ಮಾಡುವವರೇ ಹೆಚ್ಚು.

  ಆಗಾಗ ಒಂದಲ್ಲಾ ಒಂದು ವಿಷಯಕ್ಕೆ ಟ್ರೋಲ್ ಆಗುವ ಬಾಲಿವುಡ್ ತಾರೆಯರ ಪೈಕಿ ಅಭಿಶೇಕ್ ಬಚ್ಚನ್ ಕೂಡ ಒಬ್ಬರು. ತಂದೆ-ತಾಯಿ ಜೊತೆಗೆ ಒಗ್ಗಟ್ಟಾಗಿ ನೆಲೆಸಿರುವ ಅಭಿಶೇಕ್ ಬಚ್ಚನ್ ಬಗ್ಗೆ ಇತ್ತೀಚೆಗಷ್ಟೇ ಟ್ವೀಟಿಗರು ಲೇವಡಿ ಮಾಡಿದ್ದರು.

  ತಂಟೆಗೆ ಬಂದವರನ್ನ ತರಾಟೆಗೆ ತೆಗೆದುಕೊಳ್ಳದೇ ಸುಮ್ಮನೆ ಇರುವ ಜಾಯಮಾನ ಅಭಿಶೇಕ್ ಬಚ್ಚನ್ ರದ್ದಲ್ಲ. ಅಂದು, ತಮ್ಮ ತುಂಬು ಕುಟುಂಬದ ಮೇಲೆ ಕಣ್ಣು ಹಾಕಿದ ಟ್ವೀಟಿಗರಿಗೆ ಮುಟ್ಟಿನೋಡಿಕೊಳ್ಳುವ ಹಾಗೆ ಟ್ವೀಟ್ ಪ್ರಹಾರ ಮಾಡಿದ್ದ ಅಭಿಶೇಕ್ ಇದೀಗ ಮತ್ತೆ ಕೆಲವರಿಗೆ ತಿರುಗೇಟು ಕೊಟ್ಟಿದ್ದಾರೆ.

  ಯಾವುದೇ ಸಿನಿಮಾ ಒಪ್ಪಿಕೊಳ್ಳದ ಅಭಿಶೇಕ್ ಬಚ್ಚನ್ ಗೆ ಫಾರಿನ್ ಟ್ರಿಪ್ ಮಾಡಲು ದುಡ್ಡು ಹೇಗೆ ಬಂತು ಅಂತ ನೆಟ್ಟಿಗರು ಆಡಿಕೊಂಡು ನಗುತ್ತಿದ್ದರು. ಅದಕ್ಕೆ ಅಭಿಶೇಕ್ ಬಚ್ಚನ್ ತಮ್ಮದೇ ಸ್ಟೈಲ್ ನಲ್ಲಿ ಚಾಟಿಯೇಟು ನೀಡಿದ್ದಾರೆ. ಮುಂದೆ ಓದಿರಿ....

  ಎಲ್ಲಾ ಶುರುವಾಗಿದ್ದು ಈ ಟ್ವೀಟ್ ನಿಂದ.!

  ಎಲ್ಲಾ ಶುರುವಾಗಿದ್ದು ಈ ಟ್ವೀಟ್ ನಿಂದ.!

  ಅನುರಾಗ್ ಕಶ್ಯಪ್ ನಿರ್ದೇಶನದ 'ಮನ್ಮರ್ಝಿಯಾ' ಸಿನಿಮಾದಲ್ಲಿ ಅಭಿಶೇಕ್ ಬಚ್ಚನ್ ಅಭಿನಯಿಸಿದ್ದಾರೆ. ''ಸೆಪ್ಟೆಂಬರ್ 21 ರಂದು 'ಮನ್ಮರ್ಝಿಯಾ' ಬಿಡುಗಡೆ ಆಗುವ ಮುನ್ನವೇ ಟೊರೆಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಆಗಲಿದೆ'' ಎಂದು ಅನುರಾಗ್ ಕಶ್ಯಪ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡಿ ಹಲವರು ಅಭಿಶೇಕ್ ಬಚ್ಚನ್ ಕಾಲೆಳೆಯಲು ಶುರು ಮಾಡಿದರು.

  ತಂದೆ-ತಾಯಿ ಜೊತೆಗಿರುವುದು ಹೆಮ್ಮೆ ವಿಷಯ: ಟ್ವೀಟಿಗರಿಗೆ ಗುಂಡ್ ಪಿನ್ ಚುಚ್ಚಿದ ಅಭಿಶೇಕ್!ತಂದೆ-ತಾಯಿ ಜೊತೆಗಿರುವುದು ಹೆಮ್ಮೆ ವಿಷಯ: ಟ್ವೀಟಿಗರಿಗೆ ಗುಂಡ್ ಪಿನ್ ಚುಚ್ಚಿದ ಅಭಿಶೇಕ್!

  ಟ್ರೋಲ್ ಶುರು

  ಟ್ರೋಲ್ ಶುರು

  ''ಕೆಕೆ ಮೆನನ್ ರಿಂದ ಹಿಡಿದು ಜಾನ್ ಅಬ್ರಹಾಂ, ಅಭಯ್ ಡಿಯೋಲ್, ಮನೋಜ್ ಬಾಜ್ಪೈ, ವಿಕ್ಕಿ ಕೌಶಲ್... ಎಲ್ಲರೂ ಒಳ್ಳೆಯ ಆಯ್ಕೆ. ಆದ್ರೆ, ಅಭಿಶೇಕ್ ಬಚ್ಚನ್ ಯಾಕೆ.? ನೀವು ಕೆ.ಜೋ (ಕರಣ್ ಜೋಹರ್) ಖಾಯಿಲೆಯಿಂದ ಬಳಲುತ್ತಿದ್ದೀರಾ.? ಸಿನಿಮಾ ತಾರೆಯರನ್ನು ಪ್ರೀತಿಸುವ ಕೆಲಸ ಇದು'' ಎಂದು ಟ್ರೋಲಿಗರೊಬ್ಬರು ಟ್ವೀಟ್ ಮಾಡಿದರು.

  ಐಶ್ವರ್ಯ ರೈ ದಂಪತಿಯ 21 ಕೋಟಿ ಮೌಲ್ಯದ ಮನೆ ನೋಡಿಐಶ್ವರ್ಯ ರೈ ದಂಪತಿಯ 21 ಕೋಟಿ ಮೌಲ್ಯದ ಮನೆ ನೋಡಿ

  ವ್ಯಂಗ್ಯವಾಗಿ ಉತ್ತರ ಕೊಟ್ಟ ಅಭಿಶೇಕ್ ಬಚ್ಚನ್.!

  ವ್ಯಂಗ್ಯವಾಗಿ ಉತ್ತರ ಕೊಟ್ಟ ಅಭಿಶೇಕ್ ಬಚ್ಚನ್.!

  ''ಅವರು ನನ್ನನ್ನ ಸಿನಿಮಾ ತಾರೆ ಎಂದು ಕರೆದರು.!'' ಎಂದು ವ್ಯಂಗ್ಯವಾಗಿ ಅಭಿಶೇಕ್ ಬಚ್ಚನ್ ಟ್ವೀಟ್ ಮಾಡುತ್ತಿದ್ದಂತೆಯೇ ''ನಾನು ಹೇಳಲು ಹೊರಟ್ಟಿದ್ದು ಸಿನಿಮಾ ತಾರೆಯ ಮಗ ಅಂತ. ಕರಣ್ ಜೋಹರ್ ಫ್ರೆಂಡ್ ಸರ್ಕಲ್ ನಲ್ಲಿ ಇರುವ ಕಾರಣ ಆಯ್ಕೆಗಳು ಅವರಂತೆಯೇ ಇರುತ್ತದೆ. ರಣ್ಬೀರ್, ಅಭಿಶೇಕ್.. ಮುಂದೇನು ತುಷಾರ್ ಕಪೂರ್?'' ಎಂದು ಆ ಟ್ರೋಲಿಗ ಸ್ಪಷ್ಟನೆ ನೀಡಿದ. ಆಗ, ''ಓ.. ನೀವು ಅರ್ಥೈಸಿದ್ದು ಹಾಗಾ... ಆಯ್ತು ಅದನ್ನ ನಾನು Freudian slip ಅಂತ ಪರಿಗಣಿಸುವೆ. ತುಷಾರ್ ಕಪೂರ್ ಕೂಡ ಉತ್ತಮ ಆಯ್ಕೆಯೇ'' ಎಂದು ಅಭಿಶೇಕ್ ಬಚ್ಚನ್ ಚಾಟಿ ಬೀಸಿದರು.

  'ನ್ಯೂಯಾರ್ಕ್'ನಲ್ಲಿ ಹೊಸ ಮನೆ ಖರೀದಿಸಿದ ಐಶ್-ಅಭಿಷೇಕ್ ದಂಪತಿ'ನ್ಯೂಯಾರ್ಕ್'ನಲ್ಲಿ ಹೊಸ ಮನೆ ಖರೀದಿಸಿದ ಐಶ್-ಅಭಿಷೇಕ್ ದಂಪತಿ

  ದುಡ್ಡು ಹೇಗೆ ಬಂತು.?

  ''ಮೂರು ವರ್ಷಗಳಿಂದ ಕೆಲಸ ಮಾಡಿಲ್ಲ. ಆದ್ರೆ, ಫಾರಿನ್ ನಲ್ಲಿ ಟ್ರಿಪ್ ಮಾಡಲು ದುಡ್ಡು ಇದೆ. ಹೇಗೆ.?'' ಎಂದು ಇನ್ನೊಬ್ಬ ಟ್ವೀಟ್ ಮಾಡಿದ್ದಕ್ಕೆ, ''ಯಾಕಂದ್ರೆ, ನಟನೆ ಹಾಗೂ ಚಿತ್ರ ನಿರ್ಮಾಣ ಬಿಟ್ಟು ಬೇರೆ ಬಿಸಿನೆಸ್ ಗಳನ್ನೂ ನಾನು ನೋಡಿಕೊಳ್ಳುತ್ತೇನೆ. ಅದರಲ್ಲಿ ಕ್ರೀಡೆ ಕೂಡ ಒಂದು'' ಎನ್ನುವ ಮೂಲಕ ಟ್ರೋಲ್ ಮಾಡಿದವರೆಲ್ಲರ ಬಾಯಿ ಮುಚ್ಚಿಸಿದ್ದಾರೆ ಅಭಿಶೇಕ್ ಬಚ್ಚನ್.

  English summary
  Bollywood Actor Abhishek Bachchan shuts down trolls who mocked at him for taking vacatioin without having income.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X