For Quick Alerts
  ALLOW NOTIFICATIONS  
  For Daily Alerts

  ತಂದೆ-ತಾಯಿ ಜೊತೆಗಿರುವುದು ಹೆಮ್ಮೆ ವಿಷಯ: ಟ್ವೀಟಿಗರಿಗೆ ಗುಂಡ್ ಪಿನ್ ಚುಚ್ಚಿದ ಅಭಿಶೇಕ್!

  By Harshitha
  |

  ವಯಸ್ಸಾದ ಮೇಲೆ ಮಕ್ಕಳು ತಂದೆ-ತಾಯಿಯನ್ನು ನೋಡಿಕೊಳ್ಳಲ್ಲ ಎಂಬ ನೋವು ಅನೇಕ ಪೋಷಕರಿಗೆ ಕಾಡುತ್ತೆ. ಮದುವೆ ಆಗುತ್ತಿದ್ದ ಹಾಗೆ ಬೇರೆ ಮನೆ ಮಾಡುವ ಮಕ್ಕಳು, ಪೋಷಕರ ಕಷ್ಟ-ಸುಖಗಳಿಗೆ ಸ್ಪಂದಿಸದ ಕಾಲ ಇದು. ಅಂಥದ್ರಲ್ಲಿ, ಬಾಲಿವುಡ್ ನಟ ಅಭಿಶೇಕ್ ಬಚ್ಚನ್ ಮದುವೆ ಆಗಿ ಹನ್ನೊಂದು ವರ್ಷ ಆಯ್ತು.

  ಇಷ್ಟು ವರ್ಷಗಳು ಕಳೆದರೂ, ಅಭಿಶೇಕ್ ಕನಸಿನಲ್ಲೂ ಬೇರೆ ಮನೆ ಮಾಡುವ ಯೋಚನೆ ಮಾಡಿಲ್ಲ. ಐಶ್ವರ್ಯ ರೈ ಬಚ್ಚನ್ ಕೂಡ ಅದರ ಬಗ್ಗೆ ಆಲೋಚಿಸಿಲ್ಲ. ನ್ಯೂಕ್ಲಿಯರ್ ಫ್ಯಾಮಿಲಿಗಳೇ ಹೆಚ್ಚಾಗುತ್ತಿರುವ ಈಗಿನ ಕಾಲದಲ್ಲಿ ಬಚ್ಚನ್ ಕುಟುಂಬ ಒಂದಾಗಿ ಒಗ್ಗಟ್ಟಾಗಿದೆ.

  ಇದನ್ನ ನೋಡಿ ಖುಷಿ ಪಡದೆ, ನೆಟ್ಟಿಗರೊಬ್ಬರು ಒಂದು ಟ್ವೀಟ್ ಮಾಡಿ ಅಭಿಶೇಕ್ ಬಚ್ಚನ್ ರನ್ನ ಹೀಯಾಳಿಸಿದ್ದರು. ಆ ಟ್ವೀಟ್ ನೋಡಿ ಅಭಿಶೇಕ್ ಮಾತಲ್ಲೇ ಗುಂಡ್ ಪಿನ್ ಚುಚ್ಚಿದ್ದಾರೆ. ಮುಂದೆ ಓದಿರಿ...

  ಅಭಿಶೇಕ್ ನ ಹೀಯಾಳಿಸಿದ ನೆಟ್ಟಿಗರು!

  ಅಭಿಶೇಕ್ ನ ಹೀಯಾಳಿಸಿದ ನೆಟ್ಟಿಗರು!

  ''ಅಭಿಶೇಕ್ ಬಚ್ಚನ್ ಇನ್ನೂ ತಂದೆ-ತಾಯಿಯ ಜೊತೆಯಲ್ಲೇ ಇದ್ದಾರೆ'' ಎನ್ನುತ್ತ ನೆಟ್ಟಿಗರೊಬ್ಬರು ಟ್ವೀಟ್ ಮಾಡಿ ಅಭಿಶೇಕ್ ರನ್ನ ಹೀಯಾಳಿಸಿದ್ದರು. ಈ ಟ್ವೀಟ್ ನೋಡಿ ಕಣ್ಣು ಕೆಂಪಗೆ ಮಾಡಿಕೊಂಡ ಅಭಿಶೇಕ್ ಕೊಟ್ಟಿರುವ ಪ್ರತಿಕ್ರಿಯೆ ಇದು...

  ಐಶ್ವರ್ಯ ರೈ ದಂಪತಿಯ 21 ಕೋಟಿ ಮೌಲ್ಯದ ಮನೆ ನೋಡಿ ಐಶ್ವರ್ಯ ರೈ ದಂಪತಿಯ 21 ಕೋಟಿ ಮೌಲ್ಯದ ಮನೆ ನೋಡಿ

  ಅಭಿಶೇಕ್ ಕೊಟ್ಟ ಪ್ರತಿಕ್ರಿಯೆ ಏನು.?

  ಅಭಿಶೇಕ್ ಕೊಟ್ಟ ಪ್ರತಿಕ್ರಿಯೆ ಏನು.?

  ''ಹೌದು, ನಾನು ನನ್ನ ತಂದೆ-ತಾಯಿಯ ಜೊತೆಯಲ್ಲೇ ಇದ್ದೇನೆ. ಇದು ನನಗೆ ಹೆಮ್ಮೆಯ ವಿಷಯ. ನೀವು ಕೂಡ ಇದನ್ನೇ ಅನುಸರಿಸಿ ನೋಡಿ, ಜೀವನದಲ್ಲಿ ಖುಷಿಯಾಗಿರುತ್ತೀರಾ'' ಎಂದು ಟ್ವೀಟ್ ಮಾಡಿ, ಆಡಿಕೊಂಡವನ ಬಾಯ್ಮುಚ್ಚಿಸಿದರು ಅಭಿಶೇಕ್ ಬಚ್ಚನ್.

  'ನ್ಯೂಯಾರ್ಕ್'ನಲ್ಲಿ ಹೊಸ ಮನೆ ಖರೀದಿಸಿದ ಐಶ್-ಅಭಿಷೇಕ್ ದಂಪತಿ 'ನ್ಯೂಯಾರ್ಕ್'ನಲ್ಲಿ ಹೊಸ ಮನೆ ಖರೀದಿಸಿದ ಐಶ್-ಅಭಿಷೇಕ್ ದಂಪತಿ

  ಅಭಿಶೇಕ್ ಕರೀಶ್ಮಾಗೆ ಗುಡ್ ಬೈ ಹೇಳಿದ್ದು ಇದೇ ಕಾರಣಕ್ಕೆ!

  ಅಭಿಶೇಕ್ ಕರೀಶ್ಮಾಗೆ ಗುಡ್ ಬೈ ಹೇಳಿದ್ದು ಇದೇ ಕಾರಣಕ್ಕೆ!

  2002 ರಲ್ಲಿ ಅಭಿಶೇಕ್ ಹಾಗೂ ಕರೀಶ್ಮಾ ನಿಶ್ಚಿತಾರ್ಥ ಮಾಡಿಕೊಂಡ ವಿಚಾರ ನಿಮಗೆ ಗೊತ್ತಿದೆ. ಈ ಮದುವೆ ಮುರಿದು ಬೀಳಲು ಕಾರಣ ಬೇರೆ ಮನೆ ಮಾಡದಿರಲು ಅಭಿಶೇಕ್ ತೆಗೆದುಕೊಂಡ ದೃಢ ನಿರ್ಧಾರ. ಮದುವೆ ಆದ್ಮೇಲೆ ಬೇರೆ ಮನೆ ಮಾಡಿ ಸ್ವತಂತ್ರವಾಗಿ ಬದುಕಲು ಕರೀಶ್ಮಾ ಆಲೋಚಿಸಿದ್ದರು. ಆದ್ರೆ, ಇದು ಅಭಿಶೇಕ್ ಗೆ ಇಷ್ಟ ಆಗಲಿಲ್ಲ. ಹೀಗಾಗಿ, ಅಭಿಶೇಕ್-ಕರೀಶ್ಮಾ ಎಂಗೇಜ್ಮೆಂಟ್ ಮುರಿದು ಬಿತ್ತು.

  ಐಶ್ವರ್ಯ ಹಾಗಲ್ಲ.!

  ಐಶ್ವರ್ಯ ಹಾಗಲ್ಲ.!

  ತಂದೆ-ತಾಯಿಯನ್ನ ಹೆಚ್ಚು ಪ್ರೀತಿಸುವ ಐಶ್ವರ್ಯ ರೈ ಬೇರೆ ಮನೆ ಮಾಡಲು ಡಿಮ್ಯಾಂಡ್ ಇಡಲಿಲ್ಲ. ಹೀಗಾಗಿ, ಐಶ್ವರ್ಯ ರೈ ಬಚ್ಚನ್ ಮನೆಗೆ ಸೊಸೆಯಾದರು.

  ಎಂದೂ 'ಜಲ್ಸಾ'ದಿಂದ ಹೊರಗೆ ಹೋಗಲ್ಲ.!

  ಎಂದೂ 'ಜಲ್ಸಾ'ದಿಂದ ಹೊರಗೆ ಹೋಗಲ್ಲ.!

  ಅಭಿಶೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ. ಆದ್ರೂ, 'ಜಲ್ಸಾ'ದಿಂದ ಎಂದೂ ಹೊರಗೆ ನಡೆಯದಿರಲು ಅಭಿಶೇಕ್ ತೀರ್ಮಾನಿಸಿದ್ದಾರಂತೆ.

  English summary
  Bollywood Actor Abhishek Bachchan trolled for staying at Big B's house even after his marriage with Aishwarya Rai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X