»   » ಹೆಂಡತಿ-ಮಗಳನ್ನು ಕಾಪಾಡಿದ ಅಭಿಷೇಕ್ ಬಚ್ಚನ್

ಹೆಂಡತಿ-ಮಗಳನ್ನು ಕಾಪಾಡಿದ ಅಭಿಷೇಕ್ ಬಚ್ಚನ್

Posted By: Staff
Subscribe to Filmibeat Kannada

ಐಶ್ವರ್ಯಾ ರೈ ಮಗಳು ಆರಾಧ್ಯಾ ಬಚ್ಚನ್ ಹುಟ್ಟಿದಾಗಿನಿಂದಲೂ ಜಗತ್ತೇ ಅವಳನ್ನು ನೋಡಲು ಕಾತರವಾಗಿದೆ. ಆಕೆ ಯಾರಂತಿದ್ದಾಳೆ, ಎಷ್ಟು ಬೆಳ್ಳಗಿದ್ದಾಳೆ, ತೆಳ್ಳಗಿದ್ದಾಳೆ ಎಂಬ ಪ್ರಶ್ನೆಗಳೆಲ್ಲವೂ ಬಂದು ಹೋಗಿವೆ. ಆದರೆ ಆಕೆಯನ್ನು ಖುದ್ದಾಗಿ ನೋಡಿದ್ದು ಕುಟುಂಬ, ಆಪ್ತರು ಹೊರತುಪಡಿಸಿ ಬೆರಳೆಣಿಕೆಯಷ್ಟು ಜನರು (ಪುಣ್ಯವಂತರು!) ಮಾತ್ರ.

ಪ್ರಪಂಚದಾದ್ಯಂತ ಜನರಿಗೆ ಆರಾಧ್ಯಾಳನ್ನು ನೋಡುವ ಹುಚ್ಚು ಅದೆಷ್ಟಿದೆ ಎಂದರೆ ಅಭಿಷೇಕ್ ಹಾಗೂ ಐಶ್ವರ್ಯಾ ರೈ ಹೊರಹೋಗುವುದೇ ದುಸ್ತರವಾಗಿದೆ. ಜೊತೆಯಲ್ಲಿ ಆ ಮಗು ಆರಾಧ್ಯಾ ಇದ್ದರಂತೂ ಮುಗಿದೇ ಹೋಯ್ತು! ಮಾಧ್ಯಮಗಳ ಕ್ಯಾಮರಾ ಕಣ್ಣು ತಪ್ಪಿಸಿ, ಸಾಮಾನ್ಯ ಜನರಿಂದ ಆರಾಧ್ಯಾರನ್ನು ಕಾಪಾಡುವುದು ಬಚ್ಚನ್ ಕುಟುಂಬಕ್ಕೆ ಭಾರೀ ತಲೆನೋವಿನ ವಿಷಯವೇ ಸರಿ.

Abhishek Bachchan Aishwarya Rai

ಇಂಥದ್ದೊಂದು ಸಂದರ್ಭ ಇತ್ತೀಚಿಗೆ ಐಶೂ-ಅಭಿ ಜೋಡಿಗೆ ಎದುರಾಗಿದೆ. ಮೊನ್ನೆ ಲಂಡನ್ ಪ್ರವಾಸದಿಂದ ಮರಳಿದ ಈ ಜೋಡಿಯ ಜೊತೆ ಸಹಜವಾಗಿ ಮದ್ದು ಕಂದಮ್ಮ 'ಆರಾಧ್ಯಾ' ಇದೆ. ಯಾವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಮಗಳ ಜೊತೆ ಬಂದಿಳಿದರೋ, ಒಮ್ಮೆಲೆ ಮಾಧ್ಯಮದವರು ಹಾಗೂ ಅಭಿಮಾನಿಗಳು ಅವರನ್ನು ಹಾಗೂ ಮಗಳು ಆರಾಧ್ಯಾಳನ್ನು ನೋಡಲು ಮುಗಿಬಿದ್ದರು.

ಆ ಸಂದರ್ಭದಲ್ಲಿ ಆರಾಧ್ಯಾ ಅಪ್ಪ ಅಭಿಷೇಕ್ ಬಚ್ಚನ್ ಮೆರೆದ 'ಸಂಯಮ' ಹಾಗೂ 'ಸಮಯಪ್ರಜ್ಞೆ' ಮಾಧ್ಯಮದವರ ಮೆಚ್ಚುಗೆ ಗಳಿಸಿತು. ಕಾರಣ, ಆ ಸಂದರ್ಭದಲ್ಲಿ ಕೋಪಗೊಳ್ಳದೇ ಎಲ್ಲವನ್ನೂ ಶಾಂತರೀತಿಯಿಂದ ನಿರ್ವಹಿಸಿ ಎಲ್ಲರಿಂದ ಪಾರಾದರು ದಂಪತಿ. ಅಭಿಷೇಕ್, ಅಲ್ಲಿ ಸೇರಿದ್ದ ಭಾರೀ ಗುಂಪಿನಲ್ಲಿದ್ದ ಎಲ್ಲರಿಗೂ ಹ್ಯಾಂಡ್ ಶೇಕ್ ಮಾಡಿ, ಅವರೊಂದಿಗೇ ಬೆರೆತು ನಗುನಗುತ್ತಾ ಮಾತನಾಡಿ ಅವರ ಗಮನವನ್ನು ಸೆಳೆದರು.

ತನ್ನ ಹೆಂಡತಿ ಐಶ್ವರ್ಯಾ ರೈ ಹಾಗೂ ಮಗಳು ಆರಾಧ್ಯಾಳತ್ತ ನೆರೆದ ಜನರ ದೃಷ್ಟಿ ಹೋಗದಂತೆ ಅಭಿಷೇಕ್, ಅಭಿಮಾನಿಗಳ ಜೊತೆ ಮಾತನಾಡುತ್ತಾ ಅವರೊಂದಿಗೇ ಸೇರಿಕೊಂಡುಬಿಟ್ಟರು. ಅದೇ ವೇಳೆ ಜಾಣತನ ಪ್ರದರ್ಶೀಸಿದ ಐಶ್ವರ್ಯಾ ರೈ ಮಗುವಿನೊಂದಿಗೆ ಸುರಕ್ಷಿತವಾಗಿ ಕಾರಿನ ಸಮೀಪ ತಲುಪಿದರು. ಅಲ್ಲಿಗೆ ಭಾರೀ ಸಮಸ್ಯೆ ಬಗೆಹರಿದಿತ್ತು.

ನಂತರ ಮಗುವಿನೊಂದಿಗೆ ದಂಪತಿಗಳನ್ನು ಹೊತ್ತ ಕಾರು ಮನೆಯ ಕಡೆ ಸಾಗಿತು. ಜಾಣತನ ಮೆರೆದ ದಂಪತಿಗಳು ಯಾವುದೇ ವಾದ-ವಿವಾದಕ್ಕೆ ಆಸ್ಪದ ನೀಡದೆ 'ಸೇಫ್ ಅಂಡ್ ಎಸ್ಕೇಪ್' ದಾರಿ ಹಿಡಿದಿದ್ದರು. ಆರಾಧ್ಯಾಳನ್ನು ನೋಡಲೇಬೇಕೆಂಬ ಮನೋಭಾವದಲ್ಲಿ ಅಲ್ಲಿದ್ದ ಜನರಿಗೂ ಇದರಿಂದ ಬೇಸರವಾಗಲೀ ಮುಜುಗರವಾಗಲೀ ಆಗಲಿಲ್ಲ. ಎಲ್ಲರೂ ಅವರ ಸಮಯಪ್ರಜ್ಞೆ ಹಾಗೂ ಜಾಣತನವನ್ನು ಕೊಂಡಾಡಿದರು.

ಮುಖ್ಯವಾಗಿ ಅಭಿಷೇಕ್ ಬಚ್ಚನ್ ಈ ಸಂದರ್ಭವನ್ನು 'ಹ್ಯಾಂಡಲ್' ಮಾಡಿದ ರೀತಿಗೆ ಯಾರಾದರೂ ತಲೆದೂಗಲೇಬೇಕು. ಮಗಳು ಹಾಗೂ ಹೆಂಡತಿಯನ್ನು 'ಕ್ರೇಜಿ ಗುಂಪಿನಿಂದ' ಬಚಾವ್ ಮಾಡಿದರು ಅಭಿಷೇಕ್. ಯಾರೂ ಆರಾಧ್ಯಾಳನ್ನು ಸರಿಯಾಗಿ ನೋಡಲಾಗಲಿಲ್ಲ, ಫೋಟೋ ತೆಗೆಯಲಾಗಲಿಲ್ಲ. ತೆಗೆದ ಪೋಟೋಗಳಲ್ಲಿ ಕಂಡಿದ್ದು ಆರಾಧ್ಯಾ ಟೋಪಿ, ಮಗಳನ್ನು ಎತ್ತಿಕೊಂಡ ಐಶೂ ಹಾಗೂ ಪಕ್ಕದಲ್ಲಿದ್ದ ಅಪ್ಪ ಅಭಿ ಅಷ್ಟೇ! (ಏಜೆನ್ಸೀಸ್)

English summary
When Aishawarya Rai Bachchan and Abhishek Bachchan was at the airport with Aaradhya, the media and the crowd went crazy to see Aaradhya.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada