For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ಗೆದ್ದ ಸಂಭ್ರಮದಲ್ಲಿ ನಟ ಅಭಿಷೇಕ್ ಬಚ್ಚನ್

  |

  ಕೊರೊನಾ ವೈರಸ್ ಸೋಂಕು ದೃಢಪಟ್ಟ ಕಾರಣ ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರಲ್ಲಿ ಕೊನೆಗೂ ವೈರಸ್ ನೆಗೆಟಿವ್ ಬಂದಿದೆ. ಜುಲೈ 11ರಂದು ಅಭಿಷೇಕ್ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು.

  ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ KGF ತಯಾರಾಗಿದ್ದು ಹೀಗೆ | Filmibeat Kannada

  ಸುಮಾರು ಒಂದು ತಿಂಗಳು ಚಿಕಿತ್ಸೆ ಪಡೆದ ಅವರು ಕೊನೆಗೂ ವೈರಸ್ ಕಾಟದಿಂದ ಹೊರಬಂದಿದ್ದಾರೆ. ಈ ಸಂಗತಿಯನ್ನು ಅವರು ಶನಿವಾರ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಆಸ್ಪತ್ರೆಯೊಳಗಿನ ಐಸೋಲೇಷನ್ ವಾರ್ಡ್‌ನ ತಮ್ಮ ಆರೋಗ್ಯ ಫಲಕವನ್ನು ಅಭಿಷೇಕ್ ಶೇರ್ ಮಾಡಿದ್ದಾರೆ.

  ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಬಿಗ್ ಬಿ ಅಮಿತಾಬ್ ಬಚ್ಚನ್ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಬಿಗ್ ಬಿ ಅಮಿತಾಬ್ ಬಚ್ಚನ್

  ಈ ಮಧ್ಯಾಹ್ನ ಬಂದ ನನ್ನ ಕೋವಿಡ್ 19 ವರದಿಯಲ್ಲಿ ನೆಗೆಟಿವ್ ಬಂದಿದೆ. ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು. ಮನೆಗೆ ಮರಳಲು ಸಾಧ್ಯವಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

  ಅಮಿತಾಬ್ ಬಚ್ಚನ್ ಕೂಡ ಮಗ ಮನೆಗೆ ವಾಪಸ್ ಬರುತ್ತಿರುವ ಸಂತಸ ಹಂಚಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಅವರಲ್ಲಿ ಕೊರೊನಾ ನೆಗೆಟಿವ್ ಬಂದಿರುವುದರಿಂದ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳುತ್ತಿದ್ದಾರೆ ಎಂದಿದ್ದಾರೆ.

  'ಕೊರೊನಾದಿಂದ ಸತ್ತು ಹೋಗಿ' ಎಂದು ಟ್ರೋಲ್ ಮಾಡಿದವರಿಗೆ ಅಮಿತಾಬ್ ಬಚ್ಚನ್ ಕ್ಲಾಸ್'ಕೊರೊನಾದಿಂದ ಸತ್ತು ಹೋಗಿ' ಎಂದು ಟ್ರೋಲ್ ಮಾಡಿದವರಿಗೆ ಅಮಿತಾಬ್ ಬಚ್ಚನ್ ಕ್ಲಾಸ್

  ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರಲ್ಲಿ ಕೊರೊನಾವೈರಸ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಜುಲೈ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಐಶ್ವರ್ಯಾ ರೈ ಹಾಗೂ ಮಗಳು ಆರಾಧ್ಯಾಳಲ್ಲಿ ಕೊರೊನಾ ವೈರಸ್ ಇರುವುದು ಮರುದಿನ ಖಚಿತವಾದರೂ ಅವರು ಜುಲೈ 17ರವರೆಗೂ ಮನೆಯಲ್ಲಿಯೇ ಐಸೋಲೇಷನ್‌ನಲ್ಲಿದ್ದರು. ನಂತರ ಆಸ್ಪತ್ರೆಗೆ ದಾಖಲಾಗಿ ಜುಲೈ 27ರಂದು ಬಿಡುಗಡೆಯಾಗಿದ್ದರು. ಅಮಿತಾಬ್ ಬಚ್ಚನ್ ಆಗಸ್ಟ್ 2ರಂದು ಮನೆಗೆ ಮರಳಿದ್ದರು. ಆದರೆ ತಮ್ಮ ಆರೋಗ್ಯ ವರದಿಯಲ್ಲಿ ಕೋವಿಡ್ 19 ಪಾಸಿಟಿವ್ ಬರುತ್ತಿದ್ದ ಕಾರಣ ಅಭಿಷೇಕ್ ಆಸ್ಪತ್ರೆಯಲ್ಲಿಯೇ ಇದ್ದರು.

  English summary
  Bollywood actor Abhishek Bachchan has tested negative for coronavirus finally. He was admitted to hospital on July 11 along with Amitabh Bachchan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X