For Quick Alerts
  ALLOW NOTIFICATIONS  
  For Daily Alerts

  ಲಾಕ್ ಡೌನ್ ಮುಗಿಯುತ್ತಿದ್ದಂತೆ 'ರಕ್ಷಾ ಬಂಧನ' ಶುರು ಮಾಡಿದ ಅಕ್ಷಯ್ ಕುಮಾರ್

  |

  ಕೊರೊನಾ ಲಾಕ್ ಡೌನ್ ನಿಂದ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದವು. ಸುಮಾರು 2 ತಿಂಗಳಿಗೂ ಅಧಿಕ ಕಾಲ ಸಿನಿ ಮಂದಿ ಕೆಲಸವಿಲ್ಲದೆ ಮನೆಯಲ್ಲೇ ಕೂರುವಂತಾಗಿತ್ತು. ಸದ್ಯ ಹಂತಹಂತವಾಗಿ ಅನ್ ಲಾಕ್ ಆಗುತ್ತಿದ್ದು, ಸಿನಿಮಾ ಚಿತ್ರೀಕರಣಕ್ಕೂ ಅನುಮತಿ ನೀಡಲಾಗಿದೆ.

  ಶೂಟಿಂಗ್ ಗೆ ಶುರು ಎನ್ನುತ್ತಿದ್ದಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಇಂದಿನಿಂದ (ಜೂನ್ 21) ಅಕ್ಷಯ್ ಕುಮಾರ್ 'ರಕ್ಷಾ ಬಂಧನ' ಚಿತ್ರದ ಚಿತ್ರೀಕರಣ ಆರಂಭವಾಗಿದ್ದು ಈಗಾಗಲೇ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

  ಚಿತ್ರೀಕರಣಕ್ಕೆ ಭಾಗಿಯಾದ ವಿಚಾರವನ್ನು ಅಕ್ಷಯ್ ಕುಮಾರ್ ಹಂಚಿಕೊಂಡಿದ್ದಾರೆ. ಮೇಕಿಂಗ್ ಫೋಟೋವನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅಂದಹಾಗೆ ರಕ್ಷಾ ಬಂಧನ ಖ್ಯಾತ ನಿರ್ದೇಶಕ ಆನಂದ್ ಎಲ್ ರಾಯ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ. ಆನಂದ್ ಎಲ್ ರಾಯ್ ಜೊತೆ ಚಿತ್ರೀಕರಣ ಸೆಟ್ ನಲ್ಲಿ ಕುಳಿತಿರುವ ಫೋಟೋವನ್ನು ಅಕ್ಷಯ್ ಕುಮಾರ್ ಹಂಚಿಕೊಂಡಿದ್ದಾರೆ.

  "ಇದು ತನ್ನ ಸಹೋದರಿ ಅಲ್ಕಾ ಅವರೊಂದಿಗೆ ಹಂಚಿಕೊಳ್ಳುವ ವಿಶೇಷ ಬಂಧದ ಆಚರಣೆ ಎಂದು ಬರೆದುಕೊಂಡಿದ್ದಾರೆ. ನಾನು ನನ್ನ ಸಹೋದರಿ ಅಲ್ಕಾ ಜೊತೆ ಬೆಳೆದೆ. ಅಲ್ಕಾ ನನ್ನ ಮೊದಲ ಸ್ನೇಹಿತೆ. ಇದು ಪ್ರಯತ್ನವಿಲ್ಲದ ಸ್ನೇಹ. ಆನಂದ್ ಎಲ್ ರಾಯ್ ಅವರ ರಕ್ಷಾ ಬಂಧನ ಚಿತ್ರವನ್ನು ಆಕೆಗೆ ಸಮರ್ಪಣೆ ಮಾಡುತ್ತೇನೆ. ಇದು ವಿಶೇಷ ಬಂಧದ ಆಚರಣೆಯಾಗಿದೆ" ಬರೆದುಕೊಂಡಿದ್ದಾರೆ.

  ನಟ ಅಕ್ಷಯ್ ಜೊತೆ ರಕ್ಷಾ ಬಂಧನದಲ್ಲಿ ಚಿತ್ರದಲ್ಲಿ ಭೂಮಿ ಪಡ್ನೇಕರ್ ನಟಿಸುತ್ತಿದ್ದಾರೆ. ಭೂಮಿ ಪಡ್ನೇಕರ್ ಮತ್ತು ಅಕ್ಷಯ್ ಕುಮಾರ್ ಅವರ 3ನೇ ಸಿನಿಮಾ ಇದಾಗಿದೆ. ಟೈಲೆಟ್; ಏಕ್ ಪ್ರೇಮ್ ಕಥಾ, ದುರ್ಗಾಮತಿ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ರಕ್ಷಾ ಬಂಧನ ಮೂರನೆ ಸಿನಿಮಾವಾಗಿದೆ.

  ಚಿತ್ರೀಕರಣ ಪ್ರಾರಂಭವಾದ ಸಂತಸವನ್ನು ನಟಿ ಭೂಮಿ ಪಡ್ನೇಕರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ತುಂಬಾ ವಿಶೇಷವಾದ ಸಿನಿಮಾ ಮತ್ತು ವಿಶೇಷವಾದ ಪುನರ್ಮಿಲನ. ನನ್ನ ನೆಚ್ಚಿನ ಇಬ್ಬರೂ ಸೃಜನಶೀಲ ಶಕ್ತಿ ಕೇಂದ್ರಗಳು ಮತ್ತು ಅದ್ಭುತ ವ್ಯಕ್ತಿತ್ವದ ಜೊತೆ ಮತ್ತೆ ಸಿನಿಮಾ ಮಾಡಲು ನಾನು ಉತ್ಸುಕಳಾಗಿದ್ದೇನೆ. ರಕ್ಷಾ ಬಂಧನ ತುಂಬಾ ಹೃದಯಸ್ಪರ್ಶಿ ಸಿನಿಮಾವಾಗಿದೆ" ಎಂದು ಬರೆದುಕೊಂಡಿದ್ದಾರೆ.

  'ರಕ್ಷಾ ಬಂಧನ' ಸಿನಿಮಾ ಘೋಷಣೆ ಮಾಡಿ ಒಂದು ವರ್ಷದ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಿದೆ ಸಿನಿಮಾತಂಡ. ನಿರ್ದೇಶಕ ಆನಂದ್ ಎಲ್ ರಾಯ್ ಜೊತೆಗಿನ ಅಕ್ಷಯ್ ಎರಡನೇ ಸಿನಿಮಾ ಇದಾಗಿದೆ. ಈ ಮೊದಲು 'ಅತ್ರಂಗಿ ರೇ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇನ್ನು ಅಕ್ಷಯ್ ಕುಮಾರ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಅಪ್ಪ ಸಾಂಗ್ ನೋಡಿ ಎಂಜಾಯ್ ಮಾಡುತ್ತಿದ್ದಾನೆ Junior Chiru | Filmibeat Kannada

  'ಬೆಲ್ ಬಾಟಮ್' ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಸಿದ್ಧವಾಗಿದೆ. 'ಸೂರ್ಯವಂಶಿ', 'ಪೃಥ್ವಿರಾಜ್', 'ರಾಮ್ ಸೇತು', 'ಬಚ್ಚನ್ ಪಾಂಡೆ' ಸೇರಿದಂತೆ ಇನ್ನು ಕೆಲವು ಸಿನಿಮಾಗಳು ಅಕ್ಷಯ್ ಕುಮಾರ್ ಬಳಿ ಇದೆ.

  English summary
  Bollywood Actor Akshay Kumar resumes shooting for Raksha Bandhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X