For Quick Alerts
  ALLOW NOTIFICATIONS  
  For Daily Alerts

  'ಸೂಪರ್ 30' ಟ್ರೈಲರ್ ಮೂಲಕ ಬಂದ್ರು ಹೃತಿಕ್ ರೋಷನ್

  |

  ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಹೃತಿಕ್ ರೋಷನ್ ಸದ್ಯ 'ಸೂಪರ್ 30' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹೃತಿಕ್ ನನ್ನು ತೆರೆ ಮೇಲೆ ನೋಡದೆ ಅಭಿಮಾನಿಗಳಿಗೆ ವರ್ಷಗಳೆ ಆಗಿವೆ. ವಿಭಿನ್ನ ಮತ್ತು ಚಾಲೆಂಜಿಂಗ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತ ಬಂದಿರುವ ಹೃತಿಕ್ ಈಗ 'ಸೂಪರ್ 30' ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

  ಸದ್ಯ 'ಸೂಪರ್ 30' ಸಿನಿಮಾದ ಸೂಪರ್ ಆಗಿರುವ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಹೃತಿಕ್ ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹ್ಯಾಂಡ್ ಸಮ್ ಹಂಕ್ ನ ಈ ವಿಭಿನ್ನ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದ್ಹಾಗೆ 'ಸೂಪರ್ 30' ನೈಜ ಘಟನೆ ಆಧಾರಿತ ಸಿನಿಮಾ.

  ಖ್ಯಾತ ಗಣಿತ ಲೆಕ್ಚರ್ ಆಗಿದ್ದ ಆನಂದ್ ಕುಮಾರ್ ಅವರ ಜೀವನಾಧಾರಿತ ಸಿನಿಮಾ. ಬಿಹಾರ್ ಮೂಲದವರಾಗಿದ್ದ ಆನಂದ್ ಸಾಧಾರಣ ಕುಟುಂಬದಿಂದ ಬಂದ ವ್ಯಕ್ತಿ. 'ಸೂಪರ್ 30' ಯೋಜನೆಯ ಮೂಲಕ ಪ್ರತೀವರ್ಷ ಪ್ರತಿಭಾನ್ವಿತ 30 ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ಐಐಟಿ ಪ್ರವೇಶಾತಿಗೆ ತರಬೇತಿ ನೀಡುತ್ತಾರೆ. ಕೇವಲ ತರಬೇತಿ ಮಾತ್ರವಲ್ಲದೆ ಅವರಿಗೆ ಬೇಕಾದ ಆಹಾರ, ತರಬೇತಿಯ ಖರ್ಚನ್ನು ಅವರೆ ನಿಭಾಯಿಸುತ್ತಿದ್ದರು.

  ಅಂತಹ ಖ್ಯಾತ ಗಣಿತ ಲೆಕ್ಚರ್ ಆನಂದ್ ಕುಮಾರ್ ಅವರ ಪಾತ್ರದಲ್ಲಿ ನಟ ಹೃತಿಕ್ ರೋಷನ್ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಚಿತ್ರಾಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರಕ್ಕೆ ವಿಕಾಸ್ ಬಾಲ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಜುಲೈ 26ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Bollywood actor Hrithik Roshan starrer Super 30 film trailer released. This film is set to release in july 26th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X