For Quick Alerts
  ALLOW NOTIFICATIONS  
  For Daily Alerts

  ಟಬುಗೆ ಜಾಕಿಶ್ರಾಫ್ ಲೈಂಗಿಕ ಕಿರುಕುಳ ನೀಡಿದ್ದು ನಿಜಾನಾ? ಅದೇ ಕಾರಣಕ್ಕೆ ಇಬ್ಬರೂ ಒಟ್ಟಿಗೆ ನಟಿಸಲಿಲ್ವಾ?

  |

  ಬಹುಭಾಷಾ ನಟಿ ಟಬು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 52ನೇ ವಸಂತಕ್ಕೆ ಕಾಲಿಟ್ಟಿರುವ ಚೆಲುವೆ ಹಲವು ಸೂಪರ್ ಹಿಟ್ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದಾರೆ. ಇವತ್ತಿಗೂ ಪೋಷಕ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ವಯಸ್ಸು 50 ದಾಟಿದರೂ ಟಬು ಇನ್ನು ಮದುವೆ ಆಗಿಲ್ಲ.

  ತೆಲುಗಿನ 'ಕೂಲಿ ನಂಬರ್‌ 1' ಚಿತ್ರದ ಮೂಲಕ ನಾಯಕಿಯಾಗಿ ಟಬು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದಕ್ಕೂ ಮುನ್ನ ಎರಡು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಮಿಂಚಿದ್ದರು. ಪದ್ಮಶ್ರೀ ಪ್ರಶಸ್ತಿ ಸೇರಿದಂತೆ 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಟಬು ಪಡೆದುಕೊಂಡಿದ್ದಾರೆ. ಮೊದಲಿಗೆ ತೆಲುಗು ಚಿತ್ರದಲ್ಲಿ ನಟಿಸಿದರೂ ಬಾಲಿವುಡ್‌ನಲ್ಲಿ ಹೆಚ್ಚು ಗುರ್ತಿಸಿಕೊಂಡರು. 'ಪೆಹ್ಲೆ ಪೆಹ್ಲೆ ಪ್ಯಾರ್' ನಾಯಕಿಯಾಗಿ ಬಾಲಿವುಡ್‌ನಲ್ಲಿ ಟಬು ನಟಿಸಿದ ಚೊಚ್ಚಲ ಚಿತ್ರ. ಅಲ್ಲಿಂದ ಮುಂದೆ ಚೆಲುವೆ ಹಿಂತಿರುಗಿ ನೋಡಲೇಯಿಲ್ಲ. ತಮ್ಮ ಜಮಾನದ ಬಹುತೇಕ ಎಲ್ಲಾ ಬಾಲಿವುಡ್ ನಟರ ಜೊತೆಗೂ ತಬು ನಟಿಸಿ ಗೆದ್ದಿದ್ದಾರೆ. ಕೆಲ ಹಾಲಿವುಡ್ ಚಿತ್ರಗಳಲ್ಲೂ ಟಬು ನಟಿಸಿ ಗಮನ ಸೆಳೆದಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಚೆಲುವೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

  50 ಸಾವಿರ ರೂಪಾಯಿ ಫೇಸ್‌ಕ್ರೀಮ್.. ತಬು ಸೌಂದರ್ಯದ ಗುಟ್ಟು ರಟ್ಟು!50 ಸಾವಿರ ರೂಪಾಯಿ ಫೇಸ್‌ಕ್ರೀಮ್.. ತಬು ಸೌಂದರ್ಯದ ಗುಟ್ಟು ರಟ್ಟು!

  ಟಬು ಪೂರ್ಣ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ. 1971 ನವೆಂಬರ್ 4 ರಂದು ಹೈದರಾಬಾದ್‌ನಲ್ಲಿ ಟಬು ಜನಿಸಿದರು. ಟಬು ಖ್ಯಾತ ನಟಿ ಫರಾ ನಾಝ್ ಸಹೋದರಿ. ಸದಾ ಟಬು ಸಹೋದರಿ ಜೊತೆ ಸಿನಿಮಾ ಶೂಟಿಂಗ್ ಸೆಟ್‌ಗೆ ಹೋಗುತ್ತಿದ್ದರು. 1980ರಲ್ಲಿ ಪಾರ್ಟಿಯೊಂದರಲ್ಲಿ ನಟ ಜಾಕಿಶ್ರಾಫ್‌ರಿಂದ ಲೈಂಗಿಕ ದೌರ್ಜನ್ಯ ಎದುರಿಸಿದ್ದರು ಎಂದು ಹೇಳಲಾಗಿತ್ತು. ಇದೇ ಕಾರಣಕ್ಕೆ ಟಬು ಹಾಗೂ ಜಾಕಿಶ್ರಾಫ್ ಯಾವುದೇ ಸಿನಿಮಾದಲ್ಲೂ ಲೀಡ್‌ ರೋಲ್‌ಗಳಲ್ಲಿ ನಟಿಸಲಿಲ್ಲ.

  ಅಂದು ಪಾರ್ಟಿಯಲ್ಲಿ ಆಗಿದ್ದೇನು?

  ಅಂದು ಪಾರ್ಟಿಯಲ್ಲಿ ಆಗಿದ್ದೇನು?

  1986ರಲ್ಲಿ ಜಾಕಿಶ್ರಾಫ್ ಹಾಗೂ ಫರಾ ನಾಝ್ ನಟನೆಯ ಸಿನಿಮಾ ಚಿತ್ರೀಕರಣ ಮಾರೀಷಸ್‌ನಲ್ಲಿ ನಡೀತಿತ್ತು. ಚಿತ್ರದ ಮುಖ್ಯಪಾತ್ರದಲ್ಲಿ ನಟಿಸ್ತಿದ್ದ ಡೇನಿ ಡೆಂಗ್ಜೋವಾ ಅಲ್ಲೇ ಇದ್ದ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯಲ್ಲಿ ಸಹೋದರಿ ಜೊತೆ ಟಬು ಕೂಡ ಭಾಗಿ ಆಗಿದ್ದರು. ಫರಾ ಕುಡಿದು ಪ್ರಜ್ಞೆ ತಪ್ಪಿದಾಗ ಅದನ್ನು ನೋಡಿ ಟಬು ಆತಂಕಗೊಂಡಿದ್ದರು. ಇದೇ ಸಮಯದಲ್ಲಿ ಕುಡಿದ ಮತ್ತಿನಲ್ಲಿ ನಟ ಜಾಕಿಶ್ರಾಫ್ ಟಬುಗೆ ಲೈಂಗಿಕ ಕಿರುಕುಳ ನೀಡಿದ್ದರಂತೆ. ಕೂಡಲೇ ಅಲ್ಲೇ ಇದ್ದ ಡೇನಿ ಡೆಂಗ್ಜೋವಾ ಪರಿಸ್ಥಿತಿಯನ್ನು ತಿಳಿಗೊಳಿಸಿ ಇಬ್ಬರನ್ನು ಅಲ್ಲಿಂಗ ಕಳುಹಿಸಿಕೊಟ್ಟಿದ್ದರಂತೆ.

  ನಾಗಾರ್ಜುನ ಹಾಗೂ ಟಬು ಅಫೇರ್ ಬಗ್ಗೆ ಅಮಲಾ ಅಕ್ಕಿನೇನಿ ಅಭಿಪ್ರಾಯವೇನಿತ್ತು?ನಾಗಾರ್ಜುನ ಹಾಗೂ ಟಬು ಅಫೇರ್ ಬಗ್ಗೆ ಅಮಲಾ ಅಕ್ಕಿನೇನಿ ಅಭಿಪ್ರಾಯವೇನಿತ್ತು?

  ಘಟನೆ ಬಗ್ಗೆ ಟಬು ಮೌನ!

  ಘಟನೆ ಬಗ್ಗೆ ಟಬು ಮೌನ!

  ಅಂದು ಪಾರ್ಟಿಯಲ್ಲಿ ನಡೆದ ಘಟನೆ ಬಗ್ಗೆ ಯಾರು ಮಾತನಾಡಿರಲಿಲ್ಲ. ಆದರೆ ನಟಿ ಫರಾ ನಾಝ್ ತನ್ನ ಸಹೋದರಿ ವಿಚಾರದಲ್ಲಿ ಜಾಕಿಶ್ರಾಫ್ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಭಾರೀ ಆರೋಪಗಳನ್ನು ಮಾಡಿದ್ದರು. ಇದು ಅವತ್ತಿನ ಕಾಲಕ್ಕೆ ದೊಡ್ಡದಾಗಿ ಸದ್ದು ಮಾಡಿತ್ತು. ಆದರೆ ಈ ಬಗ್ಗೆ ಟಬು ಮಾತ್ರ ಮಾತನಾಡುವ ಗೋಜಿಗೇ ಹೋಗಲಿಲ್ಲ. ಬಾಲಿವುಡ್‌ನ ಸಾಕಷ್ಟು ಜನ ನಟರ ಜೊತೆ ನಟಿಸಿದ ಈ ಚೆಲುವೆ ಜಾಕಿಶ್ರಾಫ್ ಜೋಡಿಯಾಗಿ ಮಾತ್ರ ನಟಿಸಲೇ ಇಲ್ಲ. ಅಂದು ಪಾರ್ಟಿಯಲ್ಲಿ ನಡೆದ ಘಟನೆಯಿಂದಲೇ ಇವರಿಬ್ಬರು ನಟಿಸಲಿಲ್ಲ ಎಂದು ಹೇಳಲಾಗುತ್ತದೆ.

  ಹೈದರಾಬಾದ್‌ನಲ್ಲಿ ಹುಟ್ಟಿಬೆಳೆದ ಟಬು

  ಹೈದರಾಬಾದ್‌ನಲ್ಲಿ ಹುಟ್ಟಿಬೆಳೆದ ಟಬು

  ಹೈದರಾಬಾದ್‌ನ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ ಬೆಳೆದ ನಟಿ ಟಬು ಅಲ್ಲೇ ಸೆಂಟ್ ಆನ್ಸ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದರು. ನಂತರ ಅಲ್ಲಿಂದ ಮುಂಬೈಗೆ ಶಿಫ್ಟ್ ಆಗಿದ್ದ ಚೆಲುವೆ ಸೆಂಟ್ ಜೇವಿಯರ್ಸ್ ಕಾಲೇಜ್‌ನಲ್ಲಿ ಪಿಯುಸಿ ಮುಗಿಸಿದ್ದರು. ಹೈದರಾಬಾದ್‌ನಲ್ಲಿ ಓದುತ್ತಿರುವಾಗಲೇ ಟಬು, ಸ್ಮಿತಾಪಾಟೀಲ್ ಅಭಿನಯದ 'ಬಜಾರ್' ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ನಂತರ 1985ರಲ್ಲಿ ದೇವಾನಂದ್‌ ನಟನೆಯ 'ಹಮ್‌ ನವ್‌ ಜವಾನ್‌' ಚಿತ್ರದಲ್ಲಿ ಟೀನೇಜ್‌ ಹುಡುಗಿಯಾಗಿ ಮಿಂಚಿದ್ದರು. ಆ ನಂತರ ತೆಲುಗು ಸಿನಿಮಾ ಮೂಲಕ ನಾಯಕಿಯಾಗಿ ಪರಿಚಿತರಾದರು.

  ಸೂಪರ್ ಹಿಟ್ ಚಿತ್ರಗಳಲ್ಲಿ ಟಬು ನಟನೆ

  ಸೂಪರ್ ಹಿಟ್ ಚಿತ್ರಗಳಲ್ಲಿ ಟಬು ನಟನೆ

  ಆರಂಭದಲ್ಲಿ ಬಾಲಿವುಡ್ ಸಿನಿಮಾಗಳು ಸೋಲುಂಡರು ನಿಧಾನವಾಗಿ ಟಬು ಬಾಲಿವುಡ್ ಪ್ರೇಕ್ಷಕರ ಮನಗೆದ್ದರು. 'ವಿರಾಸತ್, 'ಬಾರ್ಡರ್', 'ಚಾಚೀ 420', 'ತಕ್ಷಕ್', 'ಚಾಂದಿನಿ ಬಾರ್', 'ಮಕ್ಬೂಲ್', 'ಚೀನೀ ಕಮ್', 'ಹೈದರ್', 'ಅಂಧಾದುನ್' ಟಬು ನಟನೆಯ ಕೆಲ ಪ್ರಮುಖ ಸಿನಿಮಾಗಳು. ಬೋಲ್ಡ್ ಅವತಾರದಿಂದ ಮೋಡಿ ಮಾಡಿದ್ದು ಅಷ್ಟೇ ಅಲ್ಲ, ಟಬು ಅದ್ಬುತ ಅಭಿನಯದಿಂದಲೂ ಮೋಡಿ ಮಾಡಿದ್ದಾರೆ. ಇತ್ತೀಚೆಗೆ 'ಅಲಾ ವೈಕುಂಟಪುರಂಲೋ' ತೆಲುಗು ಚಿತ್ರದಲ್ಲಿ ಪೋಷಕ ನಟಿಯಾಗಿ ನಟಿಸಿದ್ದರು. ಇದಕ್ಕಾಗಿ ಸೈಮಾ ಅವಾರ್ಡ್ ಕೂಡ ಟಬುಗೆ ಸಿಕ್ಕಿತ್ತು.

  English summary
  Actor Jackie Shroff was accused of molesting Actress Tabu during a location shoot in Mauritius. Tabu has never worked opposite is Jackie Shroff. Know More
  Friday, November 4, 2022, 20:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X