For Quick Alerts
  ALLOW NOTIFICATIONS  
  For Daily Alerts

  ದಕ್ಷಿಣದ ಖ್ಯಾತ ನಟನೊಂದಿಗೆ ದುಬೈನಲ್ಲಿ ದೀಪಾವಳಿ ಆಚರಿಸಿದ ಸಂಜಯ್ ದತ್

  |

  ನಟ ಸಂಜಯ್ ದತ್ ಈಗಷ್ಟೆ ಕ್ಯಾನ್ಸರ್‌ನಿಂದ ಗುಣಮುಖ ಆಗಿ, ಮತ್ತೆ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಸಾವಿನೊಂದಿಗೆ ಸೆಣಸಿ ಬಂದಿರುವ ಸಂಜಯ್‌ ದತ್‌ಗೆ ಈ ದೀಪಾವಳಿ ಬಹಳ ವಿಶೇಷ. ಹಾಗಾಗಿ ಈ ದೀಪಾವಳಿಯನ್ನು ವಿಶೇಷವಾಗಿ ಆಚರಿಸಿದ್ದಾರೆ ನಟ ಸಂಜಯ್.

  ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದ ಸಂಜಯ್ ದತ್ ಈಗಷ್ಟೆ ಚೇತರಿಸಿಕೊಂಡಿದ್ದು, ದುಬೈನಲ್ಲಿಯೇ ಕುಟುಂಬ ಹಾಗೂ ಗೆಳೆಯರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಮುಂಬೈ ನಲ್ಲಿ ಪಟಾಕಿಗಳಿಂದ ಆಗಬಹುದಾದ ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಸಂಜಯ್ ದುಬೈ ಗೆ ಹೋಗಿದ್ದಾರೆ ಎಂದೂ ಸಹ ಹೇಳಲಾಗುತ್ತದೆ.

  ಸಂಜಯ್ ದತ್ ಅವರು ದುಬೈನಲ್ಲಿ ಅಪಾರ್ಟ್‌ಮೆಂಟ್ ಹೊಂದಿದ್ದು, ಅಲ್ಲಿಯೇ ಈ ಬಾರಿ ಪತ್ನಿ ಹಾಗೂ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ್ದಾರೆ. ವಿಶೇಷವೆಂದರೆ ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು ಸಂಜಯ್ ದತ್ ಜೊತೆಗೆ ಹಬ್ಬ ಆಚರಿಸಿದ್ದಾರೆ.

  ಸಂಜಯ್ ದತ್ ಮನೆಗೆ ಭೇಟಿ ನೀಡಿದ ಮೋಹನ್‌ಲಾಲ್

  ಸಂಜಯ್ ದತ್ ಮನೆಗೆ ಭೇಟಿ ನೀಡಿದ ಮೋಹನ್‌ಲಾಲ್

  ಮಲಯಾಳಂನ ಸೂಪರ್ ಸ್ಟಾರ್ ನಟ ಮೋಹನ್‌ಲಾಲ್ ದೀಪಾವಳಿ ಹಬ್ಬದಂದು ಸಂಜಯ್ ದತ್ ಅವರ ದುಬೈನ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಸಂಜಯ್ ದತ್-ಮಾನ್ಯತಾ ಜೊತೆಗೆ ದೀಪಾವಳಿ ಆಚರಿಸಿದ್ದಾರೆ.

  ಸಮೀರ್ ಹಮ್ಸಾ ಸಹ ಇದ್ದರು

  ಸಮೀರ್ ಹಮ್ಸಾ ಸಹ ಇದ್ದರು

  ಸಂಜಯ್ ದತ್ ಮನೆಗೆ ಭೇಟಿ ನೀಡುವ ವೇಳೆ ಮೋಹನ್‌ಲಾಲ್ ಜೊತೆಗೆ ಅವರ ಆತ್ಮೀಯ ಗೆಳೆಯ ಹಾಗೂ ಬ್ಯುಸಿನೆಸ್ ಪಾರ್ಟನರ್ ಸಮೀರ್ ಹಮ್ಸಾ ಸಹ ಜೊತೆಗಿದ್ದಾರೆ. ಎಲ್ಲರೂ ಸೇರಿ ದೀಪಾವಳಿ ಹಬ್ಬ ಆಚರಿಸಿ, ಸಹಭೋಜನ ಮಾಡಿದ್ದಾರೆ.

  ಐಪಿಎಲ್ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದ ಮೋಹನ್‌ಲಾಲ್

  ಐಪಿಎಲ್ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದ ಮೋಹನ್‌ಲಾಲ್

  ಸಂಜಯ್ ದತ್ ಹಾಗೂ ಮೋಹನ್‌ಲಾಲ್ ಆಪ್ತ ಮಿತ್ರರು. ಮಾನ್ಯತಾ ಸಹ ಮೋಹನ್‌ಲಾಲ್ ಗೆ ಮಿತ್ರರೇ. ಮೋಹನ್‌ ಲಾಲ್ ಕಳೆದ ಕೆಲವು ದಿನಗಳಿಂದ ದುಬೈ ನಲ್ಲಿ ಇದ್ದಾರೆ. ಮೋಹನ್‌ಲಾಲ್ ದುಬೈ ನಲ್ಲಿ ಆಸ್ತಿ ಹಾಗೂ ವ್ಯವಹಾರವನ್ನು ಹೊಂದಿದ್ದಾರೆ. ದುಬೈನಲ್ಲಿ ಮೋಹನ್‌ಲಾಲ್‌ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

  ಜೇಮ್ಸ್ ಚಿತ್ರದಲ್ಲಿ ಪುನೀತ್ ಎದುರು ಅಬ್ಬರಿಸಲಿದ್ದಾರೆ ಬಾಲಿವುಡ್ ನಟ | James | Puneeth Rajkumar
  ಕೆಜಿಎಫ್ 2 ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ

  ಕೆಜಿಎಫ್ 2 ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ

  ಸಂಜಯ್ ದತ್, ಕೆಜಿಎಫ್ 2 ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವವರಿದ್ದಾರೆ. ಅದರ ಹೊರತಾಗಿ ಮುನ್ನಾಭಾಯ್ 3, ತೋರ್‌ಬಾಜ್, ದಿ ಗುಡ್ ಮಹಾರಾಜ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಇನ್ನು ಮೋಹನ್‌ಲಾಲ್ ಅವರು ದೃಶ್ಯಂ 2 ಸಿನಿಮಾದ ಚಿತ್ರೀಕರಣ ಈಗಷ್ಟೆ ಮುಗಿಸಿದ್ದಾರೆ.

  English summary
  Actor Mohanlal visited Sanjay Dutt's apartment in Dubai on Deepawali night. Both celebrated festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X