»   » ಪತ್ನಿಗೆ ಬಡಿಗೆಯಲ್ಲಿ ಥಳಿಸಿ ತಲೆಮರೆಸಿಕೊಂಡ ಓಂ ಪುರಿ

ಪತ್ನಿಗೆ ಬಡಿಗೆಯಲ್ಲಿ ಥಳಿಸಿ ತಲೆಮರೆಸಿಕೊಂಡ ಓಂ ಪುರಿ

Posted By:
Subscribe to Filmibeat Kannada

ಭಾರತೀಯ ಚಿತ್ರರಂಗದ ಪ್ರಮುಖ ನಟ ಓಂ ಪುರಿ ಬಂಧನಕ್ಕೆ ವೇದಿಕೆ ಸಿದ್ಧವಾಗಿದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಓಂ ಪುರಿ ಅವರ ಪತ್ನಿ ನಂದಿತಾ ಪುರಿ ಅವರು ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಿರುವುದೇ ಇದಕ್ಕೆ ಕಾರಣ.

ಇಬ್ಬರ ನಡುವೆ ಒಂದು ಸಣ್ಣ ವಿಷಯಕ್ಕೆ ವಾದ ವಿವಾದ ಮನಸ್ತಾಪ ಬಂದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ತಮ್ಮ ಪತ್ನಿಯ ಮೇಲೆ ಓಂ ಪುರಿ ಕೈಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡುತ್ತಾ, ನಂದಿತಾ ಮತ್ತು ಓಂ ಪುರಿ ತಮ್ಮ ಫ್ಲಾಟ್ ಮೆಯಿಂಟೆನೆನ್ಸ್ ವಿಚಾರವಾಗಿ ಜಗವಾಡಿಕೊಂಡಿದ್ದಾರೆ.

Om Puri

ಈ ಸಂದರ್ಭದಲ್ಲಿ ಓಂ ಪುರಿ ತಮ್ಮ ಪತ್ನಿಯ ಮೇಲೆ ಬಡಿಗೆ ತೆಗೆದುಕೊಂಡು ದಾಳಿ ಮಾಡಿದರು ಎಂದು ತಿಳಿಸಿದ್ದಾರೆ. ಈ ಸಂಬಂಧ ಓಂ ಪುರಿ ಮೇಲೆ ಐಪಿಸಿ ಸೆಕ್ಷನ್ 324, 506, 504ನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಂದಿತಾ ಅವರು ಓಂ ಪುರಿ ಅವರ ಎರಡನೇ ಹೆಂಡತಿ. ತಮ್ಮ ಮೊದಲ ಪತ್ನಿ ಸೀಮಾ ಕಪೂರ್ ಅವರಿಂದ ಓಂ ಪುರಿ ದೂರ ಸರಿದ್ದಾರೆ. ಈಗ ಎರಡನೇ ಪತ್ನಿಯ ಮೇಲೆ ಕೈ ಮಾಡುವ ಮೂಲಕ ಮತ್ತೊಮ್ಮೆ ಓಂ ಪುರಿ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಅವರನ್ನು ಪೊಲೀಸರು ಯಾವುದೇ ಸಂದರ್ಭದಲ್ಲಿ ಬಂಧಿಸುವ ಸಾಧ್ಯತೆಗಳಿವೆ.

ತಮ್ಮದೇ ಆದಂತಹ ವಿಶಿಷ್ಟ ಶೈಲಿಯ ಅಭಿನಯಕ್ಕೆ ಓಂ ಪುರಿ ಹೆಸರಾಗಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ಅಮೋಘ ಅಭಿನಯ ನೀಡಿರುವುದು ಗೊತ್ತೇ ಇದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಗಿನ 'ಎಕೆ 47' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ. ತಬ್ಬಲಿಯು ನೀನಾದೆ ಮಗನೆ, ಧ್ರುವ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಅಂದಹಾಗೆ ಓಂ ಪುರಿ ಪತ್ನಿ ನಂದಿತಾ ಅವರು ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದು ವಡೋದರ ಪೊಲೀಸ್ ಠಾಣೆಯಲ್ಲಿ ಆ.23ರಂದು ದೂರು ದಾಖಲಿಸಿದ್ದಾರೆ.

ನಂದಿತಾ ಮತ್ತು ಓಂ ಪುರಿ ಜಗಳವಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೊಮ್ಮೆ 2009ರಲ್ಲಿ ನಂದಿತಾ ತಮ್ಮ ಪತಿ ಬಗ್ಗೆ ಆತ್ಮಚರಿತ್ರೆ ಬರೆದಿದ್ದರು. ಅದಕ್ಕೆ "Unlikely Hero: The Story Of Om Puri" ಎಂದು ಹೆಸರಿಟ್ಟಿದ್ದರು. ಈ ಪುಸ್ತಕದಲ್ಲಿ ಓಂ ಪುರಿ ಅವರ ಖಾಸಗಿ ಲೈಂಗಿಕ ವಿಚಾರಗಳೂ ಪ್ರಸ್ತಾಪವಾಗಿದ್ದವು. ಆಗಲೇ ತಮ್ಮ ಪತ್ನಿಯ ಮೇಲೆ ಓಂ ಪುರಿ ಗರಂ ಆಗಿದ್ದರು. ಬಂಧನದ ಭೀತಿಯಲ್ಲಿರುವ ಓಂ ಪುರಿ ತಲೆಮರೆಸಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

English summary
Veteran actor Om Puri has been reportedly booked by the police, after his wife Nandita Puri filed a complaint against him, alleging domestic violence. Reportedly, Nandita alleged that Puri had beaten her up with a stick and also threatened her last week, after a heated up argument between the couple.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada