For Quick Alerts
  ALLOW NOTIFICATIONS  
  For Daily Alerts

  'ಶೋ ಮ್ಯಾನ್' ರಾಜ್ ಕಪೂರ್ ಹುಟ್ಟುಹಬ್ಬದ ಸವಿನೆನಪು

  By Naveen
  |

  ಬಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕ ರಾಜ್ ಕಪೂರ್ ಅವರಿಗಿಂದು (ಡಿಸೆಂಬರ್ 14) ಜನುಮದಿನದ ಸವಿನೆನಪು. ಹಿಂದಿ ಚಿತ್ರರಂಗದಲ್ಲಿ 'ಶೋ ಮ್ಯಾನ್' ಎಂದೇ ಕರೆಸಿಕೊಳ್ಳುತ್ತಿದ್ದ ಅದ್ಬುತ ಕಲಾವಿದ ರಾಜ್ ಕಪೂರ್ ಅವರ 93ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಬಾಲಿವುಡ್ ನಲ್ಲಿ ಮನೆಮಾಡಿದೆ.

  ರಾಜ್ ಕಪೂರ್ ತಮ್ಮ 11ನೇ ವಯಸ್ಸಿನಲ್ಲಿಯೇ ಸಿನಿಮಾ ನಟನೆಯನ್ನು ಶುರು ಮಾಡಿದ್ದರು. 'ಇಂಕ್ವಿಲಾಬ್' ಚಿತ್ರದ ಮೂಲಕ ಪ್ರಥಮ ಬಾರಿಗೆ ಚಲನಚಿತ್ರಗಳಲ್ಲಿ ಇವರು ಕಾಣಿಸಿಕೊಂಡರು. ನಂತರ ಕೆಲ ಸಿನಿಮಾ ಮಾಡಿ 'ನೀಲ್‌ಕಮಲ್' ಚಿತ್ರದ ಮೂಲಕ ನಾಯಕ ನಟನಾಗಿ ಹೊರಹೊಮ್ಮಿದರು. 'ಆವಾರ' ಮತ್ತು 'ಬೂಟ್ ಪಾಲಿಶ್' ಸೇರಿದಂತೆ ಸಾಕಷ್ಟು ಸಿನಿಮಾಗಳು ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಅಂದಹಾಗೆ, ಬಾಲಿವುಡ್ ನಲ್ಲಿಯೂ ಚಾರ್ಲಿ ಚಾಪ್ಲಿನ್ ನಟನೆಯನ್ನು ನೆನಪು ಮಾಡಿದ ಖ್ಯಾತಿ ರಾಜ್ ಕಪೂರ್ ಅವರಿಗೆ ಸಲ್ಲುತ್ತದೆ.

  ರಾಜ್ ಕಪೂರ್ ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಭಾರತ ಸರಕಾರವು ಇವರನ್ನು 1971ರಲ್ಲಿ ಪದ್ಮಭೂಷಣ ಪ್ರಶಸ್ತಿ ಹಾಗೂ 1987ರಲ್ಲಿ ದಾದಾಸಾಹೇಬ್ ಪ್ರಶಸ್ತಿ ನೀಡಿ ಗೌರವಿಸಿತು. ಇದರೊಂದಿಗೆ ಬರೋಬ್ಬರಿ 9 ಬಾರಿ ಫಿಲ್ಮಿ ಫೇರ್ ಪ್ರಶಸ್ತಿ ಪಡೆದ ಕೀರ್ತಿ ಕೂಡ ರಾಜ್ ಕಪೂರ್ ಅವರಿಗೆ ಸಲ್ಲುತ್ತದೆ. ಇನ್ನು ಆಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದ ರಾಜ್ ಕಪೂರ್ 19988ರಲ್ಲಿ ಅಂದರೆ ಅವರ 63ನೇ ವಯಸ್ಸಿನಲ್ಲಿ ನಿಧನರಾಗಿದ್ದರು.

  English summary
  Bollywood actor Raj Kapoor 93th birth anniversary, the actor also known as 'the greatest showman of hindi cinema'. The Government of India honoured him with the Padma Bhushan 1971 and Dadasaheb Phalke Award in 1987.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X