For Quick Alerts
  ALLOW NOTIFICATIONS  
  For Daily Alerts

  ಸಿಕಂದರ್ ಕಾಮಿಕ್ಸ್ ಪಾತ್ರಕ್ಕೆ ಲೂಥ್ರಿಯಾ ಬುಲಾವ್

  |

  ಸಿಕಂದರ್ ಕಾಮಿಕ್ಸ್ ಆಧಾರಿತ ಚಿತ್ರದಲ್ಲಿ ಸದ್ಯದಲ್ಲೇ ಬಾಲಿವುಡ್ ನಟ ರಣಬೀರ್ ಕಪೂರ್ 'ಸೂಪರ್ ಹೀರೋ' ಪಾತ್ರದಲ್ಲಿ ನಟಿಸಲಿದ್ದಾರೆ. ಇದು ಮಿಲನ್ ಲೂಥ್ರಿಯಾ (Milan Luthria) ಅವರ ನಿರ್ದೇಶನದ ಬರಲಿರುವ ಚಿತ್ರ. ಈ ಚಿತ್ರ ಸಂಪೂರ್ಣವಾಗಿ ಹಾಸ್ಯ ಹಾಗೂ ವಿಡಂಬನೆಯಿಂದ ಕೂಡಿದ್ದು ಸಿಕಂದರ್ ಕಾಮಿಕ್ಸ್ ಇದರ ಆಧಾರಸ್ತಂಭವಾಗಿದೆ.

  ಸಿಕಂದರ್ ಕಾಮಿಕ್ಸ್ ಮೂಲತಃ ಮಕ್ಕಳ ಮನರಂಜಿಸಲು ಮಾಡಿರುವ ಪುಸ್ತಕ. ಇದು ಮಕ್ಕಳ ಕಾಮಿಕ್ಸ್ ಎಂದೇ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಇದರಲ್ಲಿ 'ಸೂಪರ್ ಹೀರೋ' ಅಥವಾ 'ಸೂಪರ್ ಮ್ಯಾನ್' ರೀತಿಯ ಪಾತ್ರವಿದೆ. ಅದನ್ನು ಪೋಷಿಸಲು ತಮಗೆ ಬಂದ ಆಫರನ್ನು 'ಒಕೆ' ಅಂದಿದ್ದಾರೆ ಬಾಲಿವುಡ್ ನಟ ರಣಬೀರ್ ಕಪೂರ್.

  ಇದೀಗ 'ಒನ್ಸ್ ಅಪಾನ್ ಅ ಟೈಮ್ ಇನ್ ಮುಂಬೈ-2' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರೂ ನಿರ್ದೇಶಕ ಲೂಥ್ರಿಯಾ, ಸದ್ದು, ಸುದ್ದಿಯಿಲ್ಲದೇ ಈ ಚಿತ್ರದ ಬಗ್ಗೆ ಪ್ಲಾನ್ ಮಾಡುತ್ತಿದ್ದಾರೆ; ಮ್ಯೂಸಿಕ್ ಕಂಪನಿಯೊಂದರ ಜೊತೆ ಈ ಸಂಬಂಧ ಮಾತುಕತೆಯೂ ನಡೆದಿದೆ. ಆದರೂ ಅದ್ಹೇಗೋ ಸುದ್ದಿ ಲೀಕ್ ಆಗಿ ಎಲ್ಲರಿಗೂ ತಲುಪುತ್ತಿದೆ. ನೀವೂ ಓದಿ ತಿಳಿದುಕೊಳ್ಳಿ...

  ಮಿಲನ್ ಲೂಥ್ರಿಯಾ ಈ ಚಿತ್ರದ ಬಗ್ಗೆ ನಟ ರಣಬೀರ್ ಕಪೂರ್ ಜೊತೆ ಮಾತನಾಡಿದ್ದಾರೆ ಎಂಬುದೂ ಗುಲ್ಲಾಗಿದೆ. ಆದರೆ ರಣಬೀರ್ ಇನ್ನೂ ಒಪ್ಪಿಲ್ಲ. ಮಕ್ಕಳ ಕಥೆಗೆ ನಾಯಕನಾಗುವ ಆಲೋಚನೆ ನಿಮಗೇಕೆ? ಅದಕ್ಕೆ ಮಕ್ಕಳೇ ಇದ್ದಾರೆ ಎನ್ನುತ್ತಿದ್ದಾರಂತೆ ಬಾಲಿವುಡ್ ಮಂದಿ. ಮುಂದಿನ ಕಥೆ ಏನು ಎಂಬುದು ಸದ್ಯದಲ್ಲೇ ಸಿಗಲಿದೆ, ನಿರೀಕ್ಷಿಸಿ. (ಏಜೆನ್ಸೀಸ್)

  English summary
  If rumors are to believed Ranbir Kapoor might play a superhero in Milan Luthria's next film based on Sikandar comics.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X