For Quick Alerts
  ALLOW NOTIFICATIONS  
  For Daily Alerts

  ಬೈಕುಲ್ಲಾ ಜೈಲಿನಿಂದ ಹೊರಬಂದ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಆರೋಪದಲ್ಲಿ ಬಂಧನವಾಗಿದ್ದ ನಟಿ ರಿಯಾ ಚಕ್ರವರ್ತಿ ಒಂದು ತಿಂಗಳ ನಂತರ ಮನೆಗೆ ಹಿಂತಿರುಗಿದ್ದಾರೆ.

  ಸೆಪ್ಟೆಂಬರ್ 8 ರಂದು ಎನ್‌ಸಿಬಿ ಅಧಿಕಾರಿಗಳಿಂದ ಅರೆಸ್ಟ್ ಆಗಿದ್ದ ನಟಿ ರಿಯಾಗೆ ಇಂದು (ಅಕ್ಟೋಬರ್ 7 ರಂದು) ಬಾಂಬೆ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

  ನಟಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಿದ ಬಾಂಬೆ ಹೈ ಕೋರ್ಟ್

  ಕೋರ್ಟ್‌ನ ಆದೇಶ ಪ್ರತಿ ಪಡೆದಿದ್ದ ರಿಯಾ ಪರ ವಕೀಲರು, ಬೈಕುಲ್ಲಾ ಜೈಲಿನಿಂದ ರಿಯಾ ಅವರನ್ನು ಹೊರಗಡೆ ಕರೆದುಕೊಂಡು ಬಂದಿದ್ದಾರೆ. ಜೈಲಿನಿಂದ ಹೊರಬಂದ ರಿಯಾ ಚಕ್ರವರ್ತಿ ನೇರವಾಗಿ ಮುಂಬೈನಲ್ಲಿರುವ ಅವರ ನಿವಾಸಕ್ಕೆ ಹಿಂತಿರುಗಿದ್ದಾರೆ.

  ಡ್ರಗ್ಸ್ ಆರೋಪದಲ್ಲಿ ಬಂಧನವಾಗಿದ್ದ ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರವರ್ತಿಗೆ ಜಾಮೀನು ಸಿಕ್ಕಿಲ್ಲ. ಹೀಗಾಗಿ, ಅಕ್ಟೋಬರ್ 20ರವರೆಗೂ ಜೈಲಿನಲ್ಲೇ ಇರಬೇಕಾಗಿದೆ.

  ಅಭಿಮಾನಿ ತೋರಿದ ಪ್ರೀತಿಗೆ ಮೂಕನಂತಾದ ಅಪ್ಪು | Filmibeat Kannada

  ಸುಶಾಂತ್ ಸಿಂಗ್ ರಜಪೂತ್ ತನಿಖೆ ವೇಳೆ ಡ್ರಗ್ಸ್ ಪೂರೈಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ರಿಯಾ ಸಹೋದರ ಶೌವಿಕ್ ಚಕ್ರವರ್ತಿಯನ್ನು ಸೆಪ್ಟೆಂಬರ್ 4 ರಂದು ಎನ್‌ಸಿಬಿ ಅಧಿಕಾರಿಗಳನ್ನು ಬಂಧಿಸಿದ್ದರು. ಸೆಪ್ಟೆಂಬರ್ 8 ರಂದು ರಿಯಾ ಚಕ್ರವರ್ತಿಯನ್ನು ಸಹ ಎನ್‌ಸಿಬಿ ವಶಕ್ಕೆ ಪಡೆದುಕೊಂಡರು. ರಿಯಾ ಅವರಿಗೆ ಎನ್‌ಡಿಪಿಎಸ್ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಮಂಗಳವಾರ ರಿಯಾ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ಆದ್ರೆ, ಅಕ್ಟೋಬರ್ 20ರ ವರೆಗೂ ನ್ಯಾಯಾಂಗ ಬಂಧನ ಮುಂದುವರಿಸುವಂತೆ ಆದೇಶಿಸಿತ್ತು.

  English summary
  Actor Rhea Chakraborty reaches her residence in Mumbai after getting bail from Bombay High Court.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X