For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಹಿಂದಿ ರೀಮೆಕ್ ಬಗ್ಗೆ ರಿಷಬ್ ಶೆಟ್ಟಿ ಮಾತು: ತಮ್ಮ ಪಾತ್ರ ಯಾರು ಮಾಡಿದರೆ ಸೂಕ್ತ ಎಂದರು?

  |

  ಯಾವುದೇ ಸಿನಿಮಾ ಬಂದರೂ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಆರ್ಭಟವನ್ನು ತಡೆಯೋಕೆ ಸಾಧ್ಯವಾಗ್ತಿಲ್ಲ. ರಿಷಬ್ ಶೆಟ್ಟಿ ಸಿನಿಮಾ ಸದ್ದು ಮಾಡ್ತಿರೋದು ನೋಡಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದಾರೆ. ಅದರಲ್ಲಿ ನಿನ್ನೆ(ಅಕ್ಟೋಬರ್ 29) ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಿದೆ. ಇನ್ನು ಚಿತ್ರವನ್ನು ಹಿಂದಿಗೆ ರೀಮೆಕ್ ಮಾಡುವ ಬಗ್ಗೆಯೂ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.

  ಅಕ್ಟೋಬರ್ 14ರಂದು ಹಿಂದಿಗೆ ಡಬ್ ಆಗಿ ರಿಲೀಸ್ ಆಗಿದ್ದ 'ಕಾಂತಾರ' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ. ವೀಕೆಂಡ್‌ ಮಾತ್ರವಲ್ಲ ವೀಕ್‌ಡೇಸ್‌ನಲ್ಲೂ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. 15ನೇ ದಿನಕ್ಕಿಂತ 16ನೇ ದಿನದ ಕಲೆಕ್ಷನ್ ಜೋರಾಗಿದೆ. ಬಿಟೌನ್ ಬಾಕ್ಸಾಫೀಸ್ ಪಂಡಿತರಿಗೂ ಇದು ಅಚ್ಚರಿ ತಂದಿದೆ. ದೀಪಾವಳಿ ಸಂಭ್ರಮದಲ್ಲಿ ತೆರೆಗಪ್ಪಳಿಸಿದ 'ರಾಮ್‌ಸೇತು' ಹಾಗೂ 'ಥ್ಯಾಂಕ್‌ಗಾಡ್' ಸಿನಿಮಾಗಳು ಕೂಡ 'ಕಾಂತಾರ' ಎದುರು ಮಂಕಾಗಿವೆ. ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಸುಳಿವು ಸಿಕ್ತಿದೆ.

  ಗಂಧದ ಗುಡಿ ಫಸ್ಟ್ ಡೇ ಕಲೆಕ್ಷನ್ ಎಷ್ಟು? 'ಕಾಂತಾರ'ದ ವಿಶ್ವ ದಾಖಲೆ ಮುರಿಯುವತ್ತ ಅಪ್ಪು ಕೊನೆ ಸಿನಿಮಾ!ಗಂಧದ ಗುಡಿ ಫಸ್ಟ್ ಡೇ ಕಲೆಕ್ಷನ್ ಎಷ್ಟು? 'ಕಾಂತಾರ'ದ ವಿಶ್ವ ದಾಖಲೆ ಮುರಿಯುವತ್ತ ಅಪ್ಪು ಕೊನೆ ಸಿನಿಮಾ!

  ಕರ್ನಾಟಕ ಬಿಟ್ಟು ಹೊರ ರಾಜ್ಯಗಳಲ್ಲಿ ಹಾಗೂ ಹೊರ ದೇಶಗಳಲ್ಲಿ ಸಿನಿಮಾ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಚಿತ್ರತಂಡದ ನಿರೀಕ್ಷೆಯನ್ನು ಮೀರಿ ಸಿನಿಮಾ ಸದ್ದು ಮಾಡ್ತಿದೆ. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸುತ್ತಿದೆ. ಪ್ರೇಕ್ಷಕರು ಪದೇ ಪದೇ ಸಿನಿಮಾ ನೋಡಲು ಥಿಯೇಟರ್‌ಗೆ ಬರ್ತಿದ್ದಾರೆ.

  16ನೇ ದಿನ 4.10 ಕೋಟಿ ಕಲೆಕ್ಷನ್

  16ನೇ ದಿನ 4.10 ಕೋಟಿ ಕಲೆಕ್ಷನ್

  'ಕಾಂತಾರ' ಹಿಂದಿ ವರ್ಷನ್ ನಿನ್ನೆ ಭಾರತದಲ್ಲಿ 4.10 ಕೋಟಿ ರೂ. ಕಲೆಕ್ಷನ್ ಮಾಡಿದೆ. ಶುಕ್ರವಾರ 2.75 ಕೋಟಿ ರೂ. ಗಳಿಸಿದ್ದ ಸಿನಿಮಾ ಮರುದಿನ ಅದಕ್ಕಿಂತ ಎರಡರಷ್ಟು ಗಳಿಕೆ ಕಂಡಿರುವುದು ವಿಶೇಷ. ಸಿನಿಮಾ ರಿಲೀಸ್ ಆದ 3ನೇ ವಾರದಲ್ಲಿ ಹೀಗೆ ಏಕಾಏಕಿ ಕಲೆಕ್ಷನ್ ಡಬಲ್ ಆಗುವುದು ಎಂದರೆ ತಮಾಷೆ ಮಾತಲ್ಲ. ಒಳ್ಳೆ ಕಂಟೆಂಟ್ ಇದ್ದರೆ ಮಾತ್ರ ಇಂತಹ ಮ್ಯಾಜಿಕ್ ನಡೆಯಲು ಸಾಧ್ಯ ಎಂದು ಕೆಲವರು ಹೇಳುತ್ತಿದ್ದಾರೆ.

  Breaking: 'ಕಾಂತಾರ'ತಂಡಕ್ಕೆ ಸಂಕಷ್ಟ: 'ವರಹರೂಪಂ' ಹಾಡಿಗೆ ತಡೆ ನೀಡಿದ ಕೇರಳ ಕೋರ್ಟ್!Breaking: 'ಕಾಂತಾರ'ತಂಡಕ್ಕೆ ಸಂಕಷ್ಟ: 'ವರಹರೂಪಂ' ಹಾಡಿಗೆ ತಡೆ ನೀಡಿದ ಕೇರಳ ಕೋರ್ಟ್!

  ಬಾಲಿವುಡ್‌ಗೆ ರೀಮೇಕ್?

  ಬಾಲಿವುಡ್‌ಗೆ ರೀಮೇಕ್?

  'ಕಾಂತಾರ' ಈಗಾಗಲೇ ಹಿಂದಿಗೆ ಡಬ್ ಆಗಿ ಸೂಪರ್ ಹಿಟ್ ಆಗ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಚಿತ್ರ ಹಿಂದಿಗೆ ರೀಮೆಕ್ ಆಗುತ್ತಾ? ಎಂದರೆ ಇಲ್ಲ ಎಂದಿದ್ದಾರೆ ರಿಷಬ್ ಶೆಟ್ಟಿ. ಸಂದರ್ಶನಲ್ಲಿ ಈ ಬಗ್ಗೆ ಮಾತನಾಡಿರುವ ರಿಷಬ್, ಹಿಂದಿಗೆ ಸಿನಿಮಾ ಈಗಾಗಲೇ ಡಬ್ ಆಗಿದೆ. ಹಾಗಾಗಿ ರೀಮೆಕ್ ಅಗತ್ಯ ಇಲ್ಲ ಎಂದಿದ್ದಾರೆ. ಒಂದು ವೇಳೆ ರೀಮೆಕ್ ಮಾಡಿದರೆ ಯಾರು ನಿಮ್ಮ ಪಾತ್ರ ಸೂಕ್ತ ಎನ್ನುವ ಪ್ರಶ್ನೆಗೂ ಉತ್ತರಿಸಿದ್ದಾರೆ. "ಅಂತಹ ಪಾತ್ರಗಳನ್ನು ಮಾಡಲು ನಮ್ಮ ಮೂಲ ಮತ್ತು ಸಂಸ್ಕೃತಿಯನ್ನು ನಂಬಬೇಕು. ಹಿಂದಿ ಚಿತ್ರರಂಗದಲ್ಲಿ ನಾನು ಮೆಚ್ಚುವ ಅನೇಕ ದೊಡ್ಡ ನಟರಿದ್ದಾರೆ. ಆದರೆ ನನಗೆ ರಿಮೇಕ್‌ ಮಾಡುವುದರಲ್ಲಿ ಆಸಕ್ತಿ ಇಲ್ಲ" ಎಂದಿದ್ದಾರೆ.

  200 ಕೋಟಿ ಗಡಿ ದಾಟಿದ ಕಲೆಕ್ಷನ್

  200 ಕೋಟಿ ಗಡಿ ದಾಟಿದ ಕಲೆಕ್ಷನ್

  ಈಗಾಗಲೇ 'ಕಾಂತಾರ' ಸಿನಿಮಾ ಒಟ್ಟು ಕಲೆಕ್ಷನ್ 200 ಕೋಟಿ ರೂ. ಗಡಿ ದಾಟಿರುವ ಸುಳಿವು ಸಿಗುತ್ತಿದೆ. ಸೆಪ್ಟೆಂಬರ್ 30ಕ್ಕೆ ಕನ್ನಡದಲ್ಲೇ ವಿಶ್ವದಾದ್ಯಂತ ಸಿನಿಮಾ ತೆರೆಕಂಡಿತ್ತು. ಅಕ್ಟೋಬರ್ 14ರ ನಂತರ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಹಿಂದಿ ಹಾಗೂ ತೆಲುಗಿನಲ್ಲಿ ಸಿನಿಮಾ ಕಲೆಕ್ಷನ್ ಜೋರಾಗಿದೆ. ಎಲ್ಲಾ ಭಾಷಿಕರಿಗೂ ಸಿನಿಮಾ ಅದ್ಭುತ ಅನುಭವ ನೀಡುತ್ತಿದೆ. ಈಗಾಗಲೇ ಹಿಂದಿ ಹಾಗೂ ತೆಲುಗು ವರ್ಷನ್ ಕಲೆಕ್ಷನ್ 30 ಕೋಟಿ ರೂ. ದಾಟಿದೆ.

  ರಿಷಬ್ ಶೆಟ್ಟಿ ವಿಜಯ ಯಾತ್ರೆ

  ರಿಷಬ್ ಶೆಟ್ಟಿ ವಿಜಯ ಯಾತ್ರೆ

  'ಕಾಂತಾರ' ರಿಲೀಸ್‌ಗೂ ಮೊದಲು ಮುಂಬೈ, ಚೆನ್ನೈ, ಹೈದರಾಬಾದ್‌ಗೆ ತೆರಳಿ ರಿಷಬ್ ಶೆಟ್ಟಿ ಪ್ರಚಾರ ಮಾಡಿ ಬಂದಿದ್ದರು. ಇದೀಗ ಚಿತ್ರತಂಡ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಬಂದಿದೆ. ಮುಂಬೈನ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ರಿಷಬ್ ಶೆಟ್ಟಿ ಭೇಟಿ ನೀಡಿದ್ದಾರೆ. ಕೊಚ್ಚಿನ, ಚೆನ್ನೈ, ತಿರುಪತಿ, ವೈಜಾಗ್‌ಗೆ ಹೋಗಿ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ಗೆಲ್ಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋ ವೈರಲ್ ಆಗಿದೆ.

  English summary
  Actor Rishab Shetty On Hindi Remake Of Kantara. Kantara Hindi continues with its phenomenal run in 3rd weekend. Know More.
  Sunday, October 30, 2022, 16:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X