»   » ಬಡವರಿಗಾಗಿ ಸಲ್ಮಾನ್ ಖಾನ್ ಆಸ್ಪತ್ರೆ, ರೆಸ್ಟೋರೆಂಟ್

ಬಡವರಿಗಾಗಿ ಸಲ್ಮಾನ್ ಖಾನ್ ಆಸ್ಪತ್ರೆ, ರೆಸ್ಟೋರೆಂಟ್

Posted By:
Subscribe to Filmibeat Kannada
ಬಾಲಿವುಡ್ ನಟ ಸಲ್ಮಾನ್ ಖಾನ್ ಕಡೆಗೂ ದೊಡ್ಡ ಮನಸ್ಸು ಮಾಡಿದ್ದಾರೆ. ಅವರ ಮನಸ್ಸಿನಲ್ಲಿ ಮುಂದೊಂದು ದಿನ ಚುನಾವಣೆಗೆ ಸ್ಪರ್ಧಿಸುವ ಆಸೆ ಏನಾದರೂ ಇದೆಯೋ ಏನೋ ಗೊತ್ತಿಲ್ಲ. ಅವರೀಗ ಬಡವರ ಉದ್ಧಾರಕ್ಕಾಗಿ ಟೊಂಕ ಕಟ್ಟಿದ್ದಾರೆ.

'ಬೀಯಿಂಗ್ ಹ್ಯೂಮನ್' ಎಂಬ ಸರ್ಕಾರೇತರ ಸಂಸ್ಥೆ ಜೊತೆ ಕೈಜೋಡಿಸಿ ಈಗಾಗಲೆ ಅಬಲರಿಗೆ ಸಹಾಯ ಹಸ್ತ ಚಾಚಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಇನ್ನೊಂದು ಸಾಹಸಕ್ಕೂ ಕೈಹಾಕಿದ್ದಾರೆ ಸಲ್ಲು ಮಿಯಾ.

ಹೋಟೆಲ್ ಮತ್ತು ಆಸ್ಪತ್ರೆಗಳನ್ನು ಸ್ಥಾಪಿಸುವ ಮೂಲಕ ಬಡ ಜನರಿಗೆ ನೆರವಾಗಲು ಮುಂದಾಗಿದ್ದಾರೆ. ಮುಂಬೈ ಮತ್ತು ಪುಣೆಯಲ್ಲಿ ಹೋಟೆಲ್ ಮತ್ತು ಆಸ್ಪತ್ರೆ ಸ್ಥಾಪಿಸಲು ಹೊರಟಿದ್ದಾರೆ. ಇದರಿಂದ ಬರುವ ಲಾಭವನ್ನು ಬಡವರ ಅಭ್ಯುದಯಕ್ಕೆ ಬಳಸುತ್ತೇನೆ ಎಂದು ಹೇಳಿದ್ದಾರೆ.

ಅಂದರೆ ಕೆರೆಯ ನೀರನು ಕೆರೆಗೆ ಚೆಲ್ಲಲು ಸಲ್ಲು ಮನಸ್ಸು ಮಾಡಿದ್ದಾರೆ. ಈ ಕೈಂಕರ್ಯಕ್ಕೆ ಸಲ್ಲು ಕುಟುಂಬ ಸದಸ್ಯರೂ ಕೈಜೋಡಿಸಿದ್ದಾರೆ. ಅರ್ಬಾಜ್ ಖಾನ್, ಮಲೈಕಾ ಅರೋರಾ, ಸೋಹೈಲ್ ಖಾನ್, ಅರ್ಪಿತಾ, ಅಲ್ವಿರಾ ಅವರೆಲ್ಲಾ ಸಲ್ಲು ಜೊತೆಗಿದ್ದಾರೆ. ಈಗಾಗಲೆ ಬೀಯಿಂಗ್ ಹ್ಯೂಮನ್ ಸಂಸ್ಥೆಯ ಉಡುಗೆ ತೊಡುಗೆ ಬಹಳಷ್ಟು ಜನಪ್ರಿಯವಾಗಿದೆ.

ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಈಗ ಹೋಟೆಲ್ ಉದ್ಯಮವನ್ನು ಆರಂಭಿಸುತ್ತಿದ್ದೇವೆ. ಚಾರಿಟಿ ಸಂಸ್ಥೆಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಇದೆ. ಎಲ್ಲರೂ ಒಂದೊಂದು ಚಾರಿಟಿ ಟ್ರಸ್ಟ್ ಗಳನ್ನು ಆರಂಭಿಸಿ. ಕಡೆಗೆ ಅದು ಎಲ್ಲಿಗೆ ಏರಿತ್ತದೆ ಏನಾಗುತ್ತದೆ ಎಂಬುದು ನಿಮಗೇ ಗೊತ್ತಾಗುತ್ತದೆ ಎಂದಿದ್ದಾರೆ ಸಲ್ಲು. (ಪಿಟಿಐ)

English summary
Bollywodo actor Salman Khan is planning to open restaurants and hospitals and insists it is not for business but for a noble cause. The profits earned from them will go to the needy people living in metros.
Please Wait while comments are loading...