For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೆಜಿಎಫ್ ನಟ ಸಂಜಯ್ ದತ್

  |

  ಬಾಲಿವುಡ್ ನಟ ಸಂಜಯ್ ದತ್ ಉಸಿರಾಟ ತೊಂದರೆಯಿಂದ ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಮತ್ತು ಸೋಮವಾರ ಮಧ್ಯಾಹ್ನವರೆಗೂ ಚಿಕಿತ್ಸೆ ಪಡೆದ ನಟನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಡಿಸ್ಚಾರ್ಜ್ ಆಗಿದ್ದಾರೆ.

  ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ KGF ತಯಾರಾಗಿದ್ದು ಹೀಗೆ | Filmibeat Kannada

  ಆಗಸ್ಟ್ 8 ರಂದು ರಾತ್ರಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದತ್ ಅವರನ್ನು ದಾಖಲಿಸಲಾಗಿತ್ತು. 'ಕೆಲವು ದಿನಗಳ ಕಾಲ ಸಂಜಯ್ ದತ್ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ. ಎಲ್ಲಾ ಅವಶ್ಯಕತ ಪರೀಕ್ಷೆಗಳಿಗೂ ಅವರು ಒಳಗಾಗಲಿದ್ದಾರೆ. ಪ್ರಸ್ತುತ ಕೊರೊನಾ ವರದಿ ನೆಗೆಟಿವ್ ಬಂದಿದೆ' ಎಂದು ದತ್ ಸಹೋದರಿ ಮಾಹಿತಿ ನೀಡಿದ್ದರು.

  ಉಸಿರಾಟದ ಸಮಸ್ಯೆ, ಸಂಜಯ್ ದತ್‌ ಆಸ್ಪತ್ರೆಗೆ ದಾಖಲುಉಸಿರಾಟದ ಸಮಸ್ಯೆ, ಸಂಜಯ್ ದತ್‌ ಆಸ್ಪತ್ರೆಗೆ ದಾಖಲು

  ಉಸಿರಾಟ ತೊಂದೆರೆ ಉಂಟಾದ ಹಿನ್ನೆಲೆ ಕೊರೊನಾ ವೈರಸ್ ತಗುಲಿರಬಬುದು ಎಂಬ ಅನುಮಾನ ವ್ಯಕ್ತವಾಗಿತ್ತು. ಹಾಗಾಗಿ, ಪರೀಕ್ಷೆ ಸಹ ನಡೆಸಲಾಗಿದೆ. ವರದಿಯಲ್ಲಿ ಕೊವಿಡ್ ನೆಗಿಟಿವ್ ಬಂದಿದೆ ಎಂದು ತಿಳಿದಿದೆ.

  ಸಂಜಯ್ ದತ್ ಮನೆಗೆ ತಲುಪಿದರು ಎಂಬ ವಿಚಾರ ತಿಳಿಯುತ್ತಿದ್ದಂತೆ ಕೆಲವು ಅಭಿಮಾನಿಗಳು ಅವರನ್ನು ನೋಡಲು ಮನೆ ಬಳಿ ಜಮಾಯಿಸಿದ್ದರು. ಮನೆಯಿಂದ ಹೊರಗೆ ಬಂದಿದ್ದ ದತ್ ಅಭಿಮಾನಿಗಳ ಕೈ ಸನ್ನೆ ಮಾಡಿ ಧನ್ಯವಾದ ತಿಳಿಸಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಅಂದ್ಹಾಗೆ, ನಟ ಸಂಜಯ್ ದತ್ ಮೊದಲ ಸಲ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯಶ್ ಅಭಿನಯದ ಕೆಜಿಎಫ್ 2 ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Actor Sanjay Dutt (in file pic) who was admitted to Lilavati Hospital on August 8 after he complained of breathlessness has been discharged.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X