For Quick Alerts
  ALLOW NOTIFICATIONS  
  For Daily Alerts

  ನೋವಿನ ನಡುವೆಯೂ ದೇಶಭಕ್ತಿ ಮರೆಯದ ಸಂಜಯ್ ದತ್

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸಂಜಯ್ ದತ್ 3ನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬಳಿಕ 4ನೇ ಹಂತದ ಕ್ಯಾನ್ಸರ್ ಇದೆ ಎಂದು ಮುಂಬೈನ ಆಸ್ಪತ್ರೆ ಮೂಲಗಳು ದೃಢಪಡಿಸಿವೆ.

  Superstar : Upendra ಅವರಿಗೆ ಮೊದಲ ಬಾರಿಗೆ ಕಥೆ ಹೇಳಿದ ಅನುಭವ ಹೇಗಿತ್ತು | Filmibeat Kannada

  ಸಂಜು ಬಾಬಾ ಬೇಗ ಗುಣ ಮುಖರಾಗಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಪ್ರಾರ್ಥನೆ ಮಾಡುತ್ತಿದ್ದಾರೆ. ಸಂಜಯ್ ದತ್ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ತೀವ್ರ ನೋವಿನ ನಡುವೆಯೂ ಸಂಜಯ್ ದತ್ ದೇಶಭಕ್ತಿ ಮರೆತಿಲ್ಲ.

  ಈ ಖ್ಯಾತ ನಟಿಯ ಜೊತೆ ಡ್ಯಾನ್ಸ್ ಮಾಡಲು ಸಂಜಯ್ ದತ್ ಭಯ ಬೀಳುತ್ತಿದ್ದರಂತೆ!

  ಇಂದು ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಈ ಸಂಭ್ರಮದ ಹಬ್ಬಕ್ಕೆ ಸಂಜಯ್ ದತ್ ಕೂಡ ವಿಶ್ ಮಾಡಿದ್ದಾರೆ. ದುಃಖದ ನಡುವೆಯೂ ದೇಶದ ಜನತೆಗೆ ಸ್ವಾತಂತ್ರ್ಯೋತ್ಸವಕ್ಕೆ ಶುಭಕೋರಿದ್ದಾರೆ. ಸಂಜುಬಾಬಾ ಶುಭಕೋರಿ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಬೇಗ ಗುಣಮುಖರಾಗಿ ಎಂದು ಪ್ರಾರ್ಥನೆ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.

  ಅಂದ್ಹಾಗೆ ಸಂಜಯ್ ದತ್ ಕೊನೆಯದಾಗಿ ಆತ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕೆಲಸಕ್ಕೆ ಬ್ರೇಕ್ ತೆಗೆದುಕೊಳ್ಳುವುದಾಗಿ ಟ್ವೀಟ್ ಮಾಡಿದ್ದರು. "ಹಾಯ್ ಫ್ರೆಂಡ್ಸ್, ನಾನು ವೈದ್ಯಕೀಯ ಚಿಕಿತ್ಸೆಗಾಗಿ ಕೆಲಸದಿಂದ ಕೊಂಚ ವಿರಾಮ ತೆಗೆದುಕುಳ್ಳುತ್ತಿದ್ದೀನಿ. ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನೊಂದಿಗೆ ಇದ್ದಾರೆ. ಮತ್ತು ನನ್ನ ಹಿತೈಶಿಗಳು ಚಿಂತಿಸಬೇಡಿ. ಅನಗತ್ಯವಾಗಿ ಊಹಾಪೂಹಗಳನ್ನು ಹಬ್ಬಿಸಬೇಡಿ. ನಿಮ್ಮ ಪ್ರೀತಿ ಮತ್ತು ಶುಭಾಶಯಗಳೊಂದಿಗೆ, ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ" ಎಂದಿದ್ದರು.

  ಸಂಜಯ್ ದತ್ ಈ ಟ್ವೀಟ್ ಮಾಡಿ ಕೆಲವು ಸಮಯದ ಬಳಿಕ ಕ್ಯಾನ್ಸರ್ ಇದೆ ಎನ್ನುವ ವಿಚಾರ ಬಹಿರಂಗವಾಯಿತು. ಆ ಬಳಿಕ ಸಂಜಯ್ ದತ್ ಸಾಮಾಜಿಕ ಜಾಲತಾಣದಲ್ಲಿ ಯಾವುದೆ ಪೋಸ್ಟ್ ಮಾಡಿರಲಿಲ್ಲ. ಇದೀಗ ಸ್ವಾತಂತ್ರ್ಯ ದಿನಾಚರಣೆಯ ವಿಶ್ ಮಾಡಿ ಪೋಸ್ಟ್ ಮಾಡಿದ್ದಾರೆ.

  English summary
  Bollywood Actor Sanjay Dutt post on social media for first time after since cancer diagnosis. Sanjay wishes Independence Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X