For Quick Alerts
  ALLOW NOTIFICATIONS  
  For Daily Alerts

  ಈ ಖ್ಯಾತ ನಟಿಯ ಜೊತೆ ಡ್ಯಾನ್ಸ್ ಮಾಡಲು ಸಂಜಯ್ ದತ್ ಭಯ ಬೀಳುತ್ತಿದ್ದರಂತೆ!

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸಂಜಯ್ ದತ್ ಗೆ 4ನೇ ಹಂತದ ಕ್ಯಾನ್ಸರ್ ಇರುವುದು ಮುಂಬೈನ ಆಸ್ಪತ್ರೆ ಮೂಲಗಳು ದೃಢಪಡಿಸಿವೆ. ಸಂಜು ಬಾಬಾ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಪ್ರಾರ್ಥನೆ ಮಾಡುತ್ತಿದ್ದಾರೆ.

  ಬಾಲಿವುಡ್ ನ ಪ್ರಸಿದ್ಧ ನಟರಲ್ಲಿ ಸಂಜಯ್ ದತ್ ಒಬ್ಬರು. ಎಂತಹದೆ ಪಾತ್ರಗಳನ್ನಾದರೂ ಲೀಲಾಜಾಲವಾಗಿ ಅಭಿನಯಿಸುವ ನಟ. ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟ ಸಂದಯ್ ದತ್ ನಟಿ ಮಾಧುರಿ ದೀಕ್ಷಿತ್ ಜೊತೆ ನಟಿಸಲು ಭಯ ಬಿದ್ದಿದ್ದರಂತೆ. ಮುಂದೆ ಓದಿ..

  ಸಂಜಯ್ ದತ್ ಗೆ 4ನೇ ಹಂತದ ಕ್ಯಾನ್ಸರ್ ಎಂದು ಖಚಿತ ಪಡಿಸಿದ ಆಸ್ಪತ್ರೆ ಮೂಲಗಳುಸಂಜಯ್ ದತ್ ಗೆ 4ನೇ ಹಂತದ ಕ್ಯಾನ್ಸರ್ ಎಂದು ಖಚಿತ ಪಡಿಸಿದ ಆಸ್ಪತ್ರೆ ಮೂಲಗಳು

  ಮಾಧುರಿ ಜೊತೆ ಡ್ಯಾನ್ಸ್ ಮಾಡಲು ಭಯಪಟ್ಟಿದ್ದ ಸಂಜಯ್

  ಮಾಧುರಿ ಜೊತೆ ಡ್ಯಾನ್ಸ್ ಮಾಡಲು ಭಯಪಟ್ಟಿದ್ದ ಸಂಜಯ್

  ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅಭಿನಯದ ಜೊತೆಗೆ ಉತ್ತಮ ಡ್ಯಾನ್ಸರ್. ಮಾಧುರಿ ನೃತ್ಯ ನೋಡಲು ಅಭಿಮಾನಿಗಳು ಮುಗಿಬಿದ್ದು ಚಿತ್ರಮಂದಿರಕ್ಕೆ ಹೋಗುತ್ತಿದ್ದರು. ಈ ಅದ್ಭುತ ನೃತ್ಯಗಾರ್ತಿಯ ಜೊತೆ ಹೆಜ್ಜೆ ಹಾಕಲು ಸಂಜಯ್ ದತ್ ಭಯ ಪಡುತ್ತಿದ್ದರಂತೆ.

  ಸಂಜಯ್ ದತ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ಚಿರಂಜೀವಿಸಂಜಯ್ ದತ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ಚಿರಂಜೀವಿ

  ಠಾಣೇದಾರ್ ಸಿನಿಮಾ ಹಾಡಿಗಾಗಿ ಭರ್ಜರಿ ತಯಾರಿ

  ಠಾಣೇದಾರ್ ಸಿನಿಮಾ ಹಾಡಿಗಾಗಿ ಭರ್ಜರಿ ತಯಾರಿ

  ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 1990 ರಲ್ಲಿ ರಿಲೀಸ್ ಆದ ಠಾಣೇದಾರ್ ಸಿನಿಮಾದಲ್ಲಿ ಮಾಧುರಿ ಮತ್ತು ಸಂಜಯ್ ದತ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು 'ತಮ್ಮಾ ತಮ್ಮಾ ಲೋಗೆ...' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಾಧುರಿ ಜೊತೆ ಈ ಹಾಡಿಗೆ ನೃತ್ಯ ಮಾಡಬೇಕು ಎಂದಾಗ ಸಂಜಯ್ ದತ್ ಭಯಬೀತರಾಗಿದ್ದರಂತೆ.

  ಮಾಧುರಿ ದೀಕ್ಷಿತ್ ನಾಟ್ಯಾರಾಣಿ- ಸಂಜಯ್ ದತ್

  ಮಾಧುರಿ ದೀಕ್ಷಿತ್ ನಾಟ್ಯಾರಾಣಿ- ಸಂಜಯ್ ದತ್

  ನಟಿ ಮಾಧುರಿ ನಾಟ್ಯ ರಾಣಿ ಅವರ ಮುಂದೆ ನಾನೇನು ಅಲ್ಲ ಎಂದು ಹೇಳಿದ್ದರಂತೆ. ಅಲ್ಲದೆ ಮಾದುರಿ ಜೊತೆ ನೃತ್ಯ ಮಾಡಲು ಸಂಜಯ್ ಸುಮಾರು 16 ದಿನಗಳು ಅಭ್ಯಾಸ ಮಾಡಿದ್ರಂತೆ. ಸಿನಿಮಾ ರಿಲೀಸ್ ಆದಮೇಲೆ ಆ ಹಾಡು ಸೂಪರ್ ಹಿಟ್ ಆಯಿತು. ಹಾಡು ಮಾತ್ರವಲ್ಲದೆ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳ ಹೃದಯ ಗೆದ್ದಿದ್ದರು.

  ನಟ ಸಂಜಯ್ ದತ್ ಕುಟುಂಬದಲ್ಲೇ ಇದೆ ಮಾರಕ ಕ್ಯಾನ್ಸರ್ ಇತಿಹಾಸ

  ಸಂಜಯ್ ದತ್ ಮತ್ತು ಮಾಧುರಿ ಸಿನಿಮಾಗಳು

  ಸಂಜಯ್ ದತ್ ಮತ್ತು ಮಾಧುರಿ ಸಿನಿಮಾಗಳು

  ಖಳನಾಯಕ್, ಸಾಜನ್, ಸಹಿಬಾನ್, ಮಹಾಂತ್, ಕನೂನ್ ಆಪ್ನಾ ಆಪ್ನಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಸಂಜಯ್ ಮತ್ತು ಮಾಧುರಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರ ನಡುವೆ ಸಾಕಷ್ಟು ಗಾಸಿಪ್ ಗಳು ಹರಿದಾಡಿತ್ತು. ಜೋಡಿ 21 ವರ್ಷದ ಬಳಿಕ 'ಕಳಂಕ್' ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Actor Sanjay Dutt scared to Dance with Madhuri dixit in a song. Sanjay dutt is suffering from 4th stage cancer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X