For Quick Alerts
  ALLOW NOTIFICATIONS  
  For Daily Alerts

  'ಪದ್ಮಾವತಿ' ಚಿತ್ರಕ್ಕಾಗಿ ಶಾಹೀದ್ ಕಪೂರ್ ಡಿಮ್ಯಾಂಡ್ ಮಾಡಿದ್ದೆಷ್ಟು.?

  By ಸೋನು ಗೌಡ
  |

  ಸಂಜಯ್ ಲೀಲಾ ಬನ್ಸಾಲಿ ಅವರ ಹೊಸ ಸಿನಿಮಾ 'ಪದ್ಮಾವತಿ' ಸೆಟ್ಟೇರುವ ಮುನ್ನವೇ ಬಿಟೌನ್ ನಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಮೊದ-ಮೊದಲು ದೀಪಿಕಾ ಅವರ ಸಂಭಾವನೆ ವಿಚಾರದಲ್ಲಿ ಸುದ್ದಿಯಾಗಿದ್ದ 'ಪದ್ಮಾವತಿ' ಸಿನಿಮಾ ತದನಂತರ ನಾಯಕರ ಆಯ್ಕೆ ವಿಚಾರದಲ್ಲಿ ಸುದ್ದಿಯಾಯಿತು.

  ಇದೀಗ ಮತ್ತೆ ಗಾಸಿಪ್ ಕ್ರಿಯೇಟ್ ಆಗಿದೆ. ಈ ಬಾರಿ ಸುದ್ದಿ ಹಬ್ಬಿರೋದು ನಟ ಶಾಹೀದ್ ಕಪೂರ್ ಅವರ ಸಂಭಾವನೆ ವಿಚಾರದಲ್ಲಿ. ನಟ ಶಾಹೀದ್ ಕಪೂರ್ ಅವರು ಈ ಚಿತ್ರದಲ್ಲಿ ರಾಣಿ 'ಪದ್ಮಾವತಿ' ಗಂಡ ರಾಜಾ ರಾವಲ್ ರತನ್ ಸಿಂಗ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.[ದೀಪಿಕಾಗಿಂತ ರಣವೀರ್ ಸಂಭಾವನೆ ತುಂಬಾ ಕಡಿಮೆಯಂತೆ ಹೌದಾ.?]

  ಹಾಗಾಗಿ ಪಾತ್ರಕ್ಕೆ ತಕ್ಕಂತೆ ಸಂಭಾವನೆ ಕೊಡಬೇಕು ಎಂಬ ಬೇಡಿಕೆ ಶಾಹೀದ್ ಕಪೂರ್ ಇಟ್ಟಿದ್ದಾರೆಂದು, ಬಾಲಿವುಡ್ ಅಂಗಳದಲ್ಲಿ ಅಲ್ಲಲ್ಲಿ ಭಾರಿ ಗುಲ್ಲೆದ್ದಿದೆ. ನಟ ರಣವೀರ್ ಸಿಂಗ್ ಅವರು ಈ ಚಿತ್ರದಲ್ಲಿ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ' ಪಾತ್ರದಲ್ಲಿ ಮಿಂಚುತ್ತಿದ್ದಾರೆ.

  ರಣವೀರ್ ಸಿಂಗ್ ಅವರಂತೆ ತಮಗೂ ಚಿತ್ರದಲ್ಲಿ ಪ್ರಮುಖ ಪಾತ್ರ ಇರುವುದರಿಂದ ಸಂಭಾವನೆ ವಿಚಾರದಲ್ಲಿ ಸಂಕೋಚ ಪಟ್ಟುಕೊಳ್ಳಲಿಲ್ಲವಂತೆ. ಆದ್ದರಿಂದ ರಣವೀರ್ ಸಿಂಗ್ ಅವರಂತೆ ತಮಗೂ 8 ರಿಂದ 10 ಕೋಟಿ ರೂಪಾಯಿ ತನಕ ಸಂಭಾವನೆ ಬೇಕೆಂದು ಆಗ್ರಹ ಪಡಿಸಿದ್ದಾರೆ ಎನ್ನಲಾಗುತ್ತಿದೆ.['ಪದ್ಮಾವತಿ' ಚಿತ್ರಕ್ಕೆ ದೀಪಿಕಾಗೆ ಸಿಗುವ ಸಂಭಾವನೆ ಎಷ್ಟು.?]

  Actor Shahid Kapoor demanded more pay as Actor Ranveer singh

  ಮೊದಲೆಲ್ಲ 5 ರಿಂದ 6 ಕೋಟಿ ಡಿಮ್ಯಾಂಡ್ ಮಾಡುತ್ತಿದ್ದ ನಟ ಶಾಹೀದ್ ಕಪೂರ್ ಅವರು ಇದೀಗ ತಮ್ಮ ಘನತೆಗೆ ತಕ್ಕಂತೆ ಭರ್ತಿ ದುಡ್ಡು ಕೇಳಿದ್ದಾರಂತೆ. ಇನ್ನು ಇದಕ್ಕೆ ಬನ್ಸಾಲಿ ಅದೇನೂ ಮಾಡ್ತಾರೆ ಅಂತ ಕಾದು ನೋಡಬೇಕಾಗಿದೆ.[ಊರಿಗೊಬ್ಳೆ 'ಪದ್ಮಾವತಿ' ದೀಪಿಕಾ ಗಂಡ ಆಗ್ತಾರಾ ವಿಕ್ಕಿ.?]

  English summary
  Bollywood Actor Shahid Kapoor demanded more pay as Actor Ranveer singh. Shahid Kapoor will be paid around Rs 8-10 crore for Padmavati which is the highest he has got till date.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X