For Quick Alerts
  ALLOW NOTIFICATIONS  
  For Daily Alerts

  'ಕಿಶೋರಿ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ' ನಟ ಶಾರುಖ್ ಭಾವುಕ ನುಡಿ

  |

  ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿನ್ನೆ( ಫೆಬ್ರವರಿ18) ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಕನ್ನಡ ಮತ್ತು ಹಿಂದಿ ಚಿತ್ರರಂಗ ಸೇರಿದ್ದಂತೆ ಜಾಹಿರಾತು, ಕಿರುತೆರೆಯಲ್ಲಿಯೂ ಕಿಶೋರಿ ಬಲ್ಲಾಳ್ ಅಭಿನಯಿಸಿದ್ದಾರೆ.

  ಅಗಲಿದ ಹಿರಿಯ ನಟಿಗೆ ಸಾಕಷ್ಟು ಜನ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಸ್ಯಾಂಡಲ್ ವುಡ್ ಕಲಾವಿದ ಜೊತೆಗೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಕೂಡ ಸಂತಾಪ ಸೂಚಿಸಿ ಭಾವುಕ ಟ್ವೀಟ್ ಮಾಡಿದ್ದಾರೆ. ಕಿಶೋರಿ ಅಮ್ಮನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಧೂಮಪಾನ ಮಾಡುವುದನ್ನು ಖಂಡಿಸುತ್ತಿದ್ದರು ಎಂದು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

  "ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕಿಶೋರಿ ಅಮ್ಮನನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ. ವಿಶೇಷವಾಗಿ ಅವರು ಧೂಮಪಾನ ಮಾಡುವುದಕ್ಕಾಗಿ ಖಂಡಿಸುತ್ತಿದ್ದರು. ಅಲ್ಲಾ ಅವರನ್ನು ನೋಡಿಕೊಳ್ಳಲಿ" ಎಂದು ಹೇಳಿದ್ದಾರೆ.

  ಅಂದ್ಹಾಗೆ ಕಿಶೋರಿ ಬಲ್ಲಾಳ್ ಶಾರುಖ್ ಖಾನ್ ಜೊತೆ ಸ್ವದೇಶ್ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ. ಶಾರುಖ್ ಖಾನ್ ಅಜ್ಜಿಯ ಪಾತ್ರದಲ್ಲಿ ಕಿಶೋರಿ ಬಲ್ಲಾಳ್ ಕಾಣಿಸಿಕೊಂಡಿದ್ದಾರೆ. ಈ ಪಾತ್ರ ಕಿಶೋರಿ ಬಲ್ಲಾಳ್ ಅವರಿಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತ್ತು. ಅಜ್ಜಿ ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಿಶೋರಿ ಬಲ್ಲಾಳ್ ಮತ್ತು ಶಾರುಖ್ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು.

  'ಇವಳೆಂಥಾ ಹೆಂಡತಿ' ಸಿನಿಮಾದ ಮೂಲಕ 1960ರಲ್ಲಿ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದ ಕಿಶೋರಿ ಬಲ್ಲಾಳ್, ಸುಮಾರು 75ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಹೆಸರಾಂತ ನಿರ್ದೇಶಕರು ಮತ್ತು ನಟರ ಜೊತೆಗೆ ಕೆಲಸ ಮಾಡಿದ್ದಾರೆ. ವೀರಬಾಹು, ಹನಿ ಹನಿ, ಸೂರ್ಯಕಾಂತಿ, ನಾನಿ, ಕಹಿ, ಶಿವಗಾಮಿ, ಅಕ್ಕ ತಂಗಿ, ನನ್ನುಸಿರೇ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  Bollywood Actor Shahrukh Khan mourns the death of Kishori Ballal. Shahrukh Khan act with Kishori ballal in Swades film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X