»   » 'ಕ್ರಿಸ್ಟಲ್ ಅವಾರ್ಡ್' ಪಡೆದ ಬಾಲಿವುಡ್ ನಟ ಶಾರೂಖ್ ಖಾನ್

'ಕ್ರಿಸ್ಟಲ್ ಅವಾರ್ಡ್' ಪಡೆದ ಬಾಲಿವುಡ್ ನಟ ಶಾರೂಖ್ ಖಾನ್

Posted By:
Subscribe to Filmibeat Kannada

ಒಬ್ಬ ನಟ ಸಿನಿಮಾಗಳನ್ನು ಬಿಟ್ಟು ತಾನು ರಿಯಲ್ ಲೈಫ್ ನಲ್ಲಿ ಮಾಡುವ ಒಳ್ಳೆಯ ಕೆಲಸದಿಂದ ರಿಯಲ್ ಹೀರೋ ಎಂದು ಕರೆಸಿಕೊಳ್ಳುತ್ತಾರೆ. ಬಾಲಿವುಡ್ ನಟ ಶಾರೂಖ್ ಖಾನ್ ಕೂಡ ತಾವು ಸಿನಿಮಾದಂತೆ ನಿಜ ಜೀವನದಲ್ಲಿಯೂ ಹೀರೋ ಎಂಬುದನ್ನು ಸಾಬೀತು ಮಾಡಿದ್ದಾರೆ. ಅದಕ್ಕೆ ಅವರಿಗೆ '24ನೇ ಕ್ರಿಸ್ಟಲ್ ಅವಾರ್ಡ್' ಪ್ರಶಸ್ತಿ ಲಭಿಸಿದೆ.

'ಕ್ರಿಸ್ಟಲ್ ಅವಾರ್ಡ್' ಪ್ರಶಸ್ತಿಯನ್ನು ವಿಶ್ವ ಆರ್ಥಿಕ ವೇದಿಕೆಯಿಂದ ನೀಡಲಾಗುತ್ತದೆ. ವಿಶ್ವ ಆರ್ಥಿಕ ವೇದಿಕೆಯ 48ನೇ ವಾರ್ಷಿಕ ಸಮ್ಮೇಳನದಲ್ಲಿ ನಟ ಶಾರುಖ್​ ಖಾನ್​ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಸ್ವಿಜರ್ ಲ್ಯಾಂಡ್ ನಲ್ಲಿ ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತಗಾರ ಎಲ್ಟನ್ ಜಾನ್‌ ಮತ್ತು ಹಾಲಿವುಡ್‌ ಸ್ಟಾರ್‌ ಕೇಟ್‌ ಬ್ಲಾಂಕೆಟ್ ಅವರಿಗೆ ಸಹ ಪ್ರಶಸ್ತಿ ನೀಡಲಾಯಿತು.

ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಇನ್ನು ಮುಂದೆ 'ಜೀರೋ'

ಆಸಿಡ್ ದಾಳಿಗೆ ಒಳಗಾದವರ ಬಗ್ಗೆ ಮತ್ತು ಮಹಿಳೆಯರ ಹಕ್ಕುಗಳನ್ನು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿರುವ ಶಾರೂಖ್ ಅವರ ಆ ಒಳ್ಳೆಯ ಕೆಲಸಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ತೆಗೆದುಕೊಂಡು ಖುಷಿಯನ್ನು ಶಾರೂಖ್ ಖಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Actor Shahrukh Khan receive 24th Crystal Award

ಈ ಹಿಂದೆ ಭಾರತದ ಕೆಲವು ಗಣ್ಯರಿಗೆ 'ಕ್ರಿಸ್ಟಲ್ ಅವಾರ್ಡ್' ಪ್ರಶಸ್ತಿಯನ್ನು ನೀಡಲಾಗಿದೆ. ಬಾಲಿವುಡ್ ನಟ ಅಮಿತಾಭ್‌ ಬಚ್ಚನ್‌, ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್, ಅಮ್ಜದ್‌ ಆಲಿ, ಮಲ್ಲಿಕಾ ಸಾರಾಭಾಯಿ, ರವಿಶಂಕರ್‌ ಹಾಗೂ ಶಬಾನ ಆಜ್ಮಿ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.

English summary
Bollywood Actor Shahrukh Khan receive 24th Crystal Award from WEF for his work with acid attack victims.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada