'ನಾವು ವಿಫಲರಾಗಿದ್ದೇವೆ': ಅಸಹಾಯಕತೆಯಿಂದ ಬೇಸರ ವ್ಯಕ್ತಪಡಿಸಿದ ಸೋನು ಸೂದ್

ಕೋವಿಡ್ ಸಮಯದಲ್ಲಿ ಜನರ ಪಾಲಿಗೆ ನಟ ಸೋನು ಸೂದ್ ರಿಯಲ್ ಹೀರೋ ಆಗಿದ್ದರು. ಸ್ಥಳಿಯ ಆಡಳಿತ ಸಿಬ್ಬಂದಿ, ಅಧಿಕಾರಿಗಳು, ಸರ್ಕಾರ ಹೀಗೆ ಎಲ್ಲರೂ ಕೈಬಿಟ್ಟಿದ್ದರು ಕೊನೆಯಲ್ಲಿ ಸೋನು ಸೂದ್ ಆಪತ್ಬಾಂಧವನಂತೆ ಬಂದು ಅನೇಕರಿಗೆ ಸಹಾಯ ಮಾಡಿದ್ದಾರೆ.

ಕಳೆದ ವರ್ಷ ಕೊರೊನಾ ಸಮಯದಲ್ಲಿ ಜನಸಾಮಾನ್ಯರ ಜೊತೆ ನಿಂತು ಅವರ ಕಷ್ಟ ಆಲಿಸಿದ ಸೋನು ಸೂದ್, ಎರಡನೇ ಅಲೆಯ ಸಮಯದಲ್ಲಿ ಸಹಾಯ ಮಾಡಲು ಆಗುತ್ತಿಲ್ಲವೇ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ''ಹೌದು ನಾವು ವಿಫಲರಾಗಿದ್ದೇವೆ, ನಮ್ಮ ಆರೋಗ್ಯ ವ್ಯವಸ್ಥೆಯೂ ಹಾಗೆ ಇದೆ'' ಎಂದು ಬೇಸರಗೊಂಡಿದ್ದಾರೆ. ಮುಂದೆ ಓದಿ...

ನಾವು ವಿಫಲರಾಗಿದ್ದೇವೆ

ನಾವು ವಿಫಲರಾಗಿದ್ದೇವೆ

ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಸೋನು ಸೂದ್ ಅವರಿಗೆ ಸಹಾಯ ಕೋರಿ ಹಲವು ಟ್ವೀಟ್, ಸಂದೇಶಗಳು ಬರುತ್ತಲೇ ಇದೆ. ಸಾಧ್ಯವಾದಷ್ಟು, ತಮ್ಮಿಂದ ಆದಷ್ಟು ಜನರಿಗೆ ನೆರವು ನೀಡುತ್ತಿದ್ದಾರೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮನವಿಗಳು ಹೆಚ್ಚಿದೆ, ನೆರವೇರಿಸಲು ಆಗ್ತಿಲ್ಲ

ಮನವಿಗಳು ಹೆಚ್ಚಿದೆ, ನೆರವೇರಿಸಲು ಆಗ್ತಿಲ್ಲ

''ಬೆಡ್‌ಗಾಗಿ ಮನವಿ ಮಾಡಿದವರ ಸಂಖ್ಯೆ 570. ಆದರೆ, ನಾನು 112 ಬೆಡ್‌ಗಳನ್ನು ಮಾತ್ರ ವ್ಯವಸ್ಥೆ ಮಾಡಬಲ್ಲೆ. 1477 ರೆಮ್‌ಡೆಸಿವಿರ್ ಔಷಧಿಗಾಗಿ ವಿನಂತಿ ಬಂದಿದೆ. ಆದರೆ ನಾನು ಕೇವಲ 18 ವ್ಯವಸ್ಥೆ ಮಾಡಬಲ್ಲೆ'' ಎಂದು ನಿನ್ನೆ ಸೋನು ಸೂದ್ ಟ್ವೀಟ್ ಮಾಡಿದ್ದರು.

ಸೋನು ಸೂದ್‌ಗೆ ಕೊರೊನಾ

ಸೋನು ಸೂದ್‌ಗೆ ಕೊರೊನಾ

ಜನಸಾಮಾನ್ಯರ ಪಾಲಿಗೆ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಏಪ್ರಿಲ್ 17 ರಂದು ಸೋನು ಸೂದ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದರು.

Recommended Video

ನಾನೂ ವಿಫಲ, ಆರೋಗ್ಯ ವ್ಯವಸ್ಥೆಯೂ ವಿಫಲವಾಯಿತು ಅಂದ್ರು ಸೋನು ಸೂದ್ | Filmibeat Kannada
ಸೋಂಕು ತಗುಲಿದ್ದರೂ ನಿಲ್ಲದ ಸಾಮಾಜಿಕ ಸೇವೆ

ಸೋಂಕು ತಗುಲಿದ್ದರೂ ನಿಲ್ಲದ ಸಾಮಾಜಿಕ ಸೇವೆ

ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಹೋಮ್ ಕ್ವಾರಂಟೈನ್ ಆಗಿರುವ ಸೋನು ಸೂದ್, ಮನೆಯಿಂದಲೇ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವುದಾಗಿ ತಿಳಿಸಿದ್ದರು. ಫೋನ್ ಮೂಲಕ ಜನರ ಜೊತೆ ಸಂಪರ್ಕದಲ್ಲಿದ್ದು, ಜನರ ಸಂತೋಷಕ್ಕಾಗಿ ಶ್ರಮಿಸುತ್ತೇನೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

More from Filmibeat

English summary
Bollywood Actor sonu sood displeasure against Health system.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X