For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರ ನೆರವಿಗೆ ಸೋನು ಸೂದ್

  |

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ಮಂದಿಗೆ ಸಹಾಯ ಮಾಡಿದ್ದ ನಟ ಸೋನು ಸೂದ್, ಈಗಲೂ ತಮ್ಮ ಸಹಾಯ ಮುಂದುವರೆಸಿದ್ದಾರೆ.

  Lockdown ನಲ್ಲಿ ಕೆಲಸ ಕಳೆದುಕೊಂಡವರ ನೆರವಿಗೆ ಬಂದ Sonu Sood | Filmibeat Kannada

  ಕೊರೊನಾ ಲಾಕ್‌ಡೌನ್ ನಿಂದಾಗಿ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಹೀಗೆ ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ನೆರವಾಗಲು ಸೋನು ಸೂದ್ ಮುಂದಾಗಿದ್ದಾರೆ.

  ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳಲ್ಲಿ ಮೊದಲ ಎರಡು ಸ್ಥಾನದಲ್ಲಿ ಇಬ್ಬರು ಭಾರತೀಯರು!

  ಸೋನು ಸೂದ್, ಇ-ರಿಕ್ಷಾಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಯಾರು ಕೊರೊನಾ ಸಮಯದಲ್ಲಿ ಉದ್ಯೋಗ ಕಳೆದುಕೊಂಡಿದ್ದರೊ ಅವರಿಗೆ ಈ ಇ-ರಿಕ್ಷಾಗಳು ಉಚಿತವಾಗಿ ಸಿಗಲಿವೆ.

  'ಕುದ್ ಕಮಾವ್, ಘರ್ ಚಲಾವ್' (ನೀನೆ ಸಂಪಾದಿಸು, ಮನೆ ನೆಡೆಸು) ಎಂಬ ಅಭಿಯಾನವನ್ನು ಸೋನು ಸೂದ್ ಪ್ರಾರಂಭಿಸಿದ್ದು, ಈ ಅಭಿಯಾನದಡಿಯಲ್ಲಿ ಉಚಿತ ಬ್ಯಾಟರಿ ಚಾಲಿತ ರಿಕ್ಷಾಗಳನ್ನು ಸೋನು ಸೂದ್ ವಿತರಿಸಲಿದ್ದಾರೆ.

  ಬ್ಯಾಟರಿ ಚಾಲಿತ ರಿಕ್ಷಾ ವಿತರಣೆ

  ಬ್ಯಾಟರಿ ಚಾಲಿತ ರಿಕ್ಷಾ ವಿತರಣೆ

  ಉಚಿತ ಇ-ರಿಕ್ಷಾ ವಿತರಣೆ ಕಾರ್ಯಕ್ರಮದ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಸೋನು ಸೂದ್, 'ದೊಡ್ಡ ಭವಿಷ್ಯತ್ತಿನೆಡೆ ಇದೊಂದು ಸಣ್ಣ ಹೆಜ್ಜೆ, ಸಣ್ಣ ಉದ್ದಿಮೆದಾರರನ್ನು ಉದ್ದೀಪಿಸುವ ಸಣ್ಣ ಪ್ರಯತ್ನವಾಗಿ ಇದನ್ನು ಆರಂಭ ಮಾಡಿದ್ದೇವೆ' ಎಂದಿದ್ದಾರೆ.

  ಜನರ ಪ್ರೀತಿಯೇ ನನ್ನ ಪ್ರೇರಕ ಶಕ್ತಿ

  ಜನರ ಪ್ರೀತಿಯೇ ನನ್ನ ಪ್ರೇರಕ ಶಕ್ತಿ

  ಕೆಲವು ತಿಂಗಳುಗಳಿಂದ ಬಹಳ ಪ್ರೀತಿಯನ್ನು ಜನ ನನ್ನ ಮೇಲೆ ತೋರಿದ್ದಾರೆ. ಜನರ ಪ್ರೀತಿಯೇ ನನ್ನ ಪ್ರೇರಕ ಶಕ್ತಿ. ಈ ಹಿಂದಿಗಿಂತಲೂ ಹೆಚ್ಚು ಗಟ್ಟಿಯಾಗಿ ಜನರೊಂದಿಗೆ ನಾನು ನಿಲ್ಲಲಿದ್ದೇನೆ. ಈ ಇ-ರಿಕ್ಷಾ ವಿತರಣೆ ಕಾರ್ಯಕ್ರಮವು, ಜನರನ್ನು ಹೆಚ್ಚು ಸ್ವಾಲಂಬಿಗಳನ್ನಾಡಿ ಮಾಡುವ ಪ್ರಯತ್ನದ ಭಾಗ ಎಂದಿದ್ದಾರೆ ಸೋನು ಸೂದ್.

  ಆಸ್ತಿ ಅಡವಿಟ್ಟ ಸೋನು ಸೂದ್

  ಆಸ್ತಿ ಅಡವಿಟ್ಟ ಸೋನು ಸೂದ್

  ಜನರಿಗೆ ಸಹಾಯ ಮಾಡಲೆಂದು ಮುಂಬೈನಲ್ಲಿದ್ದ ತಮ್ಮ ಎಂಟು ಆಸ್ತಿಗಳನ್ನು ಅಡವಿಟ್ಟು 10 ಕೋಟಿ ಸಾಲ ಪಡೆದಿದ್ದಾರೆ ನಟ ಸೋನು ಸೂದ್. ಈ ಆಸ್ತಿಗಳಲ್ಲಿ ಎರಡು ಅಪಾರ್ಟ್‌ಮೆಂಟ್ ಸಹ ಸೇರಿವೆ.

  ಹಲವರಿಗೆ ಸಹಾಯ ಮಾಡಿದ ಸೋನು ಸೂದ್

  ಹಲವರಿಗೆ ಸಹಾಯ ಮಾಡಿದ ಸೋನು ಸೂದ್

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ದೇಶದ ವಿವಿಧೆಡೆ ಸಿಲುಕಿದ್ದ ಕಾರ್ಮಿಕರನ್ನು ತಮ್ಮ ಮನೆಗಳಿಗೆ ತೆರಳಲು ಸಹಾಯ ಮಾಡಿದ್ದರು ನಟ ಸೋನು ಸೂದ್. ಹಲವಾರು ಮಕ್ಕಳ ಶಿಕ್ಷಣಕ್ಕೆ ನೆರವಾದರು, ಸಹಾಯ ಅರಸಿ ಬಂದ ಬಹುತೇಕರಿಗೆ ಸಹಾಯ ಮಾಡಿದ್ದಾರೆ ಸೋನು ಸೂದ್.

  English summary
  Actor Sonu Sood giving away e-riksha's for free. He said it is a small step to big future.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X