For Quick Alerts
  ALLOW NOTIFICATIONS  
  For Daily Alerts

  ಪ್ರವಾಹದಿಂದ ಹಾನಿಗೊಳಗಾದ ಕುಟುಂಬಕ್ಕೆ ಎಮ್ಮೆ ಖರೀದಿಸಿ ಸೋನು ಸೂದ್ ಹೇಳಿದ್ದೇನು?

  |

  ಬಹುಭಾಷಾ ನಟ ಸೋನು ಸೂದ್ ಜನಪರ ಕೆಲಸಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಾಕ್ ಡೌನ್ ಆದಾಗಿನಿಂದನೂ ಸೋನು ಸೂದ್ ಕಷ್ಟದಲ್ಲಿರುವ ಲಕ್ಷಾಂತರ ಜನರಿಗೆ ನೆರವಾಗಿದೆ. ಸೋನು ಸೂದ್ ಸಮಾಜ ಸೇವೆ ಅಷ್ಟಕ್ಕೆ ನಿಲ್ಲಿಸಿಲ್ಲ.

  ಲಾಕ್ ಡೌನ್ ಬಳಿಕವೂ ಸಮಾಜ ಸೇವೆ ಮುಂದುವರೆಸಿರುವ ಸೋನು ಸೂದ್ ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಈ ಮೂಲಕ ಬಡವರಿಗೆ, ಕಷ್ಟದಲ್ಲಿರೋರಿಗೆ ಸಹಾಯ ಮಾಡುತ್ತಿದ್ದಾರೆ. ಇತ್ತೀಚಿಗೆ ಆಂಧ್ರಪ್ರದೇಶದಲ್ಲಿ ರೈತನೊಬ್ಬ ಇಬ್ಬರು ಹೆಣ್ಣುಮಕ್ಕಳ ಕೈಯಲ್ಲಿ ನೊಗವನ್ನು ಎಳೆಸಿ ಹೊಲ ಉಳುಮೆ ಮಾಡುತ್ತಿದ್ದ ಕುಟುಂಬಕ್ಕೆ ತಕ್ಷಣ ಟ್ರ್ಯಾಕ್ಟರ್ ಅನ್ನು ಕಳುಹಿಸಿ ಕೊಟ್ಟಿದ್ದರು. ಇದೀಗ ಬಿಹಾರ ಪ್ರವಾಹದಿಂದ ಹೊನಿಗೊಳಗಾದ ಕುಟುಂಬಕ್ಕೆ ಎಮ್ಮೆಯನ್ನು ಖರೀದಿಸಿ ಕಳುಹಿಸಿದ್ದಾರೆ. ಮುಂದೆ ಓದಿ...

  ಸಹಾಯ ಕೋರಿ ಬರ್ತಿರುವ ಸಂದೇಶಗಳ ಸಂಖ್ಯೆ ರಿವೀಲ್ ಮಾಡಿ, ಕ್ಷಮೆ ಕೇಳಿದ ಸೋನು ಸೂದ್ಸಹಾಯ ಕೋರಿ ಬರ್ತಿರುವ ಸಂದೇಶಗಳ ಸಂಖ್ಯೆ ರಿವೀಲ್ ಮಾಡಿ, ಕ್ಷಮೆ ಕೇಳಿದ ಸೋನು ಸೂದ್

  ಬಿಹಾರ ಕುಟುಂಬಕ್ಕೆ ಎಮ್ಮೆ ಕಳುಹಿಸಿದ ನಟ

  ಬಿಹಾರ ಕುಟುಂಬಕ್ಕೆ ಎಮ್ಮೆ ಕಳುಹಿಸಿದ ನಟ

  ಕಷ್ಟ ಹಂಚಿಕೊಂಡಿದ್ದ ಬಿಹಾರ ಕುಟಂಬಕ್ಕೆ ಸೋನು ಸೂದ್ ನೆರವಾಗಿದೆ. ಬಿಹಾರ ಮೂಲದ ಕುಟುಂಬವೊಂದು ಪ್ರವಾಹದಲ್ಲಿ ತನ್ನ ಮಗನನ್ನು ಕಳೆದುಕೊಂಡರು. ಅವರ ಆದಾಯದ ಏಕೈಕ ಮೂಲವಾಗಿದ್ದ ಎಮ್ಮೆಯನ್ನು ಕಳೆದುಕೊಂಡು ಜೀವನ ನಡೆಸಲು ತುಂಬಾ ಕಷ್ಟಪಡುತ್ತಿತ್ತು. ಇತರ ಮಕ್ಕಳ ಪಾಲನೆಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕುಟುಂಬದ ಕಷ್ಟವನ್ನು ಗಮನಿಸಿ ಸ್ಥಳಿಯರು ಸೋನು ಸೂದ್ ಗೆ ಟ್ವೀಟ್ ಮಾಡಿದ್ದರು.

  ಕಾರು ಖರೀದಿಸಿದ್ದಕ್ಕಿಂತಲೂ ಎಮ್ಮೆ ಖರೀದಿಸಲು ಉತ್ಸುಕನಾಗಿದ್ದೆ

  ಕಾರು ಖರೀದಿಸಿದ್ದಕ್ಕಿಂತಲೂ ಎಮ್ಮೆ ಖರೀದಿಸಲು ಉತ್ಸುಕನಾಗಿದ್ದೆ

  ಬಿಹಾರ್ ಕುಟುಂಬದ ಕಷ್ಟಕ್ಕೆ ನೆರವಾದ ಸೋನು ಸೂದ್ ತಕ್ಷಣ ಎಮ್ಮೆಯನ್ನು ಕಳುಹಿಸಿಕೊಟ್ಟಿದ್ದಾರೆ. ಎಮ್ಮೆ ಖರೀದಿ ಮಾಡಿ ಸೋನು ಸೂದ್ ಸಾಮಾಜಿಕ ಜಾಲತಾಣದಲ್ಲಿ "ನಾನು ನನ್ನ ಮೊದಲ ಕಾರು ಖರೀದಿಸಿದಾಗಲು ಇಷ್ಟು ಉತ್ಸುಕನಾಗಿರಲಿಲ್ಲ. ಆದರೆ ನಿಮಗಾಗಿ ಎಮ್ಮೆ ಖರೀದಿಸುವಾಗ ತುಂಬ ಉತ್ಸುಕನಾಗಿದ್ದೆ. ನಾನು ಬಿಹಾರಕ್ಕೆ ಬಂದಾಗ ಒಂದು ಲೋಟ ತಾಜಾ ಎಮ್ಮೆ ಹಾಲು ಕುಡಿಯುತ್ತೇನೆ" ಎಂದು ಬರೆದುಕೊಂಡಿದ್ದಾರೆ.

  ಕಾಮಿಡಿ ಶೋನಲ್ಲಿ ಕಣ್ಣೀರಿಟ್ಟ 'ನಿಜ ಹೀರೋ' ನಟ ಸೋನು ಸೂದ್

  ಸಹಾಯ ಕೋರಿ ಬರ್ತಿವೆ ಸಾವಿರಾರು ಸಂದೇಶ

  ಸಹಾಯ ಕೋರಿ ಬರ್ತಿವೆ ಸಾವಿರಾರು ಸಂದೇಶ

  ಸೋನು ಸೂದ್ ಈ ಪೋಸ್ಟ್ ಮಾಡುತ್ತಿದ್ದಂತೆ ಸಾವಿರಾರು ಮಂದೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡುತ್ತಿದ್ದಾರೆ. ಅಲ್ಲದೆ ಸಾವೀರಾರು ಮಂದಿ ಸಹಾಯ ಕೋರಿ ಕಾಮೆಂಟ್ ಮಾಡುತ್ತಿದ್ದಾರೆ. ಸೋನು ಸೂದ್ ಗೆ ಪ್ರತೀದಿನ ಸಾವೀರಾರು ಸಂದೇಶಗಳು ಬರುತ್ತಿವೆ. ಈ ಬಗ್ಗೆಯೂ ಸೋನು ಸೂದ್ ಬಹಿರಂಗ ಪಡಿಸಿದ್ದಾರೆ.

  ಬಡ ರೈತನ ಕುಟುಂಬಕ್ಕೆ ಸೋನು ಸೂದ್ ನೆರವು: ಟ್ರ್ಯಾಕ್ಟರ್ ಗಿಫ್ಟ್ ನೀಡಿದ ನಟ

  ಕ್ಷಮೆಯಾಚಿಸಿದ ಸೋನು ಸೂದ್

  ಕ್ಷಮೆಯಾಚಿಸಿದ ಸೋನು ಸೂದ್

  ಪ್ರತೀ ದಿನ ಸಹಾಯಕೋರಿ ಬರುತ್ತಿರುವ ಸಂದೇಶಗಳ ಪಟ್ಟಿ ನೋಡಿದ್ರೆ ನಿಜಕ್ಕು ಅಚ್ಚರಿಯಾಗುತ್ತೆ. 1137 ಮೇಲ್, 19000 ಫೇಸ್ ಬುಕ್ ಸಂದೇಶ, 4812 ಇನ್ಸ್ಟಾಗ್ರಾಮ್ ಸಂದೇಶಗಳು, 6741 ಟ್ವಿಟ್ಟರ್ ಸಂದೇಶಗಳು ಪ್ರತೀದಿನ ಬರುತ್ತಿವೆ ಎಂದು ಸೋನು ಸೂದ್ ರಿವೀಲ್ ಮಾಡಿದ್ದಾರೆ. ಜೊತೆಗೆ 'ಎಲ್ಲರನ್ನೂ ಸಂಪರ್ಕ ಮಾಡುವುದು ಅಸಾಧ್ಯವಾಗಿದೆ. ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಂದೇಶಗಳು ಮಿಸ್ ಆಗಿದ್ದಾರೆ ಕ್ಷಮಿಸಿ' ಎಂದಿದ್ದಾರೆ.

  English summary
  Actor Sonu Sood Has gifted the buffalo to family affected by flood. He syays I was not as excited buying my first car as I was excited buying a new buffalo for you.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X