For Quick Alerts
  ALLOW NOTIFICATIONS  
  For Daily Alerts

  ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳಲ್ಲಿ ಮೊದಲ ಎರಡು ಸ್ಥಾನದಲ್ಲಿ ಇಬ್ಬರು ಭಾರತೀಯರು!

  |

  ಬ್ರಿಟನ್‌ 'ಈಸ್ಟರ್ನ್ ಐ' ನಿಯತಕಾಲಿಕೆ ಪ್ರಕಟಿಸಿರುವ ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಭಾರತದ ಇಬ್ಬರು ಸೆಲೆಬ್ರಿಟಿಗಳು ಸ್ಥಾನ ಗಿಟ್ಟಿಸಿದ್ದಾರೆ.

  ಕೊರೊನಾ ಸಂಕಷ್ಟದ ಸಮಯದಲ್ಲಿ ಸಾವಿರಾರು ಮಂದಿಗೆ ಸಹಾಯ ಮಾಡಿದ, ಈಗಲೂ ಮಾಡುತ್ತಲೇ ಇರುವ ನಟ ಸೋನು ಸೂದ್ ಏಷ್ಯಾದ ಟಾಪ್ 1 ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದಾರೆ.

  ಬ್ರಿಟನ್ ನ 'ಈಸ್ಟರ್ನ್ ಐ' ಹೆಸರಿನ ನಿಯತಕಾಲಿಕೆ ಬಿಡುಗಡೆ ಮಾಡಿರುವ ಪಟ್ಟಿಯಂತೆ, ಸೋನು ಸೂದ್, ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೊದಲಿಗರು. ಎರಡನೇ ಸ್ಥಾನದಲ್ಲಿ ಭಾರತೀಯ ಮೂಲದ ಲಿಲ್ಲಿ ಸಿಂಗ್ ಇದ್ದಾರೆ.

  ಸಿನಿಮಾಗಳ ಮೂಲಕ ಮಾತ್ರವಲ್ಲದೆ, ಸಾವಿರಾರು ಜನರ ಜೀವನದ ಮೇಲೆ ಪ್ರಭಾವ ಬೀರುವುದರಿಂದ, ಮಾನವೀಯ ಕಾರ್ಯಗಳಿಂದ ಭಾರಿ ಜನಪ್ರೀತಿ ಗಳಿಸಿರುವ ಸೋನು ಸೂದ್, ಏಷ್ಯಾದ ನಂಬರ್ 1 ಸೆಲೆಬ್ರಿಟಿ ಆಗಿದ್ದಾರೆ.

  ಈಸ್ಟರ್ನ್ ಐ ನ ಸಂಪಾದಕ ಅಜರ್ ನಜೀರ್ ಮಾತನಾಡಿ, 'ಏಷ್ಯಾದ ನಂಬರ್ 1 ಸೆಲೆಬ್ರಿಟಿ ಸ್ಥಾನಕ್ಕೆ ಸೋನು ಸೂದ್ ಅರ್ಹ ವ್ಯಕ್ತಿ. ಸೋನು ಸೂದ್ ಮಾಡಿದಂತೆ ಇನ್ನಾವ ಸೆಲೆಬ್ರಿಟಿ ಸಹ ಕೊರೊನಾ ಸಮಯದಲ್ಲಿ ಸಹಾಯ ಮಾಡಿಲ್ಲ' ಎಂದಿದ್ದಾರೆ.

  'ಕಾರ್ಮಿಕರನ್ನು ಊರಿಗೆ ಕಳುಹಿಸುವುದು, ಬಡವರಿಗೆ ಹಣಕಾಸು ಸಹಾಯ, ವಿದ್ಯಾರ್ಥಿಗಳಿಗೆ ಸಹಾಯ, ಶಸ್ತ್ರಚಿಕಿತ್ಸೆಗಳಿಗೆ ಹಣಕಾಸು ಸಹಾಯ, ರೈತರಿಗೆ ಸಹಾಯ, ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಹೀಗೆ ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸೋನು ಸೂದ್‌ಗೆ ಬ್ರಿಟನ್‌ನ 'ಜಿನ್ ಹೆರ್ಶೋಲ್ಟ್ ಹ್ಯುಮೆನಿಟೇರಿಯನ್' ಪ್ರಶಸ್ತಿ ನೀಡಬೇಕು ಎಂದು ಅಜರ್ ನಜೀರ್ ಹೇಳಿದ್ದಾರೆ.

  ಇದಕ್ಕೋಸ್ಕರ ತುಂಬಾ ದಿನದಿಂದ ಕಾಯ್ತಾ ಇದ್ದೆ | prajwal Devaraj | Veeram | Filmibeat Kannada

  ಎರಡನೇ ಸ್ಥಾನದಲ್ಲಿರುವ ಯೂಟ್ಯೂಬರ್ ಆಗಿರುವ ಲಿಲ್ಲಿ ಸಿಂಗ್ ಭಾರಿ ಜನಪ್ರಿಯರಾಗಿದ್ದು, ಭಾರತ ಮಾತ್ರವಲ್ಲದೆ, ವಿಶ್ವದ ಹಲವು ದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಜೊತೆಗೆ ಸಹ ಅವರು ಯೂಟ್ಯೂಬ್ ವಿಡಿಯೋಗಳನ್ನು ಮಾಡಿದ್ದಾರೆ.

  English summary
  Actor Sonu Sood is the top 1 celebrity of Asia as per the UK's Eastern Eye magazine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X