For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಮತ್ತು ಮಾಜಿ ಮ್ಯಾನೇಜರ್ ದಿಶಾ ನಡುವಿನ ವಾಟ್ಸಪ್ ಚಾಟ್ ಲೀಕ್

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ಮತ್ತು ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಬಿರುಗಾಳಿ ಎದ್ದಿದೆ. ಈ ಎರಡು ಸಾವು ಬಾಲಿವುಡ್ ನಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಆತ್ಮಹತ್ಯೆ ಮಾಡಿಕೊಂಡು ಒಂದು ವಾರದ ಬಳಿಕ ಸುಶಾಂತ್ ಸಿಂಗ್ ಕೂಡ ಆತ್ಮಹತ್ಯೆ ಮಾಡಿಕೊಂಡರು.

  ಇಬ್ಬರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಚರ್ಚೆ ನಡೆಯುತ್ತಿದೆ. ಈ ನಡುವೆ ಮುಂಬೈ ಪೊಲೀಸರು ಸುಶಾಂತ್ ಸಾವಿಗು ಮತ್ತು ದಿಶಾ ಸಾವಿಗೂ ಯಾವುದೆ ಸಂಬಂಧವಿಲ್ಲ ಎಂದು ಹೇಳಿದ್ದರು. ಬಳಿಕ ಮತ್ತೆ ಪ್ರಕರಣ ದಾಖಲಿಸಿಕೊಂಡು ಇಬ್ಬರ ಸಾವಿಗೂ ಏನಾದರು ಲಿಂಕ್ ಇರಬಹುದಾ ಎಂದು ತನಿಖೆ ಪ್ರಾರಂಭಿಸಿದ್ದಾರೆ.

  'ಸುಶಾಂತ್ ಚಿಕಿತ್ಸೆಗಾಗಿ ನನ್ನನ್ನು ರಿಯಾ ಸಂಪರ್ಕಿಸಿದ್ದರು': ಅಧ್ಯಾತ್ಮ ಗುರು ಹೇಳಿದ್ದೇನು?'ಸುಶಾಂತ್ ಚಿಕಿತ್ಸೆಗಾಗಿ ನನ್ನನ್ನು ರಿಯಾ ಸಂಪರ್ಕಿಸಿದ್ದರು': ಅಧ್ಯಾತ್ಮ ಗುರು ಹೇಳಿದ್ದೇನು?

  ಇದೀಗ ಸುಶಾಂತ್ ಸಿಂಗ್ ಮತ್ತು ದಿಶಾ ಸಾಲಿಯನ್ ನಡುವಿನ ವಾಟ್ಸಪ್ ಚಾಟ್ ಸೋರಿಕೆಯಾಗಿದೆ. 2020 ಏಪ್ರಿಲ್ ನಲ್ಲಿ ಇಬ್ಬರು ಚಾಟ್ ಮಾಡಿರುವುದು ಬಹಿರಂಗವಾಗಿದೆ. ಈ ಮೊದಲು ಸುಶಾಂತ್ ಮತ್ತು ದಿಶಾ ಇಬ್ಬರು ಎರಡು ಮಾತ್ರ ಭೇಟಿಯಾಗಿರುವುದು ಎಂದು ಹೇಳಲಾಗಿತ್ತು. ಆದರೆ ಏಪ್ರಿಲ್ ತಿಂಗಳವರೆಗೂ ಇಬ್ಬರು ಸಂಪರ್ಕದಲ್ಲಿದ್ದರು ಎನ್ನುವುದನ್ನು ಈ ವಾಟ್ಸಪ್ ಚಾಟ್ ಹೇಳುತ್ತಿದೆ.

  ಇಬ್ಬರು ಕೆಲಸದ ಬಗ್ಗೆ, ಮುಂದಿನ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಏಪ್ರಿಲ್ 2, 7, 10 ಮತ್ತು 11ರಂದು ನಡೆಸಿದ ಚಾಟ್ ನಲ್ಲಿ ಮೊದಲು ಟಿವಿ ಜಾಹೀರಾತಿನ ಬಗ್ಗೆ ಮಾತನಾಡಿದ್ದಾರೆ. ಅಡುಗೆ ಎಣ್ಣೆಯ ಜಾಹೀರಾತಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ನಂತರ ಪಬ್ಜಿ ಬಗ್ಗೆಯು ಚರ್ಚಿಸಿದ್ದಾರೆ.

  ನಂತರ ಆಡಿಟಿಂಗ್ ಬಗ್ಗೆಯೂ ಮಾತನಾಡಿದ್ದಾರೆ. ಈ ಚಾಟ್ ನಲ್ಲಿ ಇಬ್ಬರು ಅನೇಕ ಬಾರಿ ಸುಶಾಂತ್ ಸ್ನೇಹಿತ ಸಿದ್ಧಾರ್ಥ್ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಸುಶಾಂತ್ ನಿಧನಕ್ಕೂ ಮೊದಲು ಸಾಕಷ್ಟು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರು, ಅವರ ಸಾವಿಗೆ ಖಿನ್ನತೆಯೇ ಕಾರಣ ಎಂದು ಹೇಳುವುದು ಅಸಂಭವವಾಗಿದೆ ಎಂದು ಅನೇಕರ ವಾದ.

  English summary
  Bollywood late Actor Sushant Singh and Disha Salian whatsapp chat revealed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X