»   » ಕ್ರಿಕೆಟ್ ದಿಗ್ಗಜ ಧೋನಿಗೆ 'ಕಂಗ್ರಾಟ್ಸ್' ಎಂದ ರಜನಿ, ಬೆರಗಾದ ಕ್ಯಾಪ್ಟನ್

ಕ್ರಿಕೆಟ್ ದಿಗ್ಗಜ ಧೋನಿಗೆ 'ಕಂಗ್ರಾಟ್ಸ್' ಎಂದ ರಜನಿ, ಬೆರಗಾದ ಕ್ಯಾಪ್ಟನ್

Posted By: ಸೋನು ಗೌಡ
Subscribe to Filmibeat Kannada

'ಪವಿತ್ರ ರಿಶ್ತಾ' ಧಾರಾವಾಹಿ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳಲಾರಂಭಿಸಿದ ನಟ ಸುಶಾಂತ್ ಸಿಂಗ್, ತದನಂತರ 'ಕಾಯ್ ಪೋಚೆ' ಸಿನಿಮಾದ ಮೂಲಕ ಮೊಟ್ಟ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು.

ಆ ನಂತರ ತಮ್ಮ ಅದ್ಭುತ ನಟನೆಯ ಮೂಲಕ ತೆರೆಯ ಮೇಲೆ ಭರವಸೆ ಮೂಡಿಸಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ಇದೀಗ ಬೇಡಿಕೆಯುಳ್ಳ ನಟನಾಗಿ ಹೊರ ಹೊಮ್ಮಿದ್ದಾರೆ.

ಸದ್ಯಕ್ಕೆ ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿ ಅವರ ನಿಜ ಜೀವನಾಧರಿತ ಕಥೆಯ 'M.S. Dhoni: The Untold Story' ಎಂಬ ಸಿನಿಮಾದಲ್ಲಿ, ಧೋನಿ ಪಾತ್ರ ಮಾಡುವ ಮೂಲಕ, ಸುಶಾಂತ್ ಸಿಂಗ್ ಬಿಟೌನ್ ನಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ.[ತಮ್ಮ ಜೀವನ ಆಧಾರಿತ ಚಿತ್ರಕ್ಕೆ ಧೋನಿ ಪಡೆದ ಹಣವೆಷ್ಟು ಗೊತ್ತೆ?]

ಈಗಾಗಲೇ ಮಹೇಂದ್ರ ಸಿಂಗ್ ಧೋನಿ ಮತ್ತು ನಟ ಸುಶಾಂತ್ ಸಿಂಗ್ ಅವರು ಜೊತೆಯಾಗಿ ಚಿತ್ರದ ಪ್ರೊಮೋಷನ್ ಮಾಡುತ್ತಿದ್ದಾರೆ. ಹಲವು ಜಾಹೀರಾತುಗಳಲ್ಲಿ ಕೂಡ ಒಂದಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ನಟ ಸುಶಾಂತ್ ಸಿಂಗ್ ಅವರಿಗೆ, 'ಧೋನಿ' ಚಿತ್ರದ ಪರಿಣಾಮ ತಮ್ಮ ಜೀವನದಲ್ಲಿ, ಒಬ್ಬ ದೊಡ್ಡ ವ್ಯಕ್ತಿಯನ್ನು ಭೇಟಿ ಮಾಡುವ, ಒಂದು ಅಮೂಲ್ಯ ಅವಕಾಶ ದೊರೆತಿದೆ. ಮುಂದೆ ಓದಿ....

ಕಾಲಿವುಡ್ ಸೂಪರ್ ಸ್ಟಾರ್ ರನ್ನು ಭೇಟಿ ಮಾಡಿದ ನಟ

'ಎಂ.ಎಸ್ ಧೋನಿ' ಚಿತ್ರದ ಪ್ರೊಮೋಷನ್ ಗಾಗಿ ಕ್ರಿಕೆಟರ್ ಧೋನಿ ಮತ್ತು ನಟ ಸುಶಾಂತ್ ಸಿಂಗ್ ಅವರು ಚೆನ್ನೈಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರಿಬ್ಬರಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡುವ ಅಪೂರ್ವ ಅವಕಾಶ ದೊರೆತಿದೆ.[ಧೋನಿ ಬದುಕಿನ 'ಅನ್ ಟೋಲ್ಡ್ ಸ್ಟೋರಿ' ಟ್ರೇಲರ್ ವೈರಲ್]

ರಜನಿ ಜೊತೆ ಅಸಲಿ ಮತ್ತು ನಕಲಿ ಧೋನಿ

ಚೆನ್ನೈನಲ್ಲಿ ರಜನಿಕಾಂತ್ ಅವರ ಮನೆಗೆ ಭೇಟಿ ನೀಡಿದ ಧೋನಿ ಮತ್ತು ನಟ ಸುಶಾಂತ್ ಅವರು ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡರು. ತದನಂತರ ಹಿರಿಯ ನಟನಿಂದ ಶುಭ ಹಾರೈಕೆಯನ್ನು ಪಡೆದುಕೊಂಡರು.[ಒಂದೇ ರೂಮಿನಲ್ಲಿ 3ದಿನ ಕಳೆದ ಬಾಲಿವುಡ್ ನಟ, ನಟಿ!]

ಧೋನಿಗೆ ಕಂಗ್ರಾಟ್ಸ್ ಎಂದ ಸೂಪರ್ ಸ್ಟಾರ್

ಕ್ರಿಕೆಟ್ ಲೋಕದ ದಿಗ್ಗಜ ಧೋನಿ ಅವರಿಗೆ ರಜನಿಕಾಂತ್ ಅವರು 'ಹೀರೋ ಆಗಿದ್ದಕ್ಕೆ ಕಂಗ್ರಾಟ್ಸ್ ಎಂದರಂತೆ, ಆವಾಗ ಧೋನಿ ಅವರು ಆಶ್ಚರ್ಯ ಚಕಿತರಾಗಿ, ನಾನು ಹೀರೋ ಆಗಿಲ್ಲ, ನನ್ನ ಜೀವನಾಧರಿತ ಸಿನಿಮಾ ಬರುತ್ತಿದೆ ಎಂದರಂತೆ. ಆವಾಗ ರಜನಿ ಅವರು, ಮತ್ತೆ ನಿಮ್ಮ ಪಾತ್ರ ಮಾಡ್ತಿರೋದು ಯಾರು ಅಂದಾಗ, ಧೋನಿ ಸುಶಾಂತ್ ಅವರನ್ನು ತೋರಿಸಿದ್ದಾರೆ. ತಕ್ಷಣ ರಜನಿ ಅವರು ಇಬ್ಬರ ಬಳಿಯೂ ಕ್ಷಮೆ ಕೇಳಿದ್ದಾರೆ.

ವಿನಮ್ರ ಮನುಷ್ಯ ರಜನಿಕಾಂತ್

ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ ಖುಷಿಯನ್ನು ನಟ ಸುಶಾಂತ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು 'ಹೇಗೆ ಕೆಲವು ವ್ಯಕ್ತಿಗಳು ಪ್ರಾಮಾಣಿಕ ಮತ್ತು ವಿನಮ್ರ ವ್ಯಕ್ತಿತ್ವದವರಾಗಿರುತ್ತಾರೆ, ಆ ವ್ಯಕ್ತಿತ್ವವನ್ನು ನಾನು ಸೂಪರ್ ಸ್ಟಾರ್ ರಜನಿಕಾಂತ್ ಅವರಲ್ಲಿ ಅಗಾಧವಾಗಿ ಕಂಡೆ' ಎಂದು ಸಂಭ್ರಮದಿಂದ ಟ್ವೀಟ್ ಮಾಡಿದ್ದಾರೆ.

ಮುಂದಿನ ವಾರ ತೆರೆಯ ಮೇಲೆ ಧೋನಿ ಆರ್ಭಟ

'M.S Dhoni: The Untold Story' ಮುಂದಿನ ವಾರ ಅಂದ್ರೆ, ಸೆಪ್ಟೆಂಬರ್ 30, ರಂದು ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಚಿತ್ರಕ್ಕೆ ನೀರಜ್ ಪಾಂಡೆ ಅವರು ಆಕ್ಷನ್-ಕಟ್ ಹೇಳಿರುವ ಈ ಚಿತ್ರಕ್ಕೆ ಈಗಾಗಲೇ ಸಾಕಷ್ಟು ರೆಸ್ಪಾನ್ಸ್ ಸಿಕ್ಕದೆ. ಚಿತ್ರದ ಟ್ರೈಲರ್ ಮತ್ತು ಹಾಡುಗಳು ಸೂಪರ್ ಹಿಟ್ ಆಗಿವೆ.

ದೊಡ್ಡ ಮಟ್ಟದಲ್ಲಿ ತೆರೆ ಕಾಣುತ್ತಿರುವ ಸಿನಿಮಾ

ಸದ್ಯಕ್ಕೆ 60 ದೇಶದ, ಸುಮಾರು 4,500 ಚಿತ್ರಮಂದಿರಗಳಲ್ಲಿ 'ಎಂ.ಎಸ್ ಧೋನಿ: ದ ಅನ್ ಟೋಲ್ಡ್ ಸ್ಟೋರಿ' ತೆರೆ ಕಾಣಲು ಸಿದ್ದವಾಗಿದ್ದು, ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಈಗಾಗಲೇ ಚಿತ್ರತಂಡ ಮಾಡಿಕೊಂಡಿದೆ. ಧೋನಿ ಅವರ ಪತ್ನಿ ಸಾಕ್ಷಿ ಅವರ ಪಾತ್ರದಲ್ಲಿ ನಟಿ ಭೂಮಿಕಾ ಚಾವ್ಲಾ ಅವರು ಮಿಂಚಿದ್ದಾರೆ. ನಟಿ ದಿಶಾ ಅವರು ಧೋನಿಯ ಗರ್ಲ್ ಫ್ರೆಂಡ್ ಪಾತ್ರ ವಹಿಸಿದ್ದಾರೆ.

English summary
Bollywood actor Sushant Singh Rajput got the opportunity of his life to meet Kollywood superstar Rajinikanth at his residence in Chennai along with team India captain M.S Dhoni for the promotions of his upcoming film 'M.S. Dhoni: The Untold Story' on the cricketer's life.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada