For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ಕೇಸ್‌ನಲ್ಲಿ ನಟನ ಹೆಸರು ಲಿಂಕ್: ಕೋಪಗೊಂಡ ಮರಾಠಿ ನಟ

  |

  ಉದ್ಯಮಿ ರಾಜ್ ಕುಂದ್ರಾರ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಉಮೇಶ್ ಕಾಮತ್ ಎನ್ನುವ ಹೆಸರು ತಳುಕು ಹಾಕಿಕೊಂಡಿದೆ. ಆಶ್ಲೀಲ ವಿಡಿಯೋ ನಿರ್ಮಾಣ ಹಿನ್ನೆಲೆ ಉಮೇಶ್ ಕಾಮತ್ ಜೊತೆ ರಾಜ್ ಕುಂದ್ರಾ ವಾಟ್ಸಾಪ್ ಚಾಟ್ ನಡೆಸಿದ್ದು, ಅದರಲ್ಲಿ ಕೆಲವು ನಟಿಯರು ಹೆಸರು ಪ್ರಸ್ತಾಪವಾಗಿದೆ ಎಂಬ ಸುದ್ದಿ ವರದಿಯಾಗಿತ್ತು.

  ಉಮೇಶ್ ಕಾಮತ್ ಹೆಸರು ಚರ್ಚೆಗೆ ಬಂದ ತಕ್ಷಣ ಮರಾಠಿ ನಟ ಉಮೇಶ್ ಕಾಮತ್ ಫೋಟೋಗಳು ವೈರಲ್ ಆಗಿದೆ. ಕೆಲವು ವೆಬ್‌ಸೈಟ್ ಹಾಗೂ ಸುದ್ದಿ ಮಾಧ್ಯಮಗಳು ಸಹ ರಾಜ್ ಕುಂದ್ರಾ ಜೊತೆಗೆ ಚಾಟ್ ಮಾಡಿರುವುದು ಮರಾಠಿ ನಟ ಉಮೇಶ್ ಕಾಮತ್ ಎನ್ನುವಂತೆ ಬಂಬಿಸಿವೆ.

  ರಾಜ್ ಕುಂದ್ರಾ ಕೇಸ್‌ನಲ್ಲಿ ಮತ್ತೊಬ್ಬ ನಟಿಯ ಹೆಸರು, ಕನ್ನಡದಲ್ಲೂ ನಟನೆರಾಜ್ ಕುಂದ್ರಾ ಕೇಸ್‌ನಲ್ಲಿ ಮತ್ತೊಬ್ಬ ನಟಿಯ ಹೆಸರು, ಕನ್ನಡದಲ್ಲೂ ನಟನೆ

  ಮಾಧ್ಯಮಗಳಲ್ಲಿ ಹಾಗು ಸೋಶಿಯಲ್ ಮಿಡಿಯಾದಲ್ಲಿ ತನ್ನ ಹೆಸರು ಮತ್ತು ಫೋಟೋಗಳನ್ನು ದುರ್ಬಳಕೆ ಮಾಡಲಾಗಿದೆ. ಅನಗತ್ಯವಾಗಿ ಈ ಕೇಸ್‌ನಲ್ಲಿ ನನ್ನ ಹೆಸರು ತಳುಕು ಹಾಕಲಾಗುತ್ತಿದೆ. ಪ್ರಕರಣದಲ್ಲಿ ಕೇಳಿ ಬರುತ್ತಿರುವ ಉಮೇಶ್ ಕಾಮತ್ ನಾನಲ್ಲ ಎಂದು ಮರಾಠಿ ನಟ ಸ್ಪಷ್ಟನೆ ಕೊಟ್ಟಿದ್ದಾರೆ.

  ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಉಮೇಶ್ ಕಾಮತ್ ಮಾಧ್ಯಮಗಳ ಜವಾಬ್ದಾರಿಯನ್ನು ಪ್ರಶ್ನಿಸಿದ್ದಾರೆ. ''ಸುದ್ದಿ ವಾಹಿನಿಗಳು, ಮಾಧ್ಯಮಗಳು ಸಂಪೂರ್ಣವಾಗಿ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಈ ಘಟನೆಗೆ ಸಂಬಧಿಸಿದಂತೆ ಯಾವುದೇ ಪರಿಶೀಲನೆ ಮಾಡಿಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ''ರಾಜ್ ಕುಂದ್ರಾ ಪ್ರಕರಣದೊಂದಿಗೆ ನನ್ನ ಹೆಸರು ತಳುಕು ಹಾಕಿ, ನನ್ನ ಫೋಟೋಗಳನ್ನು ಪ್ರಸಾರ ಮಾಡಿರುವುದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಅಪಾರ ಅವಮಾನ ಆಗಿದೆ. ಅನಗತ್ಯ ಊಹಾಪೋಹಗಳನ್ನು ಉಂಟು ಮಾಡಿದೆ. ರಾಜ್ ಕುಂದ್ರಾ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಹೆಸರು ಸಾಮಾನ್ಯವಾಗಿರುವುದರಿಂದ ಈ ರೀತಿ ಆಗಿದೆ'' ಎಂದು ಉಮೇಶ್ ಸ್ಪಷ್ಟನೆ ನೀಡಿದ್ದಾರೆ.

  ''ಎರಡು ದಶಕಗಳಿಂದ ಉದ್ಯಮದಲ್ಲಿದ್ದೇನೆ, ಇಷ್ಟು ವರ್ಷದ ನನ್ನ ವೃತ್ತಿ ಜೀವನದಲ್ಲಿ ಬಹಳ ಕಷ್ಟಪಟ್ಟು ಹೆಸರು ಪಡೆದಿದ್ದೇನೆ. ಈ ವಿಚಾರದಲ್ಲಿ ಮಾಧ್ಯಮಗಳು ಯಾವುದೇ ಪರಿಶೀಲನೆ ನಡೆಸದೆ ತೇಜೋವಧೆ ಮಾಡಿರುವುದರಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಾನು ನಿರ್ಧರಿಸಿದ್ದೇನೆ.'' ಎಂದು ತಿಳಿಸಿದರು.

  'ಅಸಂಭವ್', 'ಏಕ್ ಲಗ್ನಾಚಿ ತೀಸ್ರಾ ಗೋಷ್ಠ' ಅಂತಹ ಕಾರ್ಯಕ್ರಮಗಳಲ್ಲಿ ಉಮೇಶ್ ಕಾಮತ್ ಕಾಣಿಸಿಕೊಂಡಿದ್ದರು.

  English summary
  Raj Kundra Porn Case: Actor Umesh Kamat to take legal action for linking him in the case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X