»   » ಊರಿಗೊಬ್ಳೆ 'ಪದ್ಮಾವತಿ' ದೀಪಿಕಾ ಗಂಡ ಆಗ್ತಾರಾ ವಿಕ್ಕಿ.?

ಊರಿಗೊಬ್ಳೆ 'ಪದ್ಮಾವತಿ' ದೀಪಿಕಾ ಗಂಡ ಆಗ್ತಾರಾ ವಿಕ್ಕಿ.?

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಮತ್ತು ಹಾಲಿವುಡ್ ನಲ್ಲೂ ಭಾರಿ ಖ್ಯಾತಿ ಪಡೆದಿರುವ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವೆ ಹಲವು ಸಮಯದಿಂದ ಕುಛ್ ಕುಛ್ ಇದೆ. ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಂಡು ಮಾಧ್ಯಮಗಳ ಕಣ್ಣಿಗೆ ಆಹಾರವಾಗಿದ್ದರು. ಜೊತೆಗೆ ಇತ್ತೀಚೆಗಷ್ಟೇ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಬೇರೆ ಸುದ್ದಿಯಾಗಿತ್ತು.

ಆದ್ರೆ ಇದೀಗ ದೀಪಿಕಾ ರಣವೀರ್ ಬದ್ಲಾಗಿ ಬೇರೋಬ್ಬನ ಹೆಂಡತಿ ಆಗ್ತೀವ್ತಿ ಅಂತಿದ್ದಾರೆ. ಅಯ್ಯಯ್ಯೋ ಇದೆನಪ್ಪಾ?, ಇವಳಿಗ್ಯಾಕ್ ಬಂತೀ ಈ ಗತಿ ಅಂತ ಚಿಂತೆ ಮಾಡಬೇಡಿ. ದೀಪಿಕಾ ಬೇರೋಬ್ಬನ ಪತ್ನಿ ಆಗ್ತೀರೋದು ರೀಲ್ ನಲ್ಲಿ ಮಾತ್ರ ರಿಯಲ್ ಆಗಿ ಅಲ್ಲ.[ರಿಲೀಸ್ ಆಯ್ತು ಡಿಪ್ಪಿಯ ಹಾಲಿವುಡ್ 'XXX' ಲೋಗೋ]

Actor Vicky Kaushal To Play Deepika Padukone’s Husband In 'Padmavati'

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್-ಕಟ್ ಹೇಳುತ್ತಿರುವ ಹೊಸ ಚಿತ್ರ 'ಪದ್ಮಾವತಿ'ಯಲ್ಲಿ ನಟಿ ದೀಪಿಕಾ ಪಡುಕೋಣೆ ಅವರು 'ರಮಣ್ ರಾಘವ್ 2.0' ಖ್ಯಾತಿಯ ನಟ ವಿಕ್ಕಿ ಕೌಶಲ್ ಅವರ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಬನ್ಸಾಲಿ ಅವರು ಈ ಸುದ್ದಿಯನ್ನು ಇನ್ನೂ ಪಕ್ಕಾ ಮಾಡಿಲ್ಲ.

'ರಮಣ್ ರಾಘವ್ 2.0' ಚಿತ್ರದಲ್ಲಿ ನಟ ವಿಕ್ಕಿ ಕೌಶಲ್ ಅವರ ಅಧ್ಭುತ ನಟನಾ ಕೌಶಲ್ಯವನ್ನು ಕಂಡವರು ಅವರಿಗೆ ಫಿದಾ ಆಗಿದ್ದರು. ರಮಣ್ ರಾಘವ್ ಯಶಸ್ಸಿನ ಪರಿಣಾಮ ಬನ್ಸಾಲಿ ಅವರು ವಿಕ್ಕಿ ಅವರನ್ನೇ 'ಪದ್ಮಾವತಿ' ಗಂಡನಾಗಿ ಆರಿಸಿಕೊಂಡರು ಅಚ್ಚರಿ ಇಲ್ಲ.[ದೀಪಿಕಾ ಜೊತೆ ಮದುವೆ ಬಗ್ಗೆ ರಣವೀರ್ ಏನಂತಾರೆ.?]

Actor Vicky Kaushal To Play Deepika Padukone’s Husband In 'Padmavati'

ಈ ಮೊದಲು ಡಿಪ್ಪಿ ಜೋಡಿಯಾಗಿ ರಣವೀರ್ ಹೆಸರು ಕೇಳಿಬಂದಿತ್ತು. ಆದರೆ ಬನ್ಸಾಲಿ ಅವರ ಆಡಿಷನ್ ನಲ್ಲಿ ವಿಕ್ಕಿ ಪಾಲ್ಗೊಂಡಿದ್ದು, ಬನ್ಸಾಲಿ ಅವರಿಗೂ ವಿಕ್ಕಿ ಮೆಚ್ಚುಗೆಯಾಗಿದ್ದಾರೆ.

ಅಂತೂ ಕೊನೆಗೆ ಬನ್ಸಾಲಿ ತಮ್ಮ ಫೇವರಿಟ್ ಜೋಡಿ ಡಿಪ್ಪಿ-ರಣವೀರ್ ನನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಅಥವಾ ವಿಕ್ಕಿಯನ್ನು 'ಪದ್ಮಾವತಿ' ಗಂಡ ಮಾಡುತ್ತಾರೋ ಅಂತ ಕಾದು ನೋಡಬೇಕಿದೆ.[ದೀಪಿಕಾಗೆ ನಿಶ್ಚಿತಾರ್ಥ ಆಯ್ತಾ?! ನಟಿ ಹೇಮಾ ಮಾಲಿನಿ ಏನಂದ್ರು?]

English summary
After delivering a mindblowing performance in 'Raman Raghav 2.0', it is reported that Actor Vicky Kaushal might play the role of Actress Deepika Padukone's husband in Director Sanjay Leela Bhansali's upcoming film 'Padmavati'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada