»   » ಕಿರುತೆರೆ ನಟಿ ಮೇಲೆ ಅತ್ಯಾಚಾರ ಎಸಗಿದ ಬಾಲಿವುಡ್ ನಟ

ಕಿರುತೆರೆ ನಟಿ ಮೇಲೆ ಅತ್ಯಾಚಾರ ಎಸಗಿದ ಬಾಲಿವುಡ್ ನಟ

By: ಸೋನು ಗೌಡ
Subscribe to Filmibeat Kannada

ಅಕ್ಟೋಬರ್ 18 ರಂದು, ಕಿರುತೆರೆ ನಟಿ ಮೇಲೆ ಅತ್ಯಾಚಾರ ಮಾಡಿದ ಹಿನ್ನಲೆಯಲ್ಲಿ ಮುಂಬೈನ ಬಾಲಿವುಡ್ ನಟನ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ದೂರದರ್ಶನ ನಟಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಹಿನ್ನಲೆಯಲ್ಲಿ ಮುಂಬೈನ ಬಾಲಿವುಡ್ ನಟ ವಿಶಾಲ್ ಥಾಕ್ಕರ್ ಅವರ ಮೇಲೆ ಅತ್ಯಾಚಾರ ಹಾಗೂ ಇನ್ನಿತರೇ ಅಪರಾಧಗಳ ಮೇಲೆ ಕೇಸು ದಾಖಲಿಸಲಾಗಿದೆ. ಎಂದು ಚಾರ್ ಕೋಪ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ರಾಮಚಂದ್ರ ಗಾಯಿಕವಾಡ್ ತಿಳಿಸಿದ್ದಾರೆ.[ಮನೆಕೆಲಸದ ಯುವತಿ ಮೇಲೆ ಶೈನಿ ಅತ್ಯಾಚಾರ]

Actor Vishal Thakkar Booked on Charges of Raping TV Actress

ಅತ್ಯಾಚಾರಕ್ಕೊಳಗಾದಾಕೆ ಖಾಸಗಿ ಚಾನಲ್ ಒಂದರಲ್ಲಿ ಕಿರುತೆರೆ ನಟಿಯಾಗಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಕಿರುತೆರೆ ನಟಿ ತನ್ನ ಮನೆಯಲ್ಲಿದ್ದ ಸಂದರ್ಭದಲ್ಲಿ ಆರೋಪಿ ನಟ ವಿಶಾಲ್ ಇಂತಹ ಹೀನ ಕೃತ್ಯವನ್ನು ಎಸಗಿದ್ದಾನೆ. ಎಂದು ಪೊಲೀಸರು ತಿಳಿಸಿದ್ದಾರೆ.[ಅತ್ಯಾಚಾರ ಪ್ರಕರಣ : ಶೈನಿ ಅಹುಜಾಗೆ ಜಾಮೀನು]

ಈಗಾಗಲೇ ಎಫ್ ಐ ಆರ್ ದಾಖಲಾಗಿದ್ದು, ಐ.ಪಿ.ಸಿ ಸೆಕ್ಷನ್ 376 (ರೇಪ್) 420 ( ಮೋಸ), 323, 509 ( ಉದ್ದೇಶಪೂರ್ವಕವಾಗಿ ಮಹಿಳೆಯನ್ನು ಅವಮಾನ ಪಡಿಸಲು ಯತ್ನ) 506 ( ಕ್ರಿಮಿನಲ್ ಉದ್ದೇಶ) ಇಷ್ಟು ಕೇಸುಗಳು ಆರೋಪಿ ಮೇಲೆ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಬಾಲಿವುಡ್ ಸಿನಿಮಾ 'ಟ್ಯಾಂಗೋ ಚಾರ್ಲಿ' ಹಾಗೂ 'ಚಾಂದಿನಿ ಬಾರ್' ಚಿತ್ರಗಳಲ್ಲಿ ಸಣ್ಣ ಪಾತ್ರ ವಹಿಸಿದ್ದ ಆರೋಪಿ ವಿಶಾಲ್ ಥಾಕ್ಕರ್ ನನ್ನು ಇನ್ನು ಬಂಧಿಸಿಲ್ಲ. ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.

English summary
Bollywood Actor Vishal Thakkar has been booked for allegedly raping a Television Actress. A case has been registered against actor Vishal Thakkar under relevant sections of rape and other offences Yesterday (October 18th).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada