Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Vivek Oberoi : ಬಾಲಿವುಡ್‌ನ ಕರಾಳ ಮುಖದ ಪರಿಚಯ ಮಾಡಿಸಿದ ವಿವೇಕ್ ಒಬೆರಾಯ್
ವಿಶ್ವದ ಅತಿ ದೊಡ್ಡ ಸಿನಿಮಾ ಉದ್ಯಮಗಳಲ್ಲಿ ಒಂದೆನಿಸಿಕೊಂಡಿರುವ ಬಾಲಿವುಡ್ ಹೊರ ಪ್ರಪಂಚಕ್ಕೆ ಥಳುಕು-ಬಳುಕು. ಆದರೆ ಬಾಲಿವುಡ್‌ಗೆ ಇನ್ನೊಂದು ಮುಖವಿದೆ. ಆ ಮುಖದ ಪರಿಚಯ ಬಾಲಿವುಡ್ ಒಳಗಿರುವವರಿಗಷ್ಟೆ ಇದೆ.
ನಟ ವಿವೇಕ್ ಒಬೆರಾಯ್ ದಶಕಗಳಿಂದಲೂ ಬಾಲಿವುಡ್‌ನಲ್ಲಿದ್ದಾರೆ. ಏಳು-ಬೀಳು, ಪ್ರಶಂಸೆ-ನಿಂದನೆ ಎಲ್ಲವನ್ನೂ ಕಂಡಿರುವ ಅವರ ಬಾಲಿವುಡ್ ಜರ್ನಿ ರೋಲರ್‌ಕೋಸ್ಟರ್ ರೈಡ್‌ನಂತಿದೆ. ಎರಡು ದಶಕಗಳಿಂದ ಬಾಲಿವುಡ್‌ನಲ್ಲಿರುವ ವಿವೇಕ್ ತಾವು ಬಾಲಿವುಡ್‌ನ ಇನ್ನೊಂದು ಮುಖ ನೋಡಿರುವುದಾಗಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿವೇಕ್ ಒಬೆರಾಯ್, ''ಇಲ್ಲಿ ನಿಮ್ಮನ್ನು ನಿರಾಕರಿಸಲು ಖಾಸಗಿ ಕಾರಣಗಳನ್ನು ನೀಡಲಾಗುತ್ತದೆ. ವೃತ್ತಿ ಕಾರಣಗಳಲ್ಲ. ಖಾಸಗಿ ಕಾರಣಗಳಿಗಾಗಿ ಸಾಕಷ್ಟು ಅವಕಾಶಗಳನ್ನು ನಾನು ಕಳೆದುಕೊಂಡಿದ್ದೇನೆ'' ಎಂದಿದ್ದಾರೆ ವಿವೇಕ್.
''ನಾನು ಇಲ್ಲಿ, ಸಾಕಷ್ಟು ಕೆಟ್ಟ ದಿನಗಳನ್ನು ನೋಡಿದ್ದೇನೆ. ಕೆಟ್ಟ ಕಮೆಂಟ್‌ಗಳು, ಮೂದಲಿಕೆಗಳು, ನಿಂದನೆಗಳನ್ನು ಸಹಿಸಿಕೊಂಡಿದ್ದೇನೆ. ಅವೆಲ್ಲವೂ ನನ್ನನ್ನು ಇನ್ನಷ್ಟು ಗಟ್ಟಿಯಾದ ವ್ಯಕ್ತಿಯನ್ನಾಗಿ ಮಾಡಿವೆ'' ಎಂದಿದ್ದಾರೆ ವಿವೇಕ್.
''ಒಂದು ಸಮಯವಿತ್ತು ನಾನು ಸತತ ಹಿಟ್ ಸಿನಿಮಾಗಳನ್ನು ನೀಡಿದ್ದೆ, ಹಲವು ಪ್ರಶಸ್ತಿಗಳನ್ನು ಸಹ ಪಡೆದೆ. ಆದರೆ ಕೂಡಲೆ ಸಮಯ ಪಲ್ಲಟವಾಯ್ತು ಸತತವಾಗಿ ಒಂದುವರೆ ವರ್ಷ ನಾನು ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳುವಂತಾಯಿತು. ಯಾರದ್ದೋ ದ್ವೇಷದಿಂದ ನನಗೆ ಆ ಗತಿ ಬಂದಿತ್ತು'' ಎಂದಿದ್ದಾರೆ ವಿವೇಕ್ ಒಬೆರಾಯ್.
''ನೀನು ಎಷ್ಟೇ ಚೆನ್ನಾಗಿ ನಟಿಸು, ಕೆಲಸ ಮಾಡು ನಿನಗೆ ಇನ್ನು ಮುಂದೆ ಈ ಉದ್ಯಮದಲ್ಲಿ ಕೆಲಸ ಸಿಗುವುದಿಲ್ಲ ಎಂದು ನೇರವಾಗಿ ನನಗೆ ಹೇಳಿದ್ದರು. ಆ ನಂತರವೂ ನಾನು ಸಾಕಷ್ಟು ಶ್ರಮ ಪಟ್ಟು ಕೆಲಸ ಮಾಡಿದೆ. ಈಗ ನಾನಿರುವ ಹಂತಕ್ಕೆ ಬರಲು ಬಹಳ ಕಷ್ಟಪಟ್ಟಿದ್ದೇನೆ. ಇನ್ನೂ ನಾನು ಸಾಕಷ್ಟು ದೂರ ಪ್ರಯಾಣ ಮಾಡಬೇಕಿದೆ. ಇನ್ನೂ ಸಾಕಷ್ಟು ಸಾಧಿಸಬೇಕಿದೆ'' ಎಂದಿದ್ದಾರೆ ವಿವೆಕ್ ಒಬೆರಾಯ್.
ವಿವೇಕ್ ಒಬೆರಾಯ್ ಹಾಗೂ ಸಲ್ಮಾನ್ ಖಾನ್ ನಡುವೆ ಜಗಳ ಏರ್ಪಟ್ಟ ಬಳಿಕ ವಿವೇಕ್ ಒಬೆರಾಯ್ ವೃತ್ತಿ ಜೀವನ ಕುಸಿಯುತ್ತಾ ಸಾಗಿತು. ಹಲವು ಪ್ರಾಜೆಕ್ಟ್‌ಗಳಿಂದ ವಿವೇಕ್ ಒಬೆರಾಯ್ ಅನ್ನು ಕೈಬಿಡಲಾಯಿತು. ಆದರೂ ಹಾಗೋ ಹೀಗೋ ಕಷ್ಟಪಟ್ಟು ಈಗಲೂ ಅವರು ಬಾಲಿವುಡ್‌ನಲ್ಲಿ ಸ್ಥಿತವಾಗಿದ್ದಾರೆ.
ವಿವೇಕ್ ಒಬೆರಾಯ್ ಮಾತ್ರವೇ ಅಲ್ಲದೆ ನಟಿ ಕಂಗನಾ ರನೌತ್ ಸಹ ಬಾಲಿವುಡ್‌ನ ಕರಾಳ ಮುಖವನ್ನು ಆಗಾಗ್ಗೆ ಬಿಚ್ಚಿಡುತ್ತಿರುತ್ತಾರೆ. ಅವರು ಸಹ ಸಾಕಷ್ಟು ಮೂದಲಿಕೆ, ದೌರ್ಜನ್ಯವನ್ನು ಬಾಲಿವುಡ್‌ನಲ್ಲಿ ಎದುರಿಸಿದ್ದಾರೆ.
ಮೇಲೆ ಥಳುಕು-ಬಳುಕಾಗಿ ಐಶಾರಾಮಿಯಾಗಿ ಕಾಣುವ ಬಾಲಿವುಡ್‌ನಲ್ಲಿ, ಮಹಿಳೆಯರ ಮೇಲೆ ದೌರ್ಜನ್ಯ, ಸ್ವಜನಪಕ್ಷಪಾತ, ಫೇವರಿಸಂ, ಮೋಸ, ವಂಚನೆ, ಕಾಲೆಳೆತ ಹಲವು ದುರ್ಗುಣಗಳು ಅಡಕವಾಗಿವೆ.