For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ಪ್ರಕರಣ ಸಿಬಿಐಗೆ: ಅಕ್ಷಯ್, ಕಂಗನಾ ಸೇರಿದ್ದಂತೆ ಕಲಾವಿದರ ಪ್ರತಿಕ್ರಿಯೆ ಹೀಗಿದೆ

  |

  ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕು ಎನ್ನುವ ಹೋರಾಟ ನಡೆಯುತ್ತಿತ್ತು. ಕೊನೆಗೂ ಹೋರಾಟಕ್ಕೆ ಜಯ ಸಿಕ್ಕಿದೆ. ಇಂದು (ಆಗಸ್ಟ್ 19)ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

  ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

  ಸುಶಾಂತ್ ಸಿಂಗ್ ಪ್ರಕರಣವನ್ನು ಪಟ್ನಾದಿಂದ ಮುಂಬೈಗೆ ವರ್ಗಾಯಿಸಬೇಕು ಎಂದು ರಿಯಾ ಸಲ್ಲಿಸಿದ ಅರ್ಜಿ ವಿಚಾರಣೆ ಮಾಡಿ, ತೀರ್ಪು ಆಗಸ್ಟ್ 19ಕ್ಕೆ ಕಾಯ್ದಿರಿಸಲಾಗಿತ್ತು. ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸುಶಾಂತ್ ಸಿಂಗ್ ಸಾವಿಗೀಡಾಗಿ 65 ದಿನಗಳ ಬಳಿಕ ಸಾವಿನ ಹಿಂದಿನ ರಹಸ್ಯ ತಿಳಿಯಲು ಸಿಬಿಐ ತನಿಖೆ ನಡೆಯಬೇಕೆಂಬ ಹೋರಾಟಕ್ಕೆ ಜಯಸಿಕ್ಕಿದೆ.

  ಸುಶಾಂತ್ ಸಿಂಗ್ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

  ಸುಪ್ರೀಂ ಕೋರ್ಟ್ ತೀರ್ಪು ಪ್ರಟಕವಾಗುತ್ತಿದ್ದಂತೆ ಸುಶಾಂತ್ ಸಿಂಗ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗ ಗಣ್ಯರಾದ ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಸೇರಿದ್ದಂತೆ ಅನೇಕರು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸಂಸತ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ..

  ಅಕ್ಷಯ್ ಕುಮಾರ್

  ಅಕ್ಷಯ್ ಕುಮಾರ್

  ನಟ ಅಕ್ಷಯ್ ಕುಮಾರ್ ಸುಶಾಂತ್ ಸಿಂಗ್ ಸಾವಿನ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಾವಿನ ಸಾಕಷ್ಟು ಚರ್ಚೆಯಾಗುತ್ತಿದ್ದರೂ ಬಾಲಿವುಡ್ ನ ಸ್ಟಾರ್ ನಟರ್ಯಾರು ಮಾತನಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದು "ಸುಶಾಂತ್ ಸಿಂಗ್ ರಪೂತ್ ಸಾವಿನ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸಿಬಿಐಗೆ ನೀಡಿದೆ. ಸತ್ಯ ಯಾವಾಗಲು ಮೇಲುಗೈ ಸಾಧಿಸಲಿದೆ" ಎಂದು ಹೇಳಿದ್ದಾರೆ.

  ನಟಿ ಶಿಲ್ಪ ಶೆಟ್ಟಿ

  ನಟಿ ಶಿಲ್ಪ ಶೆಟ್ಟಿ

  "ಸುಪ್ರೀಂ ಕೋರ್ಟ್ ತೀರ್ಪು ಶ್ಲಾಘನೀಯವಾಗಿದೆ. ಶೀಘ್ರದಲ್ಲಿಯೇ ಸತ್ಯ ಹೊರಬರಲಿದೆ ಎಂದು ಭಾವಿಸುತ್ತೇನೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸತ್ಯ ಮೇಲುಗೈ ಸಾಧಿಸಲಿ" ಎಂದು ನಟಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

  ಕಂಗನಾ ರಣಾವತ್

  ಕಂಗನಾ ರಣಾವತ್

  "ಮಾನವೀಯತೆ ಗೆಲ್ಲುತ್ತದೆ, ಸುಶಾಂತ್ ಸಿಂಗ್ ಸಾವಿನ ನ್ಯಾಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಮೊದಲ ಬಾರಿಗೆ ನಾನು ಸಾಮೂಹಿಕ ಪ್ರಜ್ಞೆಯ ಬಲವಾದ ಬಲವನ್ನು ಅನುಭವಿಸಿದೆ. ಅಮೇಜಿಂಗ್" ಎಂದು ಟ್ವೀಟ್ ಮಾಡಿದ್ದಾರೆ.

  ಪರಿಣೀತಿ ಚೋಪ್ರಾ

  ಪರಿಣೀತಿ ಚೋಪ್ರಾ

  "ಇದು ಸಕರಾತ್ಮಕವಾದ ಹೆಜ್ಜೆಯಾಗಿದೆ. ದಯವಿಟ್ಟು ಈ ಕ್ಷಣವನ್ನು ಗೌರವಿಸೋಣ. ಮತ್ತು ಸಿಬಿಐ ತಮ್ಮ ಕೆಲಸವನ್ನು ಈಗ ಮಾಡಲಿ. ದಯವಿಟ್ಟು ತಮ್ಮದೆ ಆದ ತೀರ್ಮಾನಕ್ಕೆ ಬರುವುದು ಮತ್ತು ಊಹಾಪೂಹಗಳನ್ನು ಹಬ್ಬಿಸುವುದನ್ನು ನಿಲ್ಲಿಸೋಣ" ಎಂದು ನಟಿ ಪರಿಣೀತ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.

  ವಸಿಷ್ಠ ಸಿಂಹಾ ಮತ್ತು ಪ್ರೀತಂ ಗುಬ್ಬಿ

  ವಸಿಷ್ಠ ಸಿಂಹಾ ಮತ್ತು ಪ್ರೀತಂ ಗುಬ್ಬಿ

  ಅಂತಿಮವಾಗಿ ಸುಶಾಂತ್ ಸಿಂಗ್ ಪ್ರಕರಣ ಸಿಬಿಐಗೆ ಒಪ್ಪಿಸಲಾಗಿದೆ. ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ಭಾವಿಸುತ್ತೇನೆ" ಎಂದು ನಟ ವಸಿಷ್ಠ ಸಿಂಹ ಟ್ಟೀಟ್ ಮಾಡಿದ್ದಾರೆ. ಇನ್ನೂ ಕನ್ನಡದ ನಿರ್ದೇಶಕ ಪ್ರೀತಂ ಗುಬ್ಬಿ ಟ್ವೀಟ್ ಮಾಡಿ "ಪ್ರತಿಭಾವಂತ, ಯುವ ಮತ್ತು ಸ್ವಾಭಿಮಾನಿ ನಟ ಜೀವನವನ್ನು ಕಳೆದುಕೊಂಡರು. ಅವರ ಕುಟುಂಬಕ್ಕೆ ಸತ್ಯಕ್ಕೆ ಸತ್ಯ ತಿಳಿಯಲಿ" ಎಂದು ಹೇಳಿದ್ದಾರೆ.

  English summary
  Akshay Kumar, Kangana and Many Bollywood Actors Lauding the Supreme Court verdict on Sushant Singh death case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X