For Quick Alerts
  ALLOW NOTIFICATIONS  
  For Daily Alerts

  ತೋಟದ ಮನೆಯಲ್ಲಿ ತಾರೆ ಲೈಲಾ ತಲೆಬುರುಡೆ ಪತ್ತೆ?

  By Rajendra
  |

  Actress Laila Khan
  ಬಾಲಿವುಡ್ ತಾರೆ ಲೈಲಾ ಖಾನ್ ಅವರ ಇಗತ್ ಪುರಿಯ ತೋಟದ ಮನೆಯ ಸಮೀಪ ಪೊಲೀಸರು ಮಂಗಳವಾರ (ಜು.9) ಶೋಧ ನಡೆಸಿದಾಗ 3 ತಲೆಬುರುಡೆಗಳು ಹಾಗೂ ಮಾನವನ ಅವಶೇಷಗಳು ಪತ್ತೆಯಾಗಿವೆ. ಲೈಲಾ ಖಾನ್ ಮಲತಂದೆ ಪರ್ವೇಜ್ ತಕ್ ನೀಡಿದ ಮಾಹಿತಿ ಮೇರೆಗೆ ಮುಂಬೈ ಪೊಲೀಸರು ಶೋಧ ನಡೆಸಿದರು.

  ಆದರೆ ಇವು ಲೈಲಾ ಖಾನ್ ಹಾಗೂ ಆಕೆಯ ಸಂಬಂಧಿಕರ ಅವಶೇಷಗಳೇ ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಪತ್ತೆಯಾದ ಮಾನವನ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

  ಲೈಲಾ ಹಾಗೂ ಅವರ ಸಂಬಂಧಿಕರನ್ನು ಕೊಲೆ ಮಾಡಿ ಶವಗಳನ್ನು ಇಗತ್ ಪುರಿಯ ಘಟನ್ ದೇವಿ ಮಂದಿರದ ಹಿಂಭಾಗದಲ್ಲಿ ಹೂಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ತಕ್ ಮಾಹಿತಿ ನೀಡಿದ್ದರು. ಈ ಮೇರೆಗೆ ಪೊಲೀಸರು ಶೋಧ ನಡೆಸಿದಾಗ ಮಾನವನ ಅವಶೇಷಗಳು ಪತ್ತೆಯಾಗಿವೆ.

  ಶೋಧಕಾರ್ಯದಲ್ಲಿ ಕೆಲವೊಂದು ಬಟ್ಟೆ ಚೂರುಗಳು ಸಿಕ್ಕಿವೆ ಎಂದು ಪೊಲೀಸ್ ಅಧಿಕಾರಿಗಲು ತಿಳಿಸಿದ್ದಾರೆ. ಲೈಲಾ ಕಾರು ಚಾಲಕ ಆನಿ ಗಿಲ್ಡರ್, ಮೆಹಬೊಬ್ ಶೇಖ್ ಅವರನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.

  ಅಂದಹಾಗೆ ಲೈಲಾ ಖಾನ್ ಅವರು ನವರಸ ನಾಯಕ ಜಗ್ಗೇಶ್ ಅವರ 'ಮೇಕಪ್' ಚಿತ್ರದಲ್ಲಿ ಅಭಿನಯಿಸಿದ್ದರು. ಲೈಲಾ ಅವರ ನಿಜವಾದ ನಾಮಧೇಯ ರೇಶ್ಮಾ ಪಟೇಲ್. ಅವರು ಅಭಿನಯಿಸಿದ ಕಟ್ಟೆ ಕಡೆಯ ಬಾಲಿವುಡ್ ಚಿತ್ರ ರಾಜೇಶ್ ಖನ್ನಾ ಜೊತೆಗಿನ 'ವಫಾ'. ಕಳೆದ ವರ್ಷ ತನ್ನ ತಾಯಿ ಸಲೀನಾ ಪಟೇಲ್, ತಂಗಿ ಅಜ್ಮಿನಾ ಹಾಗೂ ಸಹೋದರರೊಂದಿಗೆ ನಾಪತ್ತೆಯಾಗಿದ್ದರು ಲೈಲಾ.

  ಆಕೆಯ ಬಳಿ ಇದ್ದ ಕೋಟ್ಯಾಂತರ ಹಣ ಹಾಗೂ ಆಸ್ತಿಗಾಗಿ ಲೈಲಾರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿತ್ತು. ಈಕೆಗೆ ಲಷ್ಕರ್ ಇ ತೊಯ್ಬಾ (ಎಲ್‌ಇಟಿ) ಉಗ್ರರ ಜೊತೆ ಸಂಬಂಧ ಇರುವುದು ಅಂಶ ಪತ್ತೆಯಾಗಿತ್ತು. ದೆಹಲಿ ಹೈಕೋರ್ಟ್ ಸ್ಫೋಟಕ್ಕೆ ಈಕೆಯ ಕಾರಿನಲ್ಲೇ ಬಾಂಬ್‌ನ್ನು ಸಾಗಿಸಲಾಗಿತ್ತು ಎಂಬುದು ಬಯಲಾಗಿತ್ತು. (ಏಜೆನ್ಸೀಸ್)

  English summary
  After Pervez Tak confessed to have buried Laila Khan and her family in their farmhouse in Igatpuri, the police took Tak to the farmhouse to corroborate his claims, where they ended up exhuming 6 skeletons. The police is now conducting forensic examination on the skeletons in order to unravel the mystery.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X