ಕೊನೆಗೂ 'RRR' ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ ನಟಿ ಅಲಿಯಾ ಭಟ್

ಬಾಲಿವುಡ್ ನ ಖ್ಯಾತ ನಟಿ ಅಲಿಯಾ ಭಟ್ ಕೊನೆಗೂ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಅನೇಕ ತಿಂಗಳಾಗಿದ್ದು, ಅಲಿಯಾ ಯಾವಾಗ ಶೂಟಿಂಗ್ ನಲ್ಲಿ ಭಾಗಿಯಾಗ್ತಾರೆ ಎನ್ನುವ ಕುತೂಹಲ ಮಾನೆ ಮಾಡಿತ್ತು. ಕೊನೆಗೂ ಅಲಿಯಾ ರಾಜಮೌಳಿ ಅವರ ಆರ್ ಆರ್ ಆರ್ ತಂಡ ಸೇರಿಕೊಂಡಿದ್ದಾರೆ.

ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಮಹಾಬಲೇಶ್ವರದಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ಮತ್ತೆ ಹೈದರಾಬಾದ್ ಗೆ ತೆರಳಿದೆ. ಹೈದರಾಬಾದ್ ನಲ್ಲಿ ಚಿತ್ರದ ಪ್ರಮುಖ ಭಾಗಗಳ ಚಿತ್ರೀಕರಣ ನಡೆಯುತ್ತಿದೆ. ನಟಿ ಅಲಿಯಾ ಭಟ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಮುಂದೆ ಓದಿ..

RRR ಶೂಟಿಂಗ್ ಆರಂಭ ಮಾಡಿರುವ ಅಲಿಯಾ ಹೇಳಿದ್ದೇನು?

RRR ಶೂಟಿಂಗ್ ಆರಂಭ ಮಾಡಿರುವ ಅಲಿಯಾ ಹೇಳಿದ್ದೇನು?

ಆರ್ ಆರ್ ಆರ್ ಶೂಟಿಂಗ್ ಆರಂಭ ಮಾಡಿರುವ ಬಗ್ಗೆ ನಟಿ ಅಲಿಯಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಕೊನೆಗೂ ಆರ್ ಆರ್ ಆರ್ ತಂಡ ಸೇರಿದೆ' ಎಂದು ಬರೆದುಕೊಂಡು ಫೋಟೋ ಹಂಚಿಕೊಂಡಿದ್ದಾರೆ.

ರಾಮ್ ಚರಣ್ ಗೆ ನಾಯಕಿಯಾಗಿ ಅಲಿಯಾ ಅಭಿನಯ

ರಾಮ್ ಚರಣ್ ಗೆ ನಾಯಕಿಯಾಗಿ ಅಲಿಯಾ ಅಭಿನಯ

ನಟಿ ಅಲಿಯಾ ಭಟ್ ರಾಮ್ ಚರಣ್ ಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮ್ ಚರಣ್ ಚಿತ್ರದಲ್ಲಿ ಅಲ್ಲುರಿ ಸೀತಾರಾಮ ರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀತಾರಾಮ ರಾಜು ಪ್ರೇಯಸಿ ಸೀತಾ ಪಾತ್ರಕ್ಕೆ ಅಲಿಯಾ ಬಣ್ಣ ಹಚ್ಚಲಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ.

ಸಿನಿಮಾಗಾಗಿ ವಿಶೇಷ ತಯಾರಿ ನಡೆಸಿರುವ ಅಲಿಯಾ

ಸಿನಿಮಾಗಾಗಿ ವಿಶೇಷ ತಯಾರಿ ನಡೆಸಿರುವ ಅಲಿಯಾ

ಈ ಸಿನಿಮಾಗಾಗಿ ಅಲಿಯಾ ವಿಶೇಷ ತಯಾರಿ ನಡೆಸಿದ್ದಾರೆ. ತೆಲುಗು ಕಲಿತಿರುವ ಅಲಿಯಾ, ತೆಲುಗು ಆವೃತ್ತಿಗೆ ಅವರೇ ಡಬ್ ಮಾಲಿದ್ದಾರೆೆ ಎನ್ನಲಾಗುತ್ತಿದೆ. ಇನ್ನು ಚಿತ್ರಕ್ಕಾಗಿ ಅಲಿಯಾ ತೂಕ ಹೆಚ್ಚಿಸಿಕೊಂಡಿದ್ದಾರೆ. ಅಲಿಯಾ ಭಟ್ ನಾಯಕಿ ಎಂದು ಸಿನಿಮಾತಂಡ ಘೋಷಣೆ ಮಾಡಿದಾಗಿನಿಂದಲೂ ಅಲಿಯಾ ಎಂಟ್ರಿ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿತ್ತು.

Recommended Video

ಹೊಸ ಜನ್ಮ ಸಿಕ್ಕಷ್ಟೇ ಖುಷಿ ಆಗುತ್ತೆ ನಂಗೆ | Filmibeat Kannada
ಸಿನಿಮಾದಿಂದ ಅಲಿಯಾ ಔಟ್ ಎನ್ನುವ ಸುದ್ದಿ ವೈರಲ್ ಆಗಿತ್ತು

ಸಿನಿಮಾದಿಂದ ಅಲಿಯಾ ಔಟ್ ಎನ್ನುವ ಸುದ್ದಿ ವೈರಲ್ ಆಗಿತ್ತು

ಅಲಿಯಾ ಭಟ್ ಸಿನಿಮಾದಿಂದ ಔಟ್ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಇದ್ಯಾವುದರ ಬಗ್ಗೆಯೂ ಅಲಿಯಾ ಆಗಲಿ ಅಥವಾ ಸಿನಿಮಾತಂಡವಾಗಲಿ ತಲೆಕೆಡಿಸಿಕೊಂಡಿರಲಿಲ್ಲ. ಇತ್ತೀಚಿಗಷ್ಟೆ ಸಿನಿಮಾದಿಂದ ಜೂ.ಎನ್ ಟಿ ಆರ್ ಪಾತ್ರದ ಟೀಸರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿ ಜೂ.ಎನ್ ಟಿ ಆರ್ ನಿಜಾಂ ಆಳ್ವಿಕೆಯ ವಿರುದ್ಧ ಹೋರಾಡಿದ ಕೋಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ತೆಲುಗು ಸೇರಿದಂತೆ ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ.

More from Filmibeat

English summary
Bollywood Actress Alia Bhatt finally joins RRR team for shooting in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X