»   » ಅನುಷ್ಕಾ-ವಿರಾಟ್ ಮದುವೆ ಸುದ್ದಿಗೆ ಸಿಕ್ತು ತಾಜಾ ಸಾಕ್ಷಿ

ಅನುಷ್ಕಾ-ವಿರಾಟ್ ಮದುವೆ ಸುದ್ದಿಗೆ ಸಿಕ್ತು ತಾಜಾ ಸಾಕ್ಷಿ

Posted By:
Subscribe to Filmibeat Kannada
ಅನುಷ್ಕಾ-ವಿರಾಟ್ ಮದುವೆ ಸುದ್ದಿಗೆ ಸಿಕ್ತು ತಾಜಾ ಸಾಕ್ಷಿ | Filmibeat Kannada

ಬಾಲಿವುಡ್ ಹಾಗೂ ಭಾರತೀಯ ಕ್ರಿಕೆಟ್ ಅಂಗಳದಲ್ಲಿ ಒಂದೇ ಸುದ್ದಿ. ಈ ವಾರಾಂತ್ಯಕ್ಕೆ ನಟಿ ಅನುಷ್ಕಾ ಶರ್ಮಾ ಜೊತೆ ಕ್ರಿಕೆಟಿಗ ವಿರಾಟ್ ಕೊಹ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಅಂತ. ಈ ಸುದ್ದಿ ಎಲ್ಲಿಯೂ ಅಧಿಕೃತವಾಗಿ ಹೊರಬಿದ್ದಿಲ್ಲ. ಆದ್ರೆ, ಇದಕ್ಕೆ ಪುಷ್ಠಿ ಕೊಡುವಂತೆ ಬೆಳವಣಿಗೆಗಳು ಮಾತ್ರ ಸದ್ದಿಲ್ಲದೇ ನಡೆಯುತ್ತಿದೆ.

ಹೌದು, ಡಿಸೆಂಬರ್ 9 ರಿಂದ 12ರೊಳಗೆ ಇವರಿಬ್ಬರು ಸಪ್ತಪದಿ ತುಳಿಯಲಿದ್ದು, ಅದಕ್ಕಾಗಿ ಇಟಲಿಯಲ್ಲಿ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎನ್ನಲಾಗಿದೆ. ಅದಾದ ಬಳಿಕ ಮುಂಬೈನಲ್ಲಿ ಆರತಕ್ಷತೆ ಆಯೋಜಿಸುವ ಯೋಜನೆ ಹಾಕಿಕೊಂಡಿದ್ದಾರಂತೆ.

Actress Anushka Sharma was spotted in Mumbai airport

ಇದೇ ವಾರ ಮದುವೆ ಆಗ್ತಾರಂತೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ!

ಹೀಗಿರುವಾಗ, ನಟಿ ಅನುಷ್ಕಾ ಶರ್ಮಾ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು, ಇಟಲಿಗೆ ಪ್ರಯಾಣ ಬೆಳಸಿದ್ದಾರೆ. ಅನುಷ್ಕಾ ಶರ್ಮಾ ಜೊತೆಯಲ್ಲಿ ತಂದೆ ಅಜಯ್ ಕುಮಾರ್, ತಾಯಿ ಆಶೀಮಾ, ಹಾಗೂ ಸಹೋದರ ಕರ್ನೇಶ್ ಕೂಡ ಇದ್ದರು.

Actress Anushka Sharma was spotted in Mumbai airport

ಈ ವೇಳೆ ಮಾಧ್ಯಮಗಳ ಕಣ್ಣಿಗೆ ಬಿದ್ದ ನಟಿ ಯಾವುದೇ ಪ್ರತಿಕ್ರಿಯೆ ನೀಡದೆ ಒಳಗೆ ಹೋಗಿದ್ದಾರೆ. ಮತ್ತೊಂದೆಡೆ ದೆಹಲಿಯಿಂದ ವಿರಾಟ್ ಕೂಡ ತಡರಾತ್ರಿ ಇಟಲಿಗೆ ಪ್ರಯಾಣ ಬೆಳಸಿದ್ದಾರೆ ಎನ್ನಲಾಗಿದೆ.

Actress Anushka Sharma was spotted in Mumbai airport

ಒಟ್ನಲ್ಲಿ, ಎರಡು ಕುಟುಂಬದವರು ಇಟಲಿಗೆ ಹೋಗಿದ್ದು, ಈ ವಾರಂತ್ಯಕ್ಕೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಮದುವೆಯ ನಂತರ ಭಾರತಕ್ಕೆ ವಾಪಸ್ ಆಗಿ ಮುಂಬೈನಲ್ಲಿ ರಿಸಪ್ಷನ್ ಮಾಡಿಕೊಳ್ಳಲಿದ್ದಾರೆ.

Actress Anushka Sharma was spotted in Mumbai airport
English summary
Actress Anushka Sharma was spotted leaving Mumbai in the wee hours of Thursday night with her family.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada