For Quick Alerts
  ALLOW NOTIFICATIONS  
  For Daily Alerts

  ಐ ಆಮ್‌ ಎ ಕೋಂಪ್ಲಾನ್‌ ಗರ್ಲ್‌ ಗೆ ಗಂಡು ಮಗು!

  By ರವಿಕಿಶೋರ್
  |

  ಸರಿಸುಮಾರು ಹದಿನೆಂಟು ವರ್ಷಗಳ ಹಿಂದೆ ಐ ಆಮ್ ಎ ಕೋಂಪ್ಲಾನ್ ಗರ್ಲ್ ಎನ್ನುತ್ತಿದ್ದ ಪುಟ್ಟ ಹುಡುಗಿ ಈಗ ಅಮ್ಮನಾಗಿದ್ದಾರೆ. 'ಟಾರ್ಜಾನ್ ಎ ವಂಡರ್ ಕಾರ್' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಪಡೆದ ಈ ಬೆಡಗಿ ಬಳಿಕ ತೆಲುಗಿನ ನಾಗಾರ್ಜುನ ಜೊತೆ 'ಸೂಪರ್' ಚಿತ್ರದಲ್ಲಿ ಅಭಿನಯಿಸಿದ್ದರು.

  ಈಕೆ ಬೇರಾರು ಅಲ್ಲ ಸಲ್ಮಾನ್ ಖಾನ್ ಜೊತೆಗೆ 'ವಾಂಟೆಡ್' ಚಿತ್ರದಲ್ಲಿ ಅಭಿನಯಿಸಿದ್ದ ತಾರೆ ಆಯೇಷಾ ಟಕಿಯಾ. 2009ರಲ್ಲಿ ಫರ್ಹಾನ್ ಅಜ್ಮಿಯವರನ್ನು ವರಿಸಿದ ಬಳಿಕ ಬೆಳ್ಳಿತೆರೆಯಿಂದ ಸ್ವಲ್ಪ ದೂರ ಸರಿದಿದ್ದರು. ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದಂಪತಿಗಳು ಈ ಸಂಭ್ರಮವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. [ಶಕೀರಾಗೆ ಗಂಡುಮಗು]

  ಆಯೇಷಾ ಪತಿ ಫರ್ಹಾನ್ ಅಜ್ಮಿ ಟ್ವೀಟಿಸಿ, "ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್...ಗಂಡುಮಗುವಾಗಿದೆ" ಎಂದಿದ್ದಾರೆ. ಈ ಹಿಂದೆ ಸಾಕಷ್ಟು ಸಲ ಆಯೇಷಾ ಗರ್ಭಿಣಿ ಎಂಬ ಸುದ್ದಿ ಬರುತ್ತಿತ್ತು. ಆಗೆಲ್ಲಾ ಆಯೇಷಾ ಆ ರೀತಿಯ ಸುದ್ದಿಗಳನ್ನು ತಳ್ಳಿಹಾಕುತ್ತಿದ್ದರು.

  ಈ ಬಾರಿ ಮಾತ್ರ ತಾನು ಗರ್ಭಿಣಿಯಾಗಿದ್ದ ವಿಷಯನ್ನು ಬಹಳ ಗೌಪ್ಯತೆಯಿಂದ ಕಾಪಾಡಿಕೊಂಡು ಬಂದಿದ್ದರು. ಅವರ ಮನೆಯವರೂ ಎಲ್ಲೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಹೆರಿಗೆ ಬಳಿಕ ಹೇಗೂ ವಿಷಯ ತಿಳಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದರು. ಅದರಂತೆ ನಡೆದುಕೊಂಡಿದ್ದಾರೆ.

  ಈ ಹಿಂದೊಮ್ಮೆ ಆಯೇಷಾ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿದ್ದಾರೆ ಎಂಬ ಸುದ್ದಿ ಇತ್ತು. ಕಾಜೋಲ್, ಐಶ್ವರ್ಯ ರೈ ಸಹ ಮದುವೆಯಾದ ಬಳಿಕವೂ ನಟಿಸುತ್ತಿಲ್ಲವೆ? ಅವರಿಗಿಂತಲೂ ನಾನೇನು ದೊಡ್ಡವಳಲ್ಲ. ಉತ್ತಮ ಅವಕಾಶಗಳು ಬಂದರೆ ಒಪ್ಪಿಕೊಳ್ಳಲು ಹಿಂದೆ ಮುಂದೆ ಆಲೋಚಿಸುವುದಿಲ್ಲ ಎಂದಿದ್ದರು ಆಯೇಷಾ ಟಕಿಯಾ.

  English summary
  Bollywood's sensational actress Ayesha Takia gave birth to a baby boy last week. This is Ayesha's first child with her husband Farhan Azmi. The couple took to the Twitter to announce the good news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X