»   » ಎರಡನೇ ಸಲ ಅವಳಿ ಮಕ್ಕಳಿಗೆ ತಾಯಿ ಆಗುತ್ತಿರುವ ಬಾಲಿವುಡ್ ನಟಿ

ಎರಡನೇ ಸಲ ಅವಳಿ ಮಕ್ಕಳಿಗೆ ತಾಯಿ ಆಗುತ್ತಿರುವ ಬಾಲಿವುಡ್ ನಟಿ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ 'ಶ್ರೀಮತಿ' ಚಿತ್ರದಲ್ಲಿ ನಟಿಸಿದ್ದ ಸೆಲಿನಾ ಜೇಟ್ಲಿಗೆ ಮತ್ತೊಮ್ಮೆ ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರೆ. 'ನೋ ಎಂಟ್ರಿ'ಯಂತ ಚಿತ್ರದಲ್ಲಿ ಸಾವಿರಾರು ಅಭಿಮಾನಿಗಳ ಮನಗೆದ್ದಿದ್ದ ನಟಿ ಈ ಹಿಂದೆ ಕೂಡ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು.

35 ವರ್ಷದ ಸೆಲಿನಾಗೆ ಈಗಾಗಲೇ 5 ವರ್ಷದ ವಿಂಟ್ಸನ್ ಹಾಗೂ ವಿರಾಜ್ ಎನ್ನುವ ಅವಳಿ ಗಂಡು ಮಕ್ಕಳಿದ್ದಾರೆ. ಸೆಲಿನಾ ಈಗ ಮೂರು ತಿಂಗಳ ಗರ್ಭಿಣಿ. ಮತ್ತೊಮ್ಮೆ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದೇನೆ ಎನ್ನುವ ವಿಷ್ಯ ಕೇಳಿ ಶಾಕ್‌ ಆದ ಸೆಲಿನಾ, ದೇವರು ಅವಳಿ ಮಕ್ಕಳ ಹೆತ್ತವರಾಗಲು ವಿಶೇಷವಾದ ವ್ಯಕ್ತಿಗಳನ್ನೇ ಆಯ್ಕೆ ಮಾಡುತ್ತಾರೆ ಎನ್ನುವ ನಂಬಿಕೆ ನಮ್ಮದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.[ಸನ್ನಿ ಲಿಯೋನ್‌ಗೆ ಯಾಕೆ ಸ್ಟಾರ್ ನಟರ ಪತ್ನಿಯರ ಮೇಲೆ ಕೆಂಡದಷ್ಟು ಕೋಪ?]

Actress Celina Jaitly Pregnant with Twins Again

ಸೆಲಿನಾ ಹಾಗೂ ಆಕೆಯ ಪತಿ ಪೀಟರ್ ಗೆ ಮಕ್ಕಳೆಂದರೆ ಪ್ರೀತಿ. ಇಬ್ಬರಿಗೂ ಮಕ್ಕಳ ಜವಾಬ್ದಾರಿ ಬಗ್ಗೆ ಅರಿವಿದೆ. ಹೆತ್ತವರಾಗಿ ನಮ್ಮ ಜವಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದೇವೆ. ತಾಯ್ತನದಿಂದಾಗಿ ತನ್ನನ್ನು ತಾನು ಸಾಕಷ್ಟು ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದು ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡಿದ್ದಾರೆ.[ರೆಡ್ ಕಾರ್ಪೆಟ್ ಮೇಲೆ ಮಾಜಿ ವಿಶ್ವ ಸುಂದರಿ ಐಶೂ ಬೆಡಗು ಬಿನ್ನಾಣ..]

ಸದ್ಯ, ದುಬೈನಲ್ಲಿರುವ ಸೆಲಿನಾ ಜಾಹೀರಾತೊಂದರ ಪ್ರಸಾರಕ್ಕಾಗಿ ಆದಷ್ಟೂ ಬೇಗ ಭಾರತಕ್ಕೆ ವಾಪಸ್ ಬರಲಿದ್ದಾರೆ. ಇದರ ಜೊತೆಗೆ ಪುಸ್ತಕವೊಂದಕ್ಕೆ ಕೆಲಸ ಮಾಡ್ತಿದ್ದು, ಇದು ಮುಂದಿನ ವರ್ಷ ಬಿಡುಗಡೆಯಾಗಲಿದೆ.

English summary
‘No Entry’ Actress Celina Jaitley is expecting twins again. The actress and her husband Peter Haag are already the proud parents of five-year-old twin sons, Winston and Viraaj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada