For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ದಂಧೆ: ದೀಪಿಕಾ ಪಡುಕೋಣೆಗೆ NCB ನೋಟಿಸ್ ನೀಡುವ ಸಾಧ್ಯತೆ

  |

  ಮಾದಕ ವಸ್ತು ಜಾಲದ ಬೆನ್ನತ್ತಿರುವ ಎನ್ ಸಿ ಬಿ (ಮಾದಕ ವಸ್ತು ನಿಯಂತ್ರಣ ಇಲಾಖೆ) ಈಗಾಗಲೇ ಸಾಕಷ್ಟು ನಟ-ನಟಿಯರ ಹೆಸರುಗಳನ್ನು ಪಟ್ಟಿ ಮಾಡಿದ್ದು, ಸದ್ಯದಲ್ಲೇ ನೋಟಿಸ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನಲ್ಲಿ ನಶೆಯ ಸದ್ದು ಜೋರಾಗಿ ಸದ್ದು ಮಾಡುತ್ತಿದ್ದು ಈಗಾಗಲೇ ಸಾಕಷ್ಟು ಮಂದಿಯ ವಿಚಾರಣೆ ಕೂಡ ನಡೆಯುತ್ತಿದೆ.

  ಇದೀಗ ಬಾಲಿವುಡ್ ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆಗೂ ಮಾದಕ ವಸ್ತು ಜಾಲದ ಉರುಳು ಸುತ್ತಿಕೊಳ್ಳುತಾ ಎನ್ನುವ ಕುತೂಹಲ ಮೂಡಿಸಿದೆ. ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ಎನ್ ಸಿ ಬಿ, ದೀಪಿಕಾಗೆ ನೋಟಿಸ್ ನೀಡಲಿದೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

  ದೀಪಿಕಾ ಪಡುಕೋಣೆಯನ್ನು ನೋಡಿ ಕಲಿ: ಕಂಗನಾ ಗೆ ರಮ್ಯಾ ಸಲಹೆದೀಪಿಕಾ ಪಡುಕೋಣೆಯನ್ನು ನೋಡಿ ಕಲಿ: ಕಂಗನಾ ಗೆ ರಮ್ಯಾ ಸಲಹೆ

  ವಾಟ್ಸಪ್ ಚಾಟ್ ನಲ್ಲಿ ಸಿಕ್ಕಿರುವ ಸುಳಿವಿನ ಆಧಾರದ ಮೇಲೆ ಎನ್ ಸಿ ಬಿ ನೋಟಿಸ್ ನೀಡಲು ಮುಂದಾಗಿದೆ. 2017ರಿಂದ ಕೆಲವು ವಾಟ್ಸಪ್ ಚಾಟ್ ಗಳನ್ನು ಕಲೆ ಹಾಕಿರುವ ಅಧಿಕಾರಿಗಳಿಗೆ, ದೀಪಿಕಾ ಟ್ಯಾಲೆಂಟ್ ಮ್ಯಾನೇಜ್ ಮೆಂಟ್ ಏಜೆನ್ಸಿ ಕ್ವಾನ್ ನ ಕರಿಷ್ಮಾ ಜೊತೆ ನಡೆಸಿರುವ ವಾಟ್ಸಪ್ ಚಾಟ್ ಆಧಾರದ ಮೇಲೆ ಎನ್ ಸಿ ಬಿ ದೀಪಿಕಾರನ್ನು ವಿಚಾರಣೆಗೆ ಕರೆಸಲು ಮುಂದಾಗಿದೆ ಎನ್ನಲಾಗುತ್ತಿದೆ.

  ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯಲ್ಲಿ ಡ್ರಗ್ಸ್ ಜಾಲದ ಸ್ಫೋಟಕ ಸತ್ಯ ಬಯಲಿಗೆ ಬಂದಿದ್ದು, ಈಗಾಗಲೇ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಸೇರಿದಂತೆ ಅನೇಕರನ್ನು ಬಂಧಿಸಿದೆ. ರಿಯಾ ಬಂಧನದ ಬಳಿಕ ಸಾಕಷ್ಟು ಸ್ಟಾರ್ ಕಲಾವಿದರ ಹೆಸರುಗಳು ಕೇಳಿ ಬರುತ್ತಿದೆ. ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಅನೇಕರಿಗೆ ನೋಟಿಸ್ ನೀಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

  ಗಾಂಜಾ ಕೇಳಿ ತಗಲಕೊಂಡ Deepika Padukone..!? | Filmibeat Kannada

  ದೀಪಿಕಾ ಸದ್ಯ ಕುಟುಂಬದ ಜೊತೆ ಗೋವಾದಲ್ಲಿ ಸಮಯ ಕಳೆಯುತ್ತಿದ್ದಾರೆ. ಶಕುನ್ ಬಾತ್ರಾ ನಿರ್ದೇಶನದ ಸಿನಿಮಾ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಅನನ್ಯಾ ಪಾಂಡೆ ಮತ್ತು ಸಿದ್ಧಾರ್ಥ್ ಚತುರ್ವೇದಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಶಾರುಖ್ ಖಾನ್ ಜೊತೆಯೂ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ದೀಪಿಕಾ ಎನ್ ಸಿ ಬಿ ವಿಚಾರಣೆ ಎದುರಿಸುವ ಸಾಧ್ಯತೆ ಇದೆ.

  English summary
  Actress Deepika Padukone name emerges in Drug chats. Deepika to be summoned by ncb for allegedly procuring drugs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X