For Quick Alerts
  ALLOW NOTIFICATIONS  
  For Daily Alerts

  "ಇನ್‌ಸ್ಟಾಗ್ರಾಂ ಫಾಲೋವರ್ಸ್ ಎಲ್ಲರೂ ನನ್ನ ಸಿನಿಮಾ ನೋಡಲ್ಲ": ಜಾನ್ವಿ ಕಪೂರ್

  |

  ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಫೋಟೊಗಳಿಂದ ನಟಿ ಜಾನ್ವಿ ಕಪೂರ್ ಸದ್ದು ಮಾಡುತ್ತಲೇ ಇರುತ್ತಾರೆ. ಆಗಿಂದಾಗ್ಗೆ ತಮಗೆ ಸಂಬಂಧಿಸಿದ ಅಪ್‌ಡೇಟ್ ನೀಡುತ್ತಿರುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ದೊಡ್ಡ ಫಾಲೋಯಿಂಗ್ ಕೂಡ ಇದೆ.

  ಅತಿಲೋಕ ಸುಂದರಿ ಮಗಳಿಗೆ ಬಾಲಿವುಡ್‌ನಲ್ಲಿ ದೊಡ್ಡ ಬ್ರೇಕ್ ಮಾತ್ರ ಸಿಗಲೇಯಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಾನ್ವಿ ಕಪೂರ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಮಾಡುವುದರ ಹಿಂದೆ ಏನಾದರೂ ಸ್ಟ್ರ್ಯಾಟಜಿ ಇದ್ಯಾ? ಎನ್ನುವ ಪ್ರಶ್ನೆಗೆ ಸ್ವಾರಸ್ಯಕರ ಉತ್ತರ ನೀಡಿದ್ದಾರೆ.

  Actress Janhvi Kapoor said her social media popularity is irrelevant to her career

  ಜಾನ್ವಿ ಕಪೂರ್ ಮಾತನಾಡುತ್ತಾ "ಒಬ್ಬ ನಟಿಯಾಗಿ ಸೋಶಿಯಲ್ ಮೀಡಿಯಾ ಪಾಪ್ಯೂಲಾರಿಟಿಗೂ ಸಿನಿಮಾಗಳಿಗೂ ಸಂಬಂಧವಿಲ್ಲ. ಒಂದು ವೇಳೆ ಅದರಿಂದ ಏನಾದರೂ ಉಪಯೋಗ ಆಗುವಂತೆ ಇದ್ದಿದ್ದರೆ, ಇನ್‌ಸ್ಟಾಗ್ರಾಮ್‌ನಲ್ಲಿ ನನ್ನನ್ನು 2 ಕೋಟಿ ಜನ ಫಾಲೋ ಮಾಡುತ್ತಿದ್ದಾರೆ. ಬರೀ ಅವರು 'ಮಿಲಿ' ಸಿನಿಮಾ ನೋಡಿದ್ದರೆ ಸಾಕಾಗಿತ್ತು. ಆ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತಿತ್ತು."

  "ಕಲಾವಿದರು ನಿಜವಾಗಿಯೂ ಸಮಾಜದ ಮೇಲೆ ಪ್ರಭಾವ ಬೀರುತ್ತಾರೆ. ಸ್ಟಾರ್ ನಟರ ಸ್ಟಾರ್‌ಡಮ್‌ನಿಂದ ಅದು ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ಇನ್‌ಸ್ಟಾಗ್ರಾಮ್ ಫಾಲೋಯಿಂಗ್ ಸ್ಟಾರ್‌ಡಮ್‌ಗೆ ಸಂಕೇತ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ನನಗೆ ಒಳ್ಳೆ ಇಮೇಜ್ ಇದ್ದರೆ ಅದು ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಮಾತ್ರ ಸಹಾಯಕವಾಗುತ್ತದೆ. ಆದರೆ ನನ್ನಂತ ನಟಿಗೆ ಅದು ಸಾಧ್ಯವಿಲ್ಲ. ಇನ್ನು ಮುಂದೆ ನನ್ನ ಕೆಲಸಗಳನ್ನು ಎಂದಿನಂತೆ ಮಾಡಿಕೊಂಡು ಹೋಗುತ್ತೇನೆ. ಸೋಶಿಯಲ್ ಮೀಡಿಯಾ ಬ್ರ್ಯಾಂಡಿಂಗ್, ಲೈಕ್ಸ್‌ಗೆ ಮಾತ್ರ" ಎಂದಿದ್ದಾರೆ.

  ಬಿಕಿನಿಯಲ್ಲಿ ಜಾನ್ವಿ ಕಪೂರ್ ವಾರೆನೋಟ: EMIಗಾಗಿ ಇಷ್ಟೆಲ್ಲಾ ಬಿಕಿನಿಯಲ್ಲಿ ಜಾನ್ವಿ ಕಪೂರ್ ವಾರೆನೋಟ: EMIಗಾಗಿ ಇಷ್ಟೆಲ್ಲಾ "ಪರದಾಟ"?

  'ಮಿಲಿ' ಸಿನಿಮಾ ನಂತರ 'ಬಾವಲ್' ಹಾಗೂ 'ಮಿ. & ಮಿ ಮಾಹಿ' ಸಿನಿಮಾಗಳಲ್ಲಿ ಜಾನ್ವಿ ಕಪೂರ್ ನಟಿಸ್ತಿದ್ದಾರೆ. ಇತ್ತೀಚೆಗೆ ಮಾಲ್ಡೀವ್ಸ್‌ಗೆ ರಜೆ ಕಳೆಯಲು ಹೋಗಿದ್ದರು. ಬಿಕಿನಿಯಲ್ಲಿ ಕಡಲ ತಡಿಯಲ್ಲಿ ಕಾಣಿಸಿಕೊಂಡು ಫೋಟೊಗಳನ್ನು ಶೇರ್ ಮಾಡಿದ್ದರು. ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  English summary
  Actress Janhvi Kapoor said her social media popularity is irrelevant to her career. She also brief that her social media doesn’t fuel her creativity, and that the two need to be separated. know more.
  Tuesday, December 20, 2022, 21:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X