For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ನಲ್ಲಿ ಪುರುಷರೇ ಪ್ರಾಬಲ್ಯ ಸಾಧಿಸುತ್ತಿದ್ದರು: 90ರ ದಶಕ ನೆನೆದ ಜೂಹಿ ಚಾವ್ಲಾ

  |

  90ರ ದಶಕದಲ್ಲಿ ಬಹುಬೇಡಿಕೆಯ ನಟಿಯರಾಗಿದ್ದ ಅನೇಕರು ಈಗ ಬೆಳ್ಳಿ ತೆರೆಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಕಿರುತರೆ ಹಾಗೂ ಓಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಈ ಪೈಕಿ ಬಾಲಿವುಡ್‌ ನಟಿ ಜೂಹಿ ಚಾವ್ಲಾ ಕೂಡ ಒಬ್ಬರು. ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದ ಜೂಹಿ ಚಾವ್ಲಾ ನಟಿಸಿರುವ ಬಹುತೇಕ ಚಿತ್ರಗಳು ಸೂಪರ್‌ ಹಿಟ್‌ ಆಗಿದ್ದವು.

  1986ರಲ್ಲಿ ತೆರೆಕಂಡ ಸಲ್ತನತ್‌ ಸಿನಿಮಾ ಮೂಲಕ ಚಿತ್ರರಂಕ್ಕೆ ಪದಾರ್ಪಣೆ ಮಾಡಿದ ನಟಿ ಜೂಹಿ ಚಾವ್ಲಾ, 90ರ ದಶಕದ ಯಶಸ್ವಿ ನಟಿಯಾಗಿ ಗುರುತಿಸಿಕೊಂಡರು. ಜೂಹಿ ಚಾವ್ಲಾ ಸ್ಯಾಂಡಲ್‌ವುಡ್‌ನಲ್ಲೂ ಮಿಂಚಿದ್ದು, ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅಭಿನಯದ ಪ್ರೇಮ ಲೋಕ ಚಿತ್ರದಲ್ಲಿ ನಟಿಸಿದ್ದರು. ಕೇವಲ ಬಾಲಿವುಡ್‌ ಅಷ್ಟೇ ಅಲ್ಲದೇ ಸ್ಯಾಂಡಲ್‌ವುಡ್‌ ಹಾಗೂ ಇತರ ಚಿತ್ರರಂಗಗಳಲ್ಲೂ ಜೂಹಿ ಚಾವ್ಲಾ ಅವರ ಕೋಟ್ಯಂತರ ಅಭಿಮಾನಿಗಳಿದ್ದಾರೆ.

  ಸಲ್ಮಾನ್ ಖಾನ್ ಕಾರನ್ನು ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಹಿಂಬಾಲಿಸಿದ್ದೇಕೆ? ಇಂಟ್ರೆಸ್ಟಿಂಗ್ ಸ್ಟೋರಿ!ಸಲ್ಮಾನ್ ಖಾನ್ ಕಾರನ್ನು ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಹಿಂಬಾಲಿಸಿದ್ದೇಕೆ? ಇಂಟ್ರೆಸ್ಟಿಂಗ್ ಸ್ಟೋರಿ!

  ಇಂದಿಗೂ ಬಿಗ್‌ ಬಜೆಟ್‌ ಚಿತ್ರದ ಪ್ರಮುಖ ಪಾತ್ರಗಳು ಜೂಹಿ ಚಾವ್ಲಾ ಅವರನ್ನು ಹರಸಿ ಬರುತ್ತಿದ್ದು, ನಟಿ ಕೆಲವು ಚಿತ್ರಗಳ ಉತ್ತಮ ಪಾತ್ರಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ತೆರೆಕಂಡ ಶರ್ಮಾಜಿ ನಾಮ್ಕೀನ್ ಚಿತ್ರದಲ್ಲಿ ನಟಿಸಿರುವ ಜೂಹಿ ಚಾವ್ಲಾ ಸದ್ಯ ಓಟಿಟಿಯತ್ತ ಮುಖ ಮಾಡಿದ್ದಾರೆ. ಅಮೇಜಾನ್‌ ಪ್ರೈಮ್‌ನಲ್ಲಿ ಪ್ರಸಾರಗೊಳ್ಳುತ್ತಿರುವ ಹಶ್‌ ಹಶ್‌ ವೆಬ್ ಸೀರಿಸ್‌ನಲ್ಲಿ ಜೂಹಿ ಚಾವ್ಲಾ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ.

  ಹಶ್‌ ಹಶ್‌ ವೆಬ್ ಸೀರಿಸ್‌ ಬಗ್ಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಜೂಹಿ ಚಾವ್ಲಾ ೯೦ರ ದಶಕದ ಬಾಲಿವುಡ್‌ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ. 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಪುರುಷರೇ ಮೇಲುಗೈ ಸಾಧಿಸುತ್ತಿದ್ದರು. ನಿರ್ದೇಶಕರು, ನಿರ್ಮಾಪಕರು ನಟರು ಸೇರಿದಂತೆ ಚಿತ್ರೀಕರಣದ ಸೆಟ್‌ನಲ್ಲಿ ಪುರುಷರೇ ತುಂಬಿರುತ್ತಿದ್ದರು. ಒಂದಿಬ್ಬರು ನಟಿಯರು ಹಾಗೂ ನಟಿಯ ತಾಯಿ ಹಾಗೂ ಆಕೆಯ ವಿನ್ಯಾಸಕಿ ಬಿಟ್ಟರೆ ಬೇರೆ ಯಾರೂ ಸೆಟ್‌ನಲ್ಲಿ ಇರುತ್ತಿರಲಿಲ್ಲ. ಪುರುಷರೇ ಬಾಲಿವುಡ್‌ ಅನ್ನು ನಿಯಂತ್ರಿಸುತ್ತಿದ್ದರು ಎಂದು 90ರ ದಶಕದಲ್ಲಿ ಬಾಲಿವುಡ್‌ ಸ್ಥಿತಿಗತಿಯ ಬಗ್ಗೆ ನಟಿ ಮಾತನಾಡಿದ್ದಾರೆ.

  ಬಳಿಕ ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ಮಾತನಾಡಿದ ನಟಿ ಜೂಹಿ ಚಾವ್ಲಾ ಈಗ ಕಾಲ ಬದಲಾಗಿದೆ. ಚಿತ್ರೀಕರಣದ ಸೆಟ್‌ನಲ್ಲಿ ಶೇಕಡಾ ೫೦ಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಾರೆ. ನನಗೆ ಹಶ್‌ ಹಶ್‌ ವೆಬ್ ಸೀರಿಸ್‌ನಲ್ಲಿ ಕೆಲಸ ಮಾಡಲು ಸಂತೋಷವಿದೆ. ಈ ವೆಬ್‌ ಸೀರಿಸ್‌ ನನಗೆ ಒಂದು ಉತ್ತಮ ಅನುಭವ ನೀಡುತ್ತಿದೆ. ಏಕೆಂದರೆ ಹಶ್‌ ಹಶ್‌ ನಿರ್ದೇಶಕಿ ತನುಜಾ ಚಂದ್ರ ಅವರೊಂದಿಗೆ ನಾನು ಪಾತ್ರದ ಬಗ್ಗೆ ಹಾಗೂ ಈ ಯೋಜನೆಯ ಬಗ್ಗೆ ಮುಕ್ತವಾಗಿ ಮಾತನಾಡುವ ಅವಕಾಶ ಇದೆ. ಆಕೆಯೊಂದಿಗೆ ಕೆಲಸ ಮಾಡುವುದಕ್ಕೆ ನನಗೆ ಖುಷಿ ಇದೆ. ಅದೇ ಜಾಗದಲ್ಲಿ ನಿರ್ದೇಶಕನಿದ್ದರೆ ಚರ್ಚೆ ನಡೆಸಲು ಸಾಧ್ಯವಿತ್ತೇ ಎಂಬುದು ನನಗೆ ತಿಳಿದಿಲ್ಲ ಎಂದರು.

  ಇನ್ನು ಹಶ್‌ ಹಶ್‌ ವೆಬ್ ಸೀರಿಸ್‌ ಒಂದು ಮಹಿಳಾ ಪ್ರಧಾನ ಕತೆಯಾಗಿದೆ. ಐವರು ಮಹಿಳೆಯ ಬದುಕಿನ ಏರಿಳಿತಗಳನ್ನು ಈ ವೆಬ್‌ ಸೀರಿಸ್‌ನಲ್ಲಿ ಪ್ರಸ್ತುತ ಪಡಿಸಲಾಗುತ್ತಿದ್ದು, ಜೂಹಿ ಚಾವ್ಲಾ ಅವರ ಜೊತೆ ಸೋಹಾ ಅಲಿ ಖಾನ್, ಆಯೇಶಾ ಜುಲ್ಕಾ, ಶಹನಾ ಗೋಸ್ವಾಮಿ , ಕೃತಿಕಾ ಕಮ್ರಾ , ಮತ್ತು ಕರಿಷ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹಿಳೆಯರ ಬದುಕಿನಲ್ಲಿ ಎದುರಾದ ಅನಿರೀಕ್ಷಿತ ತಿರುವುಗಳ ಕಥನ ಹೊಂದಿರುವ ಹಶ್‌ ಹಶ್‌ ವೆಬ್ ಸೀರಿಸ್‌ ಸಪ್ಟೆಂಬರ್‌ 23ರಿಂದ ಓಟಿಟಿಯಲ್ಲಿ ಪ್ರಸಾರಗೊಳ್ಳುತ್ತಿದ್ದು ಉತ್ತಮ ವೀಕ್ಷಣೆ ಪಡೆಯುತ್ತಿದೆ. ಅಲ್ಲದೇ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ.

  English summary
  Bollywood actress Juhi Chawla recalls sets being dominated by men in the 90s.
  Wednesday, September 28, 2022, 10:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X