For Quick Alerts
  ALLOW NOTIFICATIONS  
  For Daily Alerts

  ಅಪರೂಪಕ್ಕೆ ಸಹನಟಿಯ ಹೊಗಳಿದ ಕಂಗನಾ, ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು

  |

  ಬಾಲಿವುಡ್ ನಟಿ ಕಂಗನಾ ರಣೌತ್ ಕೆಲವು ತಿಂಗಳಿನಿಂದ ಸತತ ಸುದ್ದಿಯಲ್ಲಿದ್ದಾರೆ. ಸುದ್ದಿಯಲ್ಲಿರುವುದು ಅವರಿಗೆ ಇಷ್ಟವಿದ್ದಂತೆ ಕಾಣುತ್ತದೆ. ಅವರ ವಿವಾದಾತ್ಮಕ ಹೇಳಿಕೆಗಳನ್ನು ಕೇಳಿದರೆ ಈ ಅನುಮಾನ ಬಾರದೇ ಇರದು.

  ಕೆಲವು ದಿನಗಳ ಹಿಂದಷ್ಟೆ ಬಾಲಿವುಡ್ ನ ತನ್ನದೇ ಸಹನಟ ನಟಿಯರ ವಿರುದ್ಧ ಪುಂಖಾನುಪುಂಖವಾಗಿ ಮಾತನಾಡಿದ್ದರು ನಟಿ ಕಂಗನಾ. ದೀಪಿಕಾ ಪಡುಕೋಣೆ, ಅಮೀರ್ ಖಾನ್, ಕರಣ್ ಜೋಹರ್, ಸಲ್ಮಾನ್ ಖಾನ್, ರಣ್ವೀರ್ ಸಿಂಗ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಮಹೇಶ್ ಭಟ್ ಇನ್ನೂ ಹಲವು ನಟ-ನಟಿಯರ ವಿರುದ್ಧ ಮಾತಿನ ಛಾಟಿ ಬೀಸಿದ್ದರು ಕಂಗನಾ.

  ಕಂಗನಾ ಮನೆ ಕೆಡವಲು ಮುಂಬೈ ಪಾಲಿಕೆ ಇಷ್ಟೊಂದು ಹಣ ಖರ್ಚು ಮಾಡಿದೆಯಾ?ಕಂಗನಾ ಮನೆ ಕೆಡವಲು ಮುಂಬೈ ಪಾಲಿಕೆ ಇಷ್ಟೊಂದು ಹಣ ಖರ್ಚು ಮಾಡಿದೆಯಾ?

  ಸದಾ ದೂರುಗಳನ್ನೇ ಹೇಳುವ ನಟಿ ಕಂಗನಾ ರಣೌತ್, ಅಪರೂಪಕ್ಕೆ ತಮ್ಮದೇ ಉದ್ಯಮದ ಸಹನಟಿಯೊಬ್ಬರನ್ನು ಹೊಗಳಿದ್ದಾರೆ. ಕಂಗನಾ ಅವರು ಸಹನಟಿಯನ್ನು ಹೊಗಳಿದ್ದಕ್ಕೆ ನೆಟ್ಟಿಗರು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  ಪ್ರಿಯಾಂಕಾ ಚೋಪ್ರಾ ಅನ್ನು ಹೊಗಳಿದ ಕಂಗನಾ

  ಪ್ರಿಯಾಂಕಾ ಚೋಪ್ರಾ ಅನ್ನು ಹೊಗಳಿದ ಕಂಗನಾ

  ಹೌದು, ಕಂಗನಾ ರಣೌತ್, ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಹೊಗಳಿದ್ದಾರೆ. ಕಂಗನಾ ತನ್ನ ಸಿನಿಜೀವನದ ಆರಂಭ ದಿನದಲ್ಲಿದ್ದಾಗ ಪ್ರಿಯಾಂಕಾ ಚೋಪ್ರಾ ಜೊತೆಗೆ ಫ್ಯಾಷನ್ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ನೆನಪುಗಳನ್ನು ಮೆಲುಕು ಹಾಕಿ, ಪ್ರಿಯಾಂಕಾ ಚೋಪ್ರಾರನ್ನು ಹೊಗಳಿದ್ದಾರೆ ಕಂಗನಾ.

  ನನ್ನನ್ನು ಹೊಸಬಳಂತೆ ಕಾಣುತ್ತಿರಲಿಲ್ಲ ಪ್ರಿಯಾಂಕಾ: ಕಂಗನಾ

  ನನ್ನನ್ನು ಹೊಸಬಳಂತೆ ಕಾಣುತ್ತಿರಲಿಲ್ಲ ಪ್ರಿಯಾಂಕಾ: ಕಂಗನಾ

  ಫ್ಯಾಷನ್ ಸಿನಿಮಾದ ಸೆಟ್‌ನಲ್ಲಿ ಪ್ರಿಯಾಂಕಾ ಒಮ್ಮೆಯೂ ಸಹ ನನ್ನನ್ನು ಹೊಸಬರಂತೆ ಅಥವಾ ಜೂನಿಯರ್ ನಟಿ ಎಂಬಂತೆ ಕಾಣಲಿಲ್ಲ. ಆಕೆ ಸದಾ ನನ್ನನ್ನು ಗೆಳತಿಯಂತೆಯೇ ನೋಡಿದ್ದರು, ನನ್ನೊಂದಿಗೆ ಆಹಾರ ಹಂಚಿಕೊಂಡು ತಿನ್ನುತ್ತಿದ್ದರು, ನನ್ನ ಸಲಹೆಗಳನ್ನು ಸಹ ಕೇಳಿ ಪಡೆಯುತ್ತಿದ್ದರು ಎಂದಿದ್ದಾರೆ ನಟಿ ಕಂಗನಾ.

  ಪ್ಲಾಸ್ಟಿಕ್, ಪಿಪಿಇ ಕಿಟ್ ಎಸೆದು ಪರಿಸರ ಹಾಳುಮಾಡಿದ ಕರಣ್ ಧರ್ಮ ಸಂಸ್ಥೆ: ಕಂಗನಾ ಕಿಡಿಪ್ಲಾಸ್ಟಿಕ್, ಪಿಪಿಇ ಕಿಟ್ ಎಸೆದು ಪರಿಸರ ಹಾಳುಮಾಡಿದ ಕರಣ್ ಧರ್ಮ ಸಂಸ್ಥೆ: ಕಂಗನಾ ಕಿಡಿ

  ಪ್ರಿಯಾಂಕಾ ಚೋಪ್ರಾಳ ಸಿನಿಮಾ ನೋಡಿ ಬೆಳೆದಿದ್ದೆ: ಕಂಗನಾ

  ಪ್ರಿಯಾಂಕಾ ಚೋಪ್ರಾಳ ಸಿನಿಮಾ ನೋಡಿ ಬೆಳೆದಿದ್ದೆ: ಕಂಗನಾ

  'ಫ್ಯಾಷನ್ ಸಿನಿಮಾ ಮಾಡುವ ಹೊತ್ತಿಗೆ ಪ್ರಿಯಾಂಕಾ ದೊಡ್ಡ ಸ್ಟಾರ್, ನಾನು ಆಕೆಯ ಸಿನಿಮಾಗಳನ್ನು ನೋಡಿ ಬೆಳೆದಿದ್ದೆ, ಸೆಟ್‌ನಲ್ಲಿ ಸಹ ಆಕೆಯನ್ನು ಅಚ್ಚರಿಯಿಂದ ನೋಡುತ್ತಿದ್ದೆ, ಆದರೆ ಆಕೆ ಎಲ್ಲರೊಂದಿಗೆ ಸರಳವಾಗಿ ಬೆರೆಯುತ್ತಿದ್ದರು, ಆಕೆ ಬಹಳ ಕೂಲ್' ಎಂದಿದ್ದಾರೆ ಕಂಗನಾ.

  ರಾಷ್ಟ್ರಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ: ಕಂಗನಾ

  ರಾಷ್ಟ್ರಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ: ಕಂಗನಾ

  ಫ್ಯಾಷನ್ ಸಿನಿಮಾಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಿಕ್ಕ ಬಗ್ಗೆ ಮಾತನಾಡಿದ ಕಂಗನಾ, ರಾಷ್ಟ್ರ ಪ್ರಶಸ್ತಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಅದಕ್ಕೂ ಮುನ್ನಾ ಗ್ಯಾಂಗ್‌ಸ್ಟರ್‌ ಹಾಗೂ ವೋ ಲಮ್ಹೆ ಸಿನಿಮಾಗಳಲ್ಲಿ ನಾನು ಒಳ್ಳೆಯ ನಟನೆ ನೀಡಿದ್ದೆ, ಆದರೆ ಅದಕ್ಕೆ ರಾಷ್ಟ್ರ ಪ್ರಶಸ್ತಿ ಸಿಗದೆ ಫ್ಯಾಷನ್‌ಗೆ ಸಿಕ್ಕಾಗ ನನಗೆ ಆಶ್ಚರ್ಯವಾಗಿತ್ತು ಎಂದಿದ್ದಾರೆ ಕಂಗನಾ.

  ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಏಕವಚನದ ವಾಗ್ದಾಳಿಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಏಕವಚನದ ವಾಗ್ದಾಳಿ

  ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna
  ಪ್ರಿಯಾಂಕಾ-ಕಂಗನಾ ಗೆ ರಾಷ್ಟ್ರಪ್ರಶಸ್ತಿ

  ಪ್ರಿಯಾಂಕಾ-ಕಂಗನಾ ಗೆ ರಾಷ್ಟ್ರಪ್ರಶಸ್ತಿ

  ಫ್ಯಾಷನ್ ಸಿನಿಮಾ ಬಿಡುಗಡೆಯಾಗಿ ಅಕ್ಟೋಬರ್ 29 ಕ್ಕೆ ಹನ್ನೆರಡು ವರ್ಷವಾಯಿತು. ಆ ಸಿನಿಮಾಕ್ಕಾಗಿ ಪ್ರಿಯಾಂಕಾ ಚೋಪ್ರಾಗೆ ಅತ್ಯುತ್ತಮ ನಾಯಕ ನಟಿ ರಾಷ್ಟ್ರಪ್ರಶಸ್ತಿ ಹಾಗೂ ಕಂಗನಾ ಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರಕಿತ್ತು. ಫ್ಯಾಷನ್ ಸಿನಿಮಾ ಕಂಗನಾ ರ ಇಮೇಜ್ ಅನ್ನೇ ಬದಲಾಯಿಸಿತು.

  English summary
  Actress Kangana Ranaut praised Priyanka Chopra. Said she did not treat her like junior in the set of movie Fashion.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X