For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ಅನ್ನು ಮತ್ತೆ ಕೆಣಕಿದ ಕಂಗನಾ; 'ಇನ್ನೂ ಎಲ್ಲಿಯವರೆಗೆ ಅಳುತ್ತೀಯಾ ಹೃತಿಕ್?' ಎಂದು ಪ್ರಶ್ನಿಸಿದ ನಟಿ

  |

  ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ಇದೀಗ ಮತ್ತೊಂದು ಟ್ವೀಟ್ ಮಾಡಿ, ನಟ ಹೃತಿಕ್ ರೋಷನ್ ಅವರನ್ನು ಕೆಣಕಿದ್ದಾರೆ. ಕಂಗನಾ ಮತ್ತು ಹೃತಿಕ್ ನಡುವಿನ ಕಿತ್ತಾಟ ಕೋರ್ಟ್ ಮೆಟ್ಟಿಲೇರಿತ್ತು. ಹೃಿತಿಕ್ ವಿರುದ್ಧ ಕಂಗನಾ ಗಂಭೀರ ಆರೋಪಗಳನ್ನು ಮಾಡಿದ್ದರು.

  ಪ್ರೀತಿ ಪ್ರೇಮದ ಹೆಸರಿನಲ್ಲಿ ಹೃತಿಕ್ ಮೋಸ ಮಾಡಿದ್ದಾರೆ ಎಂದು ಕಂಗನಾ ಗುಡುಗಿದ್ದರು. ಇಬ್ಬರ ನಡುವೆ ಕಿತ್ತಾಟ, ಕೆಸರೆರಚಾಟ ಆಗಿ ಹಲವು ವರ್ಷಗಳೇ ಕಳೆದಿವೆ. ಇದೀಗ ಮತ್ತೆ ಹೃತಿಕ್ ರೋಷನ್ ಅವರನ್ನು ಕೆಣಕಿದ್ದಾರೆ ಕಂಗನಾ. ಈ ಬಗ್ಗೆ ಟ್ವೀಟ್ ಮಾಡಿ, ಬೇರೆ ಮಹಿಳೆ ಜೊತೆ ಡೇಟಿಂಗ್ ಮಾಡಲು ಆತ ಸಿದ್ಧನಿಲ್ಲ. ನಾನು ನನ್ನ ವೈಯಕ್ತಿಕ ಬದುಕಿನಲ್ಲಿ ಭರವಸೆ ಕಂಡುಕೊಳ್ಳುತ್ತಿರುವಾಗಲೇ ಅವನು ಅದೇ ಹಳೇ ಡ್ರಾಮ ಶುರು ಮಾಡಿದ್ದಾನೆ. ಮುಂದೆ ಓದಿ..

  ನಾನೀಗ ದೇಶದ ಅತ್ಯಂತ ದೊಡ್ಡ ಟಾರ್ಗೆಟ್; ನಟಿ ಕಂಗನಾ ರಣಾವತ್ನಾನೀಗ ದೇಶದ ಅತ್ಯಂತ ದೊಡ್ಡ ಟಾರ್ಗೆಟ್; ನಟಿ ಕಂಗನಾ ರಣಾವತ್

  2016ರಲ್ಲಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದ ಹೃತಿಕ್

  2016ರಲ್ಲಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದ ಹೃತಿಕ್

  ಈ ಹಿಂದೆ ಕಂಗನಾ ಅವರಿಂದ ನೂರಾರು ಇಮೇಲ್ ಬಂದಿದೆ ಎಂದು ಹೃತಿಕ್ ಆರೋಪಿಸಿದ್ದರು. ಈ ಕುರಿತು 2016ರಲ್ಲಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಅದೇ ಪ್ರಕರಣ ಈಗ ಮುಂಬೈ ಸೈಬರ್ ಕ್ರೈಮ್ ವಿಭಾಗದಿಂದ ಕ್ರೈಮ್ ಇಂಟೆಲಿಜನ್ಸ್ ಯುನಿಟ್ ಗೆ ವರ್ಗಾವಣೆ ಆಗಿದೆ. ಹೃತಿಕ್ ಮನವಿ ಮೇರೆಗೆ ಈ ರೀತಿ ವರ್ಗಾವಣೆ ಮಾಡಲಾಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಕಂಗನಾ ಟ್ವೀಟ್ ಮಾಡಿದ್ದು ಹೃತಿಕ್ ವಿರುದ್ಧ ಗುಡುಗಿದ್ದಾರೆ.

  ಹೃತಿಕ್ ಬಗ್ಗೆ ಕಂಗನಾ ಟ್ವೀಟ್

  ಹೃತಿಕ್ ಬಗ್ಗೆ ಕಂಗನಾ ಟ್ವೀಟ್

  'ಅವನ ಕಣ್ಣೀರಿನ ಕಥೆ ಪ್ರಾರಂಭವಾಯ್ತು. ನಮ್ಮ ಬ್ರೇಕಪ್, ಆತನ ವಿಚ್ಛೇದನ ಆಗಿ ವರ್ಷಗಳೇ ಕಳೆದಿವೆ. ಆದರೆ ಅದನ್ನೆಲ್ಲ ಮರೆತು ಮುಂದುವರಿಯಲು ಆತ ತಯಾರಿಲ್ಲ. ಬೇರೆ ಮಹಿಳೆ ಜೊತೆ ಡೇಟಿಂಗ್ ಮಾಡಲು ಆತ ಸಿದ್ಧನಿಲ್ಲ. ನಾನು ನನ್ನ ವೈಯಕ್ತಿಕ ಬದುಕಿನಲ್ಲಿ ಭರವಸೆ ಕಂಡುಕೊಳ್ಳುತ್ತಿರುವಾಗಲೇ ಅವನು ಅದೇ ಹಳೇ ಡ್ರಾಮ ಶುರು ಮಾಡಿದ್ದಾನೆ. ಒಂದು ಸಣ್ಣ ಅಫೇರ್ ಗಾಗಿ ಇನ್ನೂ ಎಲ್ಲಿಯವರೆಗೆ ಅಳುತ್ತೀಯಾ ಹೃತಿಕ್?' ಎಂದು ಕಂಗನಾ ಪ್ರಶ್ನಿಸಿದ್ದಾರೆ.

  ಭಾವನಾತ್ಮಕ ಟ್ವೀಟ್‌ನೊಂದಿಗೆ 'ತಲೈವಿ' ಮುಗಿಸಿದ ಕಂಗನಾ ರಣೌತ್ಭಾವನಾತ್ಮಕ ಟ್ವೀಟ್‌ನೊಂದಿಗೆ 'ತಲೈವಿ' ಮುಗಿಸಿದ ಕಂಗನಾ ರಣೌತ್

  ಹೃತಿಕ್ ವಿರುದ್ಧ ಆರೋಪ ಮಾಡಿದ್ದ ಕಂಗನಾ

  ಹೃತಿಕ್ ವಿರುದ್ಧ ಆರೋಪ ಮಾಡಿದ್ದ ಕಂಗನಾ

  ಹೃತಿಕ್ ವಿರುದ್ಧ ಕಂಗನಾ ಹಲವು ಆರೋಪಗಳನ್ನು ಹೊರಿಸಿದ್ದರು. ತಮ್ಮ ಜೊತೆ ಹೃತಿಕ್ ತುಂಬಾ ಆಪ್ತವಾಗಿದ್ದರು, ಪ್ರೀತಿಯಲ್ಲಿದ್ದೆವು ಆದರೆ ಹೃತಿಕ್ ಮೋಸ ಮಾಡಿದರು ಎಂದು ಹೃತಿಕ್ ವಿರುದ್ಧ ಕಿಡಿದೆದಿದ್ದರು. ಇದೆಲ್ಲ ಆಗಿ ವರ್ಷಗಳೇ ಆಗಿದೆ. ಆದರೂ ಕಂಗನಾ ಹೃತಿಕ್ ಕೆಣಕುವುದನ್ನು ನಿಲ್ಲಿಸಿಲ್ಲ.

  ಚಿರು ಅಣ್ಣ ಹೇಳಿದ್ದಕ್ಕೆ ನಾನು ಹಾಡು ಬರೆಯೋಕೆ ಸ್ಟಾರ್ಟ್ ಮಾಡಿದ್ದು | Chetan Kumar | Filmibeat Kannada
  ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ

  ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ

  ಹೃತಿಕ್ ಮತ್ತು ಕಂಗನಾ ಇಬ್ಬರು ಕ್ರಿಷ್-3 ಮತ್ತು ಕೈಟ್ಸ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಮಾಡುವ ಸಮಯದಲ್ಲಿ ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಕಂಗನಾ ಹೇಳುವ ಪ್ರಕಾರ ಇಬ್ಬರು ಪ್ರೀತಿಯಲ್ಲಿದ್ದರು. ಬಳಿಕ ಏನಾಯಿತೋ ಈ ಜೋಡಿ ದೂರ ದೂರ ಆಗಿದ್ದಲ್ಲದೆ, ದೊಡ್ಡ ಮಟ್ಟಕ್ಕೆ ಕಿತ್ತಾಡಿಕೊಂಡು ಅಚ್ಚರಿ ಮಡಿಸಿದ್ದರು.

  English summary
  Kangana Ranaut reacts to Hrithik Roshan's Legal Movie, says when will you stop crying.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X