»   » ಸದ್ದಿಲ್ಲದಂತೆ ಕರೀನಾ ವಿವಾಹ ಆಹ್ವಾನ ಪತ್ರಿಕೆ ವಿತರಣೆ

ಸದ್ದಿಲ್ಲದಂತೆ ಕರೀನಾ ವಿವಾಹ ಆಹ್ವಾನ ಪತ್ರಿಕೆ ವಿತರಣೆ

Posted By:
Subscribe to Filmibeat Kannada
ತಾರೆ ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ಅವರ ಮದುವೆ ಸಿದ್ಧತೆಗಳು ಸದ್ದಿಲ್ಲದಂತೆ ನಡೆಯುತ್ತಿವೆ. ಬಾಲಿವುಡ್ ನಲ್ಲಿ ಎಲ್ಲರೂ ಕಾತುರದಿಂದ ಎದುರು ನೋಡುತ್ತಿರುವ ಮದುವೆ ಇದಾಗಿದ್ದು ಕರೀನಾಗೆ ಪಟೌಡಿ ಕುಟುಂಬದ ಬೇಗಂ ಆಗಲಿರುವ ಅಮೃತ ಘಳಿಗೆ ಬಂದೇ ಬಿಟ್ಟಿದೆ.

ಬಾಲಿವುಡ್ ನಿಂದ ಇದೀಗ ತಾನೆ ಬಂದ ಗರಮಾ ಗರಂ ನ್ಯೂಸ್... ಇವರಿಬ್ಬರು ಅಕ್ಟೋಬರ್ 17ರಂದು ಹಾರ ಬದಲಾಯಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಅಕ್ಟೋಬರ್ 18ರಂದು ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದೆ. ಇದಿಷ್ಟೇ ಅಲ್ಲದೆ ವಿವಾಹ ಆಹ್ವಾನ ಪತ್ರಿಕೆಯನ್ನು ಸೈಫ್ ಅವರ ತಾಯಿ ಶರ್ಮಿಳಾ ಠಾಗೋರ್ ತಮ್ಮ ಬಂಧು ಬಾಂಧವರಿಗೆ ಈಗಾಗಲೆ ಹಂಚಿಯಾಗಿದೆಯಂತೆ.

ಬಾಲಿವುಡ್ ನಲ್ಲಿ ನಡೆಯುತ್ತಿರುವ ರಾಯಲ್ ಮದುವೆ ಇದಾಗಿದ್ದು, ಸೈಫ್ ಮತ್ತು ಕರೀನಾ ಮದುವೆ ಪಟೌಡಿ ಪ್ಯಾಲೇಸ್ ನಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಇತ್ತೀಚೆಗೆ ಕರೀನಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಮ್ಮ ಮದುವೆ ಬಗ್ಗೆ ಸಣ್ಣ ಸುಳಿವು ನೀಡಿದ್ದರು.

ಇದೇ ವರ್ಷ ತಾವು ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿರುವುದಾಗಿ ತಿಳಿಸಿದ್ದರು. ಆದರೆ ಅಕ್ಟೋಬರ್ ತಿಂಗಳಲ್ಲೇ ತಾವು ಸೈಫ್ ಕೈಹಿಡಿಯುತ್ತಿರುವ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಈಗ ಬಾಲಿವುಡ್‌ನ ರೊಮ್ಯಾಂಟಿಕ್ ಜೋಡಿಯ ನಿಖಾ ಪಕ್ಕಾ ಆಗಿದೆ.

2012ರ ಜನವರಿ ತಿಂಗಳಲ್ಲೇ ಕರೀನಾ ದುಬಾರಿ ಬೆಲೆಯ ನೆಕ್ಲೇಸ್ ಕೂಡ ಮಾಡಿಸಿಕೊಂಡಿದ್ದರು. ವಿಶೇಷವಾಗಿ ವಿನ್ಯಾಸ ಮಾಡಿಸಿದ್ದ ಸುಮಾರು ರು.40 ಲಕ್ಷ ಬೆಲೆಯ ಈ ನೆಕ್ಲೇಸ್ ಕರೀನಾರ ಹೊಕ್ಕಳು ದಾಟುವಷ್ಟು ಉದ್ದವಾಗಿದೆ ಎಂದು ಬಾಲಿವುಡ್‌ ಜನ ತಮಾಷೆ ಮಾಡಿದ್ದರು. [ಮದುವೆ ಕೊಲ್ಲುವ ಪ್ಯಾರಲಲ್ ಲೈಫ್ ಕಾಯಿಲೆ!]

ಮದುವೆ ನಂತರ ಮಧುಚಂದ್ರಕ್ಕೆ ಸೂಕ್ತ ಸ್ಥಳ ಆಯ್ಕೆ ಹುಡುಕಾಟ ಜಾರಿಯಲ್ಲಿದೆಯಂತೆ. ಕರೀನಾಳಿಗೆ ಲಿವ್ ಇನ್ ಸಂಬಂಧದಲ್ಲೇ ಕಾಲದೂಡುವುದಕ್ಕಿಂತ ಮದುವೆಯಾಗುವುದೇ ಸರಿ ಎನಿಸಿ ಬೇಗ ಮದುವೆಯಾಗೋಣ ಬಾ ಎಂದು ಸೈಫ್ ಗೆ ದುಂಬಾಲು ಬಿದ್ದ ಪರಿಣಾಮ, ಮದುವೆ ಆತುರಾತುರವಾಗಿ ತಯಾರಿ ನಡೆದಿದೆ. (ಏಜೆನ್ಸೀಸ್)

English summary
Kareena Kapoor and Saif Ali Khan's wedding is the most awaited event of Bollywood. It has been reported that the couple is marrying on 17 October this year and the reception will take place on 18 October. Not only this, Sharmila Tagore has already started distributing the wedding cards of Saif and Kareena's wedding.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada