For Quick Alerts
  ALLOW NOTIFICATIONS  
  For Daily Alerts

  ಕರೀನಾ ಕಪೂರ್ ಬೇಬಿ ಬಂಪ್ ಫೋಟೋ ವೈರಲ್: 2ನೇ ಮಗು ಆಗಮನ ಯಾವಾಗ?

  |

  ಬಾಲಿವುಡ್ ನ ಖ್ಯಾತ ನಟಿ ಕರೀನಾ ಕಪೂರ್ ಸದ್ಯ ಎರಡನೇ ಮಗುವಿನ ಆಗಮನಕ್ಕೆ ಕಾಯುತ್ತಿದ್ದಾರೆ. ಹೌದು, ನಟಿ ಕರೀನಾ ಕಪೂರ್ ಎರಡನೇ ಬಾರಿ ಗರ್ಭಿಣಿಯಾಗಿದ್ದಾರೆ. ಈಗಾಗಲೇ ಕರೀನಾ ಮತ್ತು ಸೈಫ್ ದಂಪತಿಗೆ ಒಬ್ಬ ಗಂಡು ಮಗುವಿದ್ದು, ಮಗನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಿದ್ದಾರೆ.

  ಇದೀಗ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಕರೀನಾ ಇತ್ತೀಚಿಗೆ ತನ್ನ ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕರೀನಾ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಕರೀನಾ ಫೋಟೋಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

  ಎರಡನೇ ಮಗುವಿಗೆ ಹೆಸರು: ಕರೀನಾ-ಸೈಫ್ ಕೊಡ್ತಾರಂತೆ ಸರ್ಪ್ರೈಸ್

  ಕರೀನಾ ಫೋಟೋ ಶೇರ್ ಮಾಡಿ, ನಾವು ಇಬ್ಬರು ಸೆಟ್ ನಲ್ಲಿ ಇದ್ದೀವಿ ಎಂದು ಬರೆದುಕೊಂಡಿದ್ದಾರೆ. ಕರೀನಾ ಫೋಟೋ ಶೇರ್ ಮಾಡಿ, ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಪೂರ್ತಿದಾಯಕ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ಕರೀನಾ ಕಪೂರ್ ಮಾರ್ಚ್ ತಿಂಗಳಲ್ಲಿ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಮನೆಗೆ ಹೊಸ ಸದಸ್ಯರ ಆಗಮನಕ್ಕೆ ಇನ್ನು 3 ತಿಂಗಳು ಬಾಕಿಯಿದೆಯಷ್ಟೆ.

  ಎರಡನೇ ಮಗುವಿನ ಆಗಮನದ ಬಗ್ಗೆ ಕರೀನಾ ಕಪೂರ್ ಆಗಸ್ಟ್ ನಲ್ಲಿ ಬಹಿರಂಗ ಪಡಿಸಿದ್ದರು. ನಮ್ಮ ಕುಟುಂಬಕ್ಕೆ ಮತ್ತೊಬ್ಬ ಸದಸ್ಯನ ಆಗಮನವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

  ರಿಲೀಸ್ ಆಯ್ತು ಇಂದ್ರಜಿತ್ ಲಂಕೇಶ್ Shakeela ಟ್ರೈಲರ್ | Filmebeat Kannada

  ನಟಿ ಕರೀನಾ ಕಪೂರ್ ಕೊನೆಯಾದಾಗಿ ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಚಿತ್ರೀಕರಣ ಬಾಕಿ ಇರುವಾಗಲೇ ಕರೀನಾ ಗರ್ಭಿಣಿಯಾಗಿದ್ದರು. ಲಾಕ್ ಡೌನ್ ಬಳಿಕ ಕರೀನಾ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಾಕಷ್ಟು ಮುನ್ನೆಚ್ಚರಿಕೆಯ ನಡುವೆ ಚಿತ್ರೀಕರಣ ಮುಗಿಸಿದ್ದರು.

  English summary
  Bollywood Actress Kareena Kapoor shares her baby Bump photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X