For Quick Alerts
  ALLOW NOTIFICATIONS  
  For Daily Alerts

  'ಮಾಷಾ ಅಲ್ಲಾ' ಎಂದು ಸೊಂಟ ಬಳುಕಿಸಿದ ಕತ್ರಿನಾ

  By Rajendra
  |

  ಬಾಲಿವುಡ್ ಮೋಹಕ ಬೆಡಗಿ ಕತ್ರಿನಾ ಕೈಫ್ ಐಟಂ ಹಾಡುಗಳಲ್ಲಿ ಈಗಾಗಲೆ ತಮ್ಮ ಖದರ್ ಏನೆಂದು ತೋರಿಸಿದ್ದಾರೆ. 'ಶೀಲಾ ಕಿ ಜವಾನಿ' ಹಾಗೂ 'ಚಿಕ್ನಿ ಚಮೋಲಿ' ಹಾಡುಗಳೇ ಇದಕ್ಕೆ ಸಾಕ್ಷಿ. ಈಗ ಮತ್ತೊಂದು ಖತರ್ನಾಕ್ ಐಟಂ ಹಾಡಿನ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  ಸಲ್ಮಾನ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಏಕ್ತಾ ಟೈಗರ್ ಚಿತ್ರಕ್ಕಾಗಿ ಈ ವಿಶೇಷ ಹಾಡನ್ನು ತೆಗೆಯಲಾಗಿದೆ. ಇದಕ್ಕಾಗಿ ಕತ್ರಿನಾ ವಿಶೇಷವಾಗಿ ಬೆಲ್ಲಿ ಡಾನ್ಸ್ ತರಬೇತಿ ಪಡೆದಿದ್ದಾರೆ. ಈ ಚಿತ್ರದ "ಮಾಷಾ ಅಲ್ಲಾ" ಎಂಬ ಹಾಡಿನಲ್ಲಿ ಮಸ್ತ್ ಡಾನ್ಸ್ ಮಾಡಿದ್ದಾರೆ ಎಂಬ ಮಾತುಗಳು ಬಾಲಿವುಡ್ ವಲಯದಿಂದ ಕೇಳಿಬಂದಿವೆ.

  ಕಬೀರ್ ಖಾನ್ ನಿರ್ದೇಶನದ ಈ ಚಿತ್ರದ ಐಟಂ ಹಾಡು ಭಾರಿ ಸದ್ದು ಮಾಡುವುದು ಗ್ಯಾರಂಟಿ ಎನ್ನಲಾಗಿದೆ. ಈಗಾಗಲೆ ಸಾಮಾಜಿಕ ವಿಡಿಯೋ ತಾಣ ಯೂಟ್ಯೂಬ್ ಸೇರಿರುವ ಈ ಹಾಡು ಅಲ್ಲಿ ಹವಾ ಎಬ್ಬಿಸುತ್ತಿದೆ. ಸಲ್ಲು ಮತ್ತು ಕತ್ರಿನಾ ಮತ್ತೆ ಯಶಸ್ವಿ ಜೋಡಿ ಅನ್ನಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ.

  'ಏಕ್ತಾ ಟೈಗರ್' ಚಿತ್ರದಲ್ಲಿ ಕತೆ ಎಷ್ಟು ಮುಖ್ಯವೋ ಈ ಹಾಡಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆಯಂತೆ. ಕತ್ರಿನಾ ಮೋಹಕ ಕುಣಿತಕ್ಕೆ ಕ್ಲೀನ್ ಬೌಲ್ಡ್ ಆಗಿರುವುದಾಗಿ ಸ್ವತಃ ಸಲ್ಲು ಹೇಳಿಕೊಂಡಿದ್ದಾನೆ. "ಮಾಷಾ ಅಲ್ಲಾ..." ಎಂಬ ಹಾಡು ವಾಜಿದ್ ಆಲಿ ಹಾಗೂ ಶ್ರೇಯಾ ಘೋಶಾಲ್ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿದ್ದು ಸೊಹೈಲ್ ಸೇನ್ ಸಂಗೀತ ಸಂಯೋಜಿಸಿದ್ದಾರೆ.

  ಆಗಸ್ಟ್ 15ರಂದು ಬಿಡುಗಡೆಗೆ ಸಿದ್ಧವಾಗಿರುವ ಏಕ್ತಾ ಟೈಗರ್ ಚಿತ್ರ ಒಂದು ರೊಮ್ಯಾಂಟಿಕ್ ಥ್ರಿಲ್ಲರ್ ಆಗಿದೆ. ಎರಡು ಗುಪ್ತಚರ ಇಲಾಖೆಗಳ ಸುತ್ತ ಚಿತ್ರದ ಕತೆ ಸುತ್ತುತ್ತದೆ. ಅವು ಭಾರತದ RAW (Research and Analysis Wing) ಹಾಗೂ ಪಾಕಿಸ್ತಾನದ ISI (Inter-Services Intelligence). ಅದರಲ್ಲೂ ಪಾಕಿಸ್ತಾನದ ಐಎಸ್ಐ ಸಂಸ್ಥೆಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಪಾಕ್ ಭಾವಿಸಿದೆ.

  ಟ್ರಿನಿಟಿ ಕಾಲೇಜಿನ ಪ್ರೊಫೆಸರ್ ಭಾರತದ ಕ್ಷಿಪಣಿ ತಂತ್ರಜ್ಞಾನವನ್ನು ಪಾಕ್ ಗೆ ರಹಸ್ಯವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಗುಪ್ತ ಮಾಹಿತಿ ಸಿಗುತ್ತದೆ. ಇದನ್ನು ತನಿಖೆ ಮಾಡಲು ಸರ್ಕಾರ ಸೀಕ್ರೆಟ್ ಏಜೆಂಟ್ ಟೈಗರ್ (ಸಲ್ಮಾನ್ ಖಾನ್) ಕಳುಹಿಸುತ್ತದೆ.

  ಆದರೆ ಟೈಗರ್ ತನಿಖೆ ಮಾಡ ಮಾಡುತ್ತಾ ಬಂಗಾರ ಜಿಂಕೆಯ ಪ್ರೇಮದ ಬಲೆಗೆ ಬೀಳುತ್ತಾನೆ. ಆ ಬಂಗಾರದ ಜಿಂಕೆ ಬೇರಾರು ಅಲ್ಲ ಪ್ರೊಫೆಸರ್ ಮಗಳು (ಕತ್ರಿನಾ ಕೈಫ್). ಟೈಗರ್ ಕತೆ ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ಚಿತ್ರ ಸಾಗುತ್ತದೆ. (ಏಜೆನ್ಸೀಸ್)

  English summary
  Actress Katrina Kaif has rocked the viewers with her dance moves in hit item numbers like 'Sheila Ki Jawani' and 'Chikni Chameli'. The Bollywood star has come back with another sensuous number in Salman Khan's upcoming movie Ek Tha Tiger.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X