»   » ತಾರೆ ಕತ್ರಿನಾ ಕೈಫ್ ಹಣೆ ಮೇಲೆ ಮುತ್ತೈದೆ ಕುಂಕುಮ!

ತಾರೆ ಕತ್ರಿನಾ ಕೈಫ್ ಹಣೆ ಮೇಲೆ ಮುತ್ತೈದೆ ಕುಂಕುಮ!

By: ರವಿಕಿಶೋರ್
Subscribe to Filmibeat Kannada

ಈ ಚಿತ್ರ ನೋಡಿದರೆ ಇಸ್ಲಾಂ ಧರ್ಮಗುರುಗಳು ತಾರೆ ಕತ್ರಿನಾ ಕೈಫ್ ಮೇಲೆ ಫತ್ವಾ ಹೊರಡಿಸಲೂಬಹುದು. ಆದರೆ ಚಿತ್ರವಿನ್ನೂ ಅವರ ಕಣ್ಣಿಗೆ ಬಿದ್ದಿಲ್ಲ. ಇನ್ನು ಮುಂದೆ ಬೀಳಲೂ ಬಹುದು! ಇರಲಿ ಇನ್ನು ಈ ಚಿತ್ರದ ವಿಚಾರಕ್ಕೆ ಬಂದರೆ, ಸಲ್ಲು ಇಟ್ಟಿದ ತಿಲಕವಂತೂ ಇದಲ್ಲ.

ಈ ಫೋಟೋ ನೋಡಿದವರಿಗೆ ಸಡನ್ ಆಗಿ ಒಂದು ಡೌಟೂ ಬರುತ್ತದೆ. ಕತ್ರಿನಾ ಏನಾದರೂ ಗುಟ್ಟಾಗಿ ತಾಳಿಕಟ್ಟಿಸಿಕೊಂಡರೆ? ಎಲ್ಲಾದರೂ ಉಂಟೇ. ಇತ್ತೀಚೆಗೆ ಕತ್ರಿನಾ ತಮ್ಮ ಮ್ಯಾನೇಜರ್ ಅವರ ಮನೆಗೆ ಭೇಟಿ ನೀಡಿದ್ದರಂತೆ.


ಅವರ ಮ್ಯಾನೇಜರ್ ರೇಷ್ಮಾ ಶೆಟ್ಟಿ ಅವರ ಮನೆಯಲ್ಲಿ ಅದ್ಯಾವುದೋ ಧಾರ್ಮಿಕ ಕಾರ್ಯಕ್ರಮ ನಡೆದಿದೆ. ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಾದ ಮೇಲೆ ಅವರ ಹಣೆಗೆ ಕುಂಕುಮವಿಟ್ಟು ಶೀಘ್ರಮೇವ ವಿವಾಹ ಪ್ರಾಪ್ತಿರಸ್ತು ಎಂದಿದ್ದಾರೆ ಅರ್ಚಕರು.

ಅಷ್ಟೆ ನಡೆದಿರುವುದು. ಈ ಕುಂಕುಮವನ್ನು ಅಳಿಸಿ ಹೋಗುವುದಕ್ಕೂ ಮನ್ನ ಛಾಯಾಗ್ರಾಹಕರು ಕ್ಲಿಕ್ಕಿಸಿದ್ದಾರೆ. 'ಏಕ್ ಥಾ ಟೈಗರ್' ಚಿತ್ರದ ವಿಶೇಷ ಪ್ರದರ್ಶನಕ್ಕೂ ಕತ್ರಿಕಾ ಕೈಫ್ ಇದೇ ಗೆಟಪ್ ನಲ್ಲಿ ಆಗಮಿಸಿದ್ದರಂತೆ. ಅಲ್ಲೂ ಅಷ್ಟೇ ಕ್ಯಾಮೆರಾಗಳು ಫಳಫಳ ಎಂದಿವೆ.

ಕಬೀರ್ ಖಾನ್ ನಿರ್ದೇಶನದ ಏಕ್ ಥಾ ಟೈಗರ್ ಚಿತ್ರ ಬಾಕ್ಸಾಫೀಸಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ನಾಲ್ಕು ವರ್ಷಗಳ ಬಳಿಕ ಕತ್ರಿನಾ ಹಾಗೂ ಸಲ್ಮಾನ್ ಜೊತೆಯಾಗಿ ಅಭಿನಯಿಸಿರುವ ಚಿತ್ರವಿದು. 2008ರಲ್ಲಿ ತೆರೆಕಂಡ ಯುವರಾಜ್ ಚಿತ್ರ ಇವರಿಬ್ಬರೂ ಜೊತೆಯಾಗಿ ಅಭಿನಯಿಸಿದ ಚಿತ್ರ. ಅದಾದ ಬಳಿಕ ಇಬ್ಬರೂ ನಾನೊಂದು ತೀರ ನೀನೊಂದು ತೀರ ಎಂಬಂತಾಗಿದ್ದರು.

'ಏಕ್ ಥಾ ಟೈಗರ್' ಚಿತ್ರದ ಕಲೆಕ್ಷನ್ಸ್ 'ಅಗ್ನಿಪಥ್' ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ. 'ಅಗ್ನಿಪಥ್' ಚಿತ್ರವು ಮೊದಲ ದಿನ ರು. 25 ಕೋಟಿ ಗಳಿಸಿತ್ತು. ಆದರೆ ಸಲ್ಲೂರ 'ಏಕ್ ಥಾ ಟೈಗರ್' ಚಿತ್ರವು ಮೊದಲ ದಿನ ರು. 29 ರಿಂದ 30 ಕೋಟಿ ಗಳಿಸಿ 'ಅಗ್ನಿಪಥ್' ದಾಖಲೆಯನ್ನು ಧೂಳಿಪಟ ಮಾಡಿದೆ. ನಿರೀಕ್ಷೆ ಮೀರಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. (ಏಜೆನ್ಸೀಸ್)

English summary
Recently actress Katrina Kaif had visited her manager Reshma Shetty's religious gathering at home, when the priest applied sindoor to her forehead. Later, the picture was clicked at the private screening of Ek Tha Tiger at YRF studios and Ketnav cinema.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada