For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ನನ್ನು ಮದುವೆ ಆಗ್ತೀನಿ ಎಂದ 'ಆದಿಪುರುಷ್' ನಾಯಕಿ ಕೃತಿ ಸನೂನ್

  By ಫಿಲ್ಮಿಬೀಟ್ ಡೆಸ್ಕ್
  |

  ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಂದರೆ ಯಾರಿಗೆತಾನೆ ಇಷ್ಟವಿಲ್ಲ. ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ಸೌತ್ ಸ್ಟಾರ್ ಪ್ರಭಾಸ್ ಅಂದ್ರೆ ಅನೇಕ ನಟಿಮಣಿಯರು ತುಂಬಾ ಇಷ್ಟ ಪಡುತ್ತಾರೆ. ಇದೀಗ ಬಾಲಿವುಡ್ ನಟಿ ಕೃತಿ ಸನೂನ್, ತೆಲುಗು ಸ್ಟಾರ್ ಪ್ರಭಾಸ್ ಅವರನ್ನು ಮದುವೆಯಾಗುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.

  ಕೃತಿ ಸದ್ಯ ಮಿಮಿ ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಮಿಮಿ ಸಿನಿಮಾ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಮಸುಂದರಿಯಾಗಿ ಬಾಲಿವುಡ್ ನಲ್ಲಿ ಹವಾ ಕ್ರಿಯೇಟ್ ಮಾಡಿರುವ ಕೃತಿಗೆ ಅನೇಕರು ಫಿದಾ ಆಗಿದ್ದಾರೆ. ಮಿಮಿ ಸಿನಿಮಾದ ಸಕ್ಸಸ್ ಜೊತೆಗೆ ಕೃತಿ ನಟ ಪ್ರಭಾಸ್ ಜೊತೆ ಆದಿಪುರುಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಅನೇಕ ತಿಂಗಳಾಗಿದೆ. ಕೊರೊನಾದಿಂದ ಚಿತ್ರೀಕರಣ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಶೂಟಿಂಗ್ ಪ್ರಾರಂಭ ಮಾಡಿದ್ದು, ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ.

  ಈ ಸಿನಿಮಾದಲ್ಲಿ ಕೃತಿ ಸೀತೆಯಾಗಿ ಮಿಂಚುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ಬಣ್ಣ ಹಚ್ಚಿದ್ದಾರೆ. ದೊಡ್ಡ ತಾರಾಬಳಗವಿರುವ ಈ ಸಿನಿಮಾಗೆ ಬಾಲಿವುಡ್ ನಿರ್ದೇಶಕ ಓಂ ರಾವತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಇತ್ತೀಚಿಗೆ ಪ್ರಭಾಸ್ ಬಗ್ಗೆ ಮಾತನಾಡಿರುವ ಕೃತಿ, ಪ್ರಭಾಸ್ ನನ್ನು ಮದುವೆಯಾಗುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಕೃತಿಗೆ ರ್ಯಾಪಿಡ್ ಫೈರ್ ಪ್ರಶ್ನೆಗಳು ಎದುರಾಗಿದ್ದವು. ಈ ಸಮಯದಲ್ಲಿ ಕೃತಿ ಪ್ರಭಾಸ್ ಹೆಸರು ಹೇಳಿದ್ದಾರೆ. ಯಾರನ್ನು ಮದುವೆ ಆಗುತ್ತೀರಿ, ಯಾರ ಜೊತೆ ಫ್ಲರ್ಟ್ ಮಾಡುತ್ತೀರಿ ಮತ್ತು ಯಾರ ಜೊತೆ ಡೇಟಿಂಗ್ ಮಾಡುತ್ತೀರಿ ಎಂದು ನಿರೂಪಕರು ಕೇಳಿದ ಪ್ರಶ್ನೆಗೆ ಕೃತಿ, ತಕ್ಷಣಕ್ಕೆ ಪ್ರಭಾಸ್ ಅವರನ್ನು ಮದುವೆ ಆಗುವುದಾಗಿ ಹೇಳಿದ್ದಾರೆ.

  ಇನ್ನು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಫ್ಲರ್ಟ್ ಮಾಡುತ್ತಾರಂತೆ. ಮತ್ತೋರ್ವ ನಟ ಟೈಗರ್ ಶ್ರಾಫ್ ಜೊತೆ ಡೇಟಿಂಗ್ ಮಾಡುವುದಾಗಿ ಕೃತಿ ಹೇಳಿದ್ದಾರೆ. ಕೃತಿ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪ್ರಭಾಸ್ ಮತ್ತು ಕೃತಿ ಫೋಟೋ ಶೇರ್ ಮಾಡಿ ಉತ್ತಮ ಜೋಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಪ್ರಭಾಸ್ ಕಡೆಯಿಂದ ಯಾವ ಉತ್ತರ ಬರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

  ಕೃತಿ ಸನೂನ್ ಗೆ ತೆಲುಗು ಸಿನಿಮಾರಂಗ ಹೊಸದಲ್ಲ. ಬಣ್ಣದ ಲೋಕದ ಪಯಣ ಪ್ರಾರಂಭ ಮಾಡಿದ್ದೇ ತೆಲುಗು ಸಿನಿಮಾರಂಗದಿಂದ. ಬಳಿಕ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದ ಕೃತಿ ಇದೀಗ ಮತ್ತೆ ಸೌತ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.

  ಇನ್ನು ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾ ಮುಂದಿನ ವರ್ಷ 2022ಗೆ ಬಿಡುಗಡೆಯಾವುದಾಗಿ ಸಿನಿಮಾತಂಡ ಅಧಿಕೃತವಾಗಿ ಬಹಿರಂಗ ಪಡಿಸಿದೆ. ಮುಂದಿನ ವರ್ಷ ಆಗಸ್ಟ್ 11ಕ್ಕೆ ವರ್ಲ್ಡ್ ವೈಡ್ ಬಿಡುಗಡೆಯಾಗುವುದಾಗಿ ಘೋಷಣೆ ಮಾಡಿದೆ. ಪ್ಲಾನ್ ಇಂಡಿಯಾ ಸಿನಿಮಾವಾಗಿದ್ದು, ಭಾರತ ಅನೇಕ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಇನ್ನು ಮುಂಚಿತವಾಗಿಯೇ ಬಿಡುಗಡೆ ಆಗುತ್ತಿತ್ತು. ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿದೆ.

  ಆದಿಪುರುಷ್ ಒಟ್ಟು 400-450 ಕೋಟಿ ಬಜೆಟ್ ನಲ್ಲಿ ಮೂಡಿಬರುತ್ತಿದೆ ಎಂದು ಅಂದಾಜಿಸಲಾಗಿದೆ. ಒಟ್ಟು ಬಂಡವಾಳದ ಅರ್ಧದಷ್ಟು ಹಣ ಸಂಭಾವನೆಯಿಂದ ಕೂಡಿದೆ. ವಿಎಫ್ ಎಕ್ಸ್‌ಗಾಗಿ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಆದಿಪುರುಷ್ ಶೂಟಿಂಗ್ ಪ್ರಾರಂಭವಾಗಿತ್ತು. ಕೋವಿಡ್ ಎರಡನೇ ಅಲೆ ಹಿನ್ನೆಲೆ ಅನಿರೀಕ್ಷಿತವಾಗಿ ಚಿತ್ರೀಕರಣ ನಿಲ್ಲಿಸಬೇಕಾಯಿತು. ಈ ಸಿನಿಮಾ ಜೊತೆಗೆ ಪ್ರಭಾಸ್ ಸಲಾರ್, ಆದಿಪುರುಷ್ ಬಿಟ್ಟು ನಾಗ್ ಅಶ್ವಿನ್ ಜೊತೆ 21ನೇ ಚಿತ್ರದಲ್ಲಿ ಪ್ರಭಾಸ್ ನಟಿಸಲಿದ್ದಾರೆ.

  English summary
  Bollywood Actress Kriti Sanon says She would like to marry Telugu Actor Prabhas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X