For Quick Alerts
  ALLOW NOTIFICATIONS  
  For Daily Alerts

  'ನೈಟಿ'ಯಲ್ಲಿ ನೋಡಬೇಕು ಅಂತ ನಟಿಗೆ ಡಿಮ್ಯಾಂಡ್ ಮಾಡಿದ್ನಂತೆ 'ಆ' ನಿರ್ದೇಶಕ!

  By Harshitha
  |

  ಚಿತ್ರರಂಗ ತುಂಬಾನೇ ಕಲರ್ ಫುಲ್.. ಬಣ್ಣದ ಲೋಕ ಎಷ್ಟೊಂದು ಸುಂದರ ಅಂತ ಭಾವಿಸುವವರಿಗೆ, ಗ್ಲಾಮರ್ ಜಗತ್ತಿನ ಕರಾಳ ಮುಖದ ಪರಿಚಯ ಇರಲಿಕ್ಕಿಲ್ಲ. ಬಣ್ಣ ಹಚ್ಚಿಕೊಂಡು, ಅಭಿನಯ ಮಾಡಿ, ಜನಪ್ರಿಯತೆ ಪಡೆಯಬೇಕು ಅಂತ ಆಸೆ ಪಡುವ ಅದೆಷ್ಟೋ ಹೆಣ್ಮಕ್ಕಳಿಗೆ ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್' ಅನುಭವ ಆಗಿರುತ್ತೆ.

  'ಕಾಸ್ಟಿಂಗ್ ಕೌಚ್' ವಿರುದ್ದ ಶ್ರೀರೆಡ್ಡಿ ಸಿಡಿದೆದ್ದು ನಿಂತ ಮೇಲೆ, ಬಹುತೇಕ ನಟಿಯರು ತಮಗಾದ 'ಕೆಟ್ಟ' ಅನುಭವವನ್ನ ಬಿಚ್ಚಿಡಲು ಶುರು ಮಾಡಿದ್ದಾರೆ.

  ಬಾಲಿವುಡ್ ನಟಿ ಮಾಹಿ ಗಿಲ್ ಕೂಡ 'ಕಾಸ್ಟಿಂಗ್ ಕೌಚ್'ನಿಂದ ಹೊರತಾಗಿಲ್ಲ. 'ದೇವ್ ಡಿ', 'ಗುಲಾಲ್', 'ದಬ್ಬಂಗ್', 'ವೆಡ್ಡಿಂಗ್ ಆನಿವರ್ಸರಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಮಾಹಿ ಗಿಲ್, ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗ ಎದುರಿಸಿದ ಸಂಕಷ್ಟಗಳ ಬಗ್ಗೆ ಇದೀಗ ಮೌನ ಮುರಿದಿದ್ದಾರೆ. ಮುಂದೆ ಓದಿರಿ...

  ಸಲ್ವಾರ್ ಹಾಕೊಂಡು ಬಂದ್ರೆ ಅವಕಾಶ ಕೊಡಲ್ಲ.!

  ಸಲ್ವಾರ್ ಹಾಕೊಂಡು ಬಂದ್ರೆ ಅವಕಾಶ ಕೊಡಲ್ಲ.!

  ''ಅವಕಾಶಗಳು ಸಿಗಬೇಕು ಅಂದ್ರೆ ಕಾಂಪ್ರೊಮೈಸ್ ಆಗಬೇಕು ಎಂಬ ಪದ್ಧತಿ ಖಂಡಿತ ಇದೆ. ಈ ಅನುಭವ ನನಗೂ ಕೆಲವು ಬಾರಿ ಆಗಿದೆ. ನನಗೆ 'ಆ' ನಿರ್ದೇಶಕರ ಹೆಸರು ನೆನಪಿಲ್ಲ. ಆದ್ರೆ, ಅವರನ್ನು ಭೇಟಿ ಮಾಡಲು ಹೋದಾಗ ನಾನು ಸಲ್ವಾರ್ ತೊಟ್ಟಿದ್ದೆ. ಆಗ, ''ಸಲ್ವಾರ್ ಹಾಕೊಂಡು ಬಂದ್ರೆ, ಯಾರೂ ಅವಕಾಶ ಕೊಡಲ್ಲ'' ಅಂತ 'ಆ' ನಿರ್ದೇಶಕ ಕೇವಲವಾಗಿ ಮಾತನಾಡಿದ್ರು'' - ಮಾಹಿ ಗಿಲ್, ನಟಿ

  ಕಾಸ್ಟಿಂಗ್ ಕೌಚ್ ಬಗ್ಗೆ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಹೇಳಿದ್ದೇನು ಗೊತ್ತಾ.?ಕಾಸ್ಟಿಂಗ್ ಕೌಚ್ ಬಗ್ಗೆ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಹೇಳಿದ್ದೇನು ಗೊತ್ತಾ.?

  ನೈಟಿಯಲ್ಲಿ ನೋಡಬೇಕು ಎಂದಿದ್ದರು

  ನೈಟಿಯಲ್ಲಿ ನೋಡಬೇಕು ಎಂದಿದ್ದರು

  ''ಇನ್ನೊಬ್ಬ ನಿರ್ದೇಶಕರ ಬಳಿ ಹೋದಾಗ, ''ನಾನು ನಿಮ್ಮನ್ನ ನೈಟಿಯಲ್ಲಿ ನೋಡಬೇಕು'' ಅಂತ ಕೇಳಿದ್ರು. ಇಂತಹ ಈಡಿಯೆಟ್ ಗಳು ಚಿತ್ರರಂಗದಲ್ಲಿ ಇದ್ದಾರೆ'' - ಮಾಹಿ ಗಿಲ್, ನಟಿ

  ಬಿಬಿಸಿ ವಾಹಿನಿಯಲ್ಲಿ ಬಾಲಿವುಡ್ ನ ಕರಾಳ ಮುಖ ಬಿಚ್ಚಿಡಲಿದ್ದಾರೆ ನಟಿಯರು.!ಬಿಬಿಸಿ ವಾಹಿನಿಯಲ್ಲಿ ಬಾಲಿವುಡ್ ನ ಕರಾಳ ಮುಖ ಬಿಚ್ಚಿಡಲಿದ್ದಾರೆ ನಟಿಯರು.!

  ಯಾರನ್ನ ನಂಬುವುದು.?

  ಯಾರನ್ನ ನಂಬುವುದು.?

  ''ನಾನಾಗ ಮುಂಬೈಗೆ ಹೊಸಬಳು. ಯಾರನ್ನ ನಂಬುವುದು, ಬಿಡುವುದು ಅನ್ನೋದೇ ನನಗೆ ಗೊತ್ತಾಗುತ್ತಿರಲಿಲ್ಲ. ಇದನ್ನೆಲ್ಲ ಹೇಗೆ ಎದುರಿಸುವುದು ಅಂತ ನಾನು ನರ್ವಸ್ ಆಗಿದ್ದೆ. ಕೊನೆಗೆ ನಿರ್ದೇಶಕ/ನಿರ್ಮಾಪಕರನ್ನು ಭೇಟಿ ಮಾಡುವುದನ್ನೇ ನಿಲ್ಲಿಸಿದೆ. ಒಂದು ವೇಳೆ ಮೀಟ್ ಆಗಬೇಕು ಅಂದರೂ, ಸ್ನೇಹಿತರನ್ನು ಜೊತೆಗೆ ಕರ್ಕೊಂಡು ಹೋಗುತ್ತಿದೆ'' - ಮಾಹಿ ಗಿಲ್, ನಟಿ

  'ಕಾಸ್ಟಿಂಗ್ ಕೌಚ್'ನಿಂದ ಕೆಲಸ ಸಿಗುತ್ತೆ: ಸರೋಜ್ ಖಾನ್ ಶಾಕಿಂಗ್ ಹೇಳಿಕೆ!'ಕಾಸ್ಟಿಂಗ್ ಕೌಚ್'ನಿಂದ ಕೆಲಸ ಸಿಗುತ್ತೆ: ಸರೋಜ್ ಖಾನ್ ಶಾಕಿಂಗ್ ಹೇಳಿಕೆ!

  ದೂರದರ್ಶನದ ಸೀರಿಯಲ್ ನಲ್ಲಿ ಅಭಿನಯ

  ದೂರದರ್ಶನದ ಸೀರಿಯಲ್ ನಲ್ಲಿ ಅಭಿನಯ

  ''ನನಗೆ ಹಣದ ಅವಶ್ಯಕತೆ ಇದ್ದ ಕಾರಣ, ದೂರದರ್ಶನದ ಸೀರಿಯಲ್ ಗಳಲ್ಲಿ ಅಭಿನಯಿಸಲು ಶುರು ಮಾಡಿದೆ. ಬಳಿಕ ಬಾಲಿವುಡ್ ನಲ್ಲಿ ಅವಕಾಶ ಸಿಕ್ತು'' ಎಂದು ಸಂದರ್ಶನವೊಂದರಲ್ಲಿ ನಟಿ ಮಾಹಿ ಗಿಲ್ ಹೇಳಿಕೊಂಡಿದ್ದಾರೆ.

  English summary
  Actress Mahie Gill opens about Casting Couch in Bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X